ಕೋವಿಡ್ ರೋಗಿಗಳಿಗೆ ಶೇ.50ರಷ್ಟು ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗೆ ಪ್ರತ್ಯೇಕ ದರ ನಿಗದಿ
ಮೈಸೂರು

ಕೋವಿಡ್ ರೋಗಿಗಳಿಗೆ ಶೇ.50ರಷ್ಟು ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗೆ ಪ್ರತ್ಯೇಕ ದರ ನಿಗದಿ

June 20, 2020

ಬೆಂಗಳೂರು, ಜೂ. 19(ಕೆಎಂಶಿ)- ಸರ್ಕಾರದ ಶಿಫಾರಸ್ಸಿನೊಂದಿಗೆ ಕಳುಹಿಸುವ ಕೊರೊನಾ ರೋಗಿಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಪ್ರತ್ಯೇಕ ದರ ನಿಗದಿಪಡಿಸಿದೆ. ಸಚಿವ ಸಂಪುಟದ ಉಪಸಮಿತಿ ಖಾಸಗಿ ಆಸ್ಪತೆಗಳಲ್ಲೂ ಕೊರೊನಾ ಚಿಕಿತ್ಸೆಗೆ ಅನುಮತಿ ನೀಡುತ್ತಿರುವ ಬೆನ್ನಲೆ ಮೂರು ಪ್ರತ್ಯೇಕ ದರಗಳನ್ನು ನಿಗದಿ ಮಾಡಿದೆ.

ಮುಂದಿನ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ. ಕೊರೊನಾ ಚಿಕಿತ್ಸೆಗಾಗಿ ಸರ್ಕಾರ ನಿಗದಿ ಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟನ್ನು ಸರ್ಕಾರದ ಶಿಫಾರಸ್ಸಿನ ರೋಗಿ ಗಳಿಗೂ, ಉಳಿದಿದ್ದು ಅವರ ನೇರವಾಗಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಚಿಕಿತ್ಸೆ ನೀಡಬಹುದು.

ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಸರ್ಕಾರ ಶಿಫಾ ರಸ್ಸು ಮಾಡುವ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ, ಅಂತಹ ಆಸ್ಪತ್ರೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿದೆ. ಶಿಫಾರಸ್ಸಿನ ಆಸ್ಪತ್ರೆ ಗಳಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಈ ಆಸ್ಪತ್ರೆ ಗಳಲ್ಲಿ ಕಡಿಮೆ ದರ ನಿಗದಿ ಮಾಡಿದ್ದು, ಆ ದರಕ್ಕೆ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ.

ದರದ ಪಟ್ಟಿ: ಸರ್ಕಾರದಿಂದ ಶಿಫಾರಸು ಮಾಡಲ್ಪಟ್ಟ ಫಲಾನುಭವಿಗಳಿಗೆ ಸಾಮಾನ್ಯ ವಾರ್ಡ್‍ಗೆ ರೂ. 5,200, ವಾರ್ಡ್ ಜೊತೆ ಆಕ್ಸಿಜನ್ ರೂ. 7,000, ಐಸಿಯು ರೂ. 8,500, ವೆಂಟಿಲೇಟರ್ ಜೊತೆಗೆ ಐಸಿಯು 10,000 ರೂ. ಸರ್ಕಾರದ ಜೊತೆ ಹಾಸಿಗೆ ಗಳನ್ನು ಹಂಚಿಕೊಂಡಿರುವ ಆಸ್ಪತ್ರೆಗಳಲ್ಲಿ ವಿಮೆ ಮತ್ತು ನಗದು ನೀಡಿ ಚಿಕಿತ್ಸೆ ಪಡೆಯುವ ಫಲಾನು ಭವಿಗಳಿಗೆ ಸಾಮಾನ್ಯ ವಾರ್ಡ್ 10,000 ರೂ., ವಾರ್ಡ್ ಜೊತೆಗೆ ಆಕ್ಸಿಜನ್ ರೂ. 12,000, ಐಸಿಯು ರೂ. 15,000, ವೆಂಟಿಲೇಟರ್ ಜೊತೆಗೆ ಐಸಿಯು ರೂ. 25,000. ಸರ್ಕಾರದ ಜೊತೆ ಹಾಸಿಗೆ ಹಂಚಕೊಳ್ಳದಿ ರುವ ಆಸ್ಪತ್ರೆಗಳಲ್ಲಿ ವಿಮೆ ಮತ್ತು ನಗದು ನೀಡಿ ಚಿಕಿತ್ಸೆ ಪಡೆಯುವ ಫಲಾನುಭವಿಗಳಿಗೆ ಸಾಮಾನ್ಯ ವಾರ್ಡ್ ರೂ. 7,500, ವಾರ್ಡ್ ಜೊತೆ ಆಕ್ಸಿಜನ್ ರೂ. 9,000, ಐಸಿಯು ರೂ. 12,250, ವೆಂಟಿಲೇಟರ್ ಜೊತೆಗೆ ಐಸಿಯು ರೂ. 18,750.

Translate »