ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾ ಸೋಂಕು
ಮೈಸೂರು

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾ ಸೋಂಕು

June 14, 2020

ನವದೆಹಲಿ: ಪಾಕಿಸ್ತಾನದ ಪ್ರಸಿದ್ಧ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅಫ್ರಿದಿ ಟ್ವೀಟ್ ಮಾಡುವ ಮೂಲಕ ಸ್ವತಃ ಈ ಮಾಹಿತಿ ನೀಡಿದ್ದಾರೆ.

ಗುರುವಾರದಿಂದ ನಾನು ಆರೋಗ್ಯ ವಾಗಿಲ್ಲ, ನನ್ನ ದೇಹವು ತುಂಬಾ ನೋವಿನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲ ಆರೋಗ್ಯ ಪರೀಕ್ಷೆಯನ್ನು ಮಾಡಿ ಸಿದ್ದೇನೆ. ದುರದೃಷ್ಟವಶಾತ್ ನಾನು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಶೀಘ್ರದಲ್ಲೇ ಚೇತರಿಸಿ ಕೊಳ್ಳುವ ಭರವಸೆ ಇದೆ ಎಂದು ಅವರು ಟ್ವಿಟರ್‍ನಲ್ಲಿ ಬರೆದಿದ್ದಾರೆ. ಇಡೀ ವಿಶ್ವದಲ್ಲೇ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ಪಾಕಿಸ್ತಾನದಲ್ಲಿಯೂ ಸಾಕಷ್ಟು ಹಾನಿ ಮಾಡಿದೆ. ಈ ದೇಶದಲ್ಲಿ ಒಂದು ಲಕ್ಷ 32 ಸಾವಿರಕ್ಕೂ ಹೆಚ್ಚು ಜನರು ಈ ಮಾರಕ ಸಾಂಕ್ರಾಮಿಕ ಸೋಂಕಿಗೆ ಒಳಗಾಗಿದ್ದಾರೆ. ಪಾಕಿಸ್ತಾನ ಸರ್ಕಾರದ ಲಾಕ್‍ಡೌನ್ ನಿರ್ಧಾರ ಹಸಿವಿನಿಂದ ಬಳಲುತ್ತಿರುವ ಜನರ ಸಾವಿಗೆ ಕಾರಣವಾಯಿತು. ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಅಂತಹವರಿಗೆ ಸಹಾಯ ಮಾಡಲು ಮುಂದೆ ಬಂದರು. ಅಫ್ರಿದಿ ತಮ್ಮ ಪ್ರತಿಷ್ಠಾನದ ಸಹಾಯದಿಂದ ಜನರಿಗೆ ನಿರಂತರವಾಗಿ ಸಹಾಯ ಮಾಡು ತ್ತಿದ್ದರು. ಈ ಸಮಯದಲ್ಲಿ ಅವರು ಕರಾಚಿಯ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಪರಿಹಾರ ಸಾಮಗ್ರಿ ಗಳನ್ನು ವಿತರಿಸಿದರು. ಪಾಕಿಸ್ತಾನದಲ್ಲಿ ಜನರಿಗಾಗಿ ಪರಿ ಹಾರ ಕಾರ್ಯ ಕೈಗೊಂಡಿದ್ದ ಸಮಯದಲ್ಲಿ ಅವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Translate »