15 ದಿನದೊಳಗೆ ಶಿರಾ ಉಪ ಚುನಾವಣಾ ಅಭ್ಯರ್ಥಿ ಘೋಷಣೆ
ಮೈಸೂರು

15 ದಿನದೊಳಗೆ ಶಿರಾ ಉಪ ಚುನಾವಣಾ ಅಭ್ಯರ್ಥಿ ಘೋಷಣೆ

September 30, 2020

ಬೆಳಗಾವಿ, ಸೆ. 29- ಹತ್ತರಿಂದ ಹದಿನೈದು ದಿನಗಳಲ್ಲಿ ಶಿರಾ ಉಪ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣಾ ಕೆಲಸ ಈಗಾಗಲೇ ಆರಂಭವಾಗಿದೆ. ಪಕ್ಷ ಹಾಗೂ ಚುನಾವಣಾ ಸಂಘಟನಾತ್ಮಕ ದೃಷ್ಟಿ ಯಿಂದ ಸಾಕಷ್ಟು ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಶಿರಾದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಾತಾವರಣ ಕಂಡು ಬರುತ್ತಿದ್ದು, ಮುಂದಿನ ಹತ್ತು ಹದಿನೈದು ದಿನ ಗಳೊಳಗೆ ಟಿಕೆಟ್ ಘೋಷಣೆ ಮಾಡಲಾಗುವುದು ಎಂದರು.

Translate »