ಮೈಸೂರು, ಮೇ 28(ಆರ್‍ಕೆ/ಪಿಎಂ)- ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ಈಗ ಎಲ್ಲರ ನಡುವೆ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ತಂದಿಟ್ಟಿದೆ. ಈ ಅಂತರ ಈಗ ಮದುವೆ, ನಾಮಕರಣ, ಬೀಗರ ಔತಣಕೂಟ ಸೇರಿದಂತೆ ಎಲ್ಲಾ ಶುಭ ಸಮಾ ರಂಭದಲ್ಲಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರವೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಜನ ಸೇರುವ ಸಮಾರಂಭ ಗಳಿಗೆ 4ನೇ ಲಾಕ್‍ಡೌನ್ ವೇಳೆ ಮಾರ್ಗಸೂಚಿ ಗಳನ್ನು ರೂಪಿಸಿದೆ. ಅದಕ್ಕೆ ಅನುಗುಣವಾಗಿ 50 ಮಂದಿ ಸಾಮಾ ಜಿಕ ಅಂತರ ಕಾಯ್ದುಕೊಂಡು ವಿವಾಹ ಇತ್ಯಾದಿ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಆದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಶುಭ ಕಾರ್ಯಕ್ಕೆ ವ್ಯವಸ್ಥೆ ಸಾಧ್ಯವೇ? ಸಾಧ್ಯ! ಮೈಸೂರಿನ ಹೃದಯ ಭಾಗದಲ್ಲಿ ರುವ ಪ್ರತಿಷ್ಠಿತ ಸಿದ್ಧಾರ್ಥ ಹೋಟೆಲ್‍ನಲ್ಲಿ ಇಂತಹ ಸುರಕ್ಷತಾ ಸಭಾಂಗಣವನ್ನು ಅಣಿಗೊಳಿಸಲಾಗಿದೆ.
ಸಿದ್ಧಾರ್ಥ ಗ್ರೂಪ್‍ನ ಸಿದ್ಧಾರ್ಥ ಹೋಟೆಲ್‍ನ ಸಭಾಂ ಗಣವೊಂದರಲ್ಲಿ ಕೊರೊನಾ ಸೋಂಕು ತಡೆಯುವ ಪೂರಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಸ್ತುತ ಅನಿ ವಾರ್ಯ ಎನ್ನುವಂತಾಗಿರುವ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಇಲ್ಲಿದೆ. ಒಟ್ಟಾರೆ ಇದು ಸುಂದರ-ಸುರಕ್ಷಿತ ಸ್ಥಳವಾಗಿದೆ.
ಸದ್ಯ ಈ ಸೋಂಕು ಮನುಕುಲಕ್ಕೆ ಮುಕ್ತಿ ನೀಡುವ ಲಕ್ಷಣಗಳು ಇಲ್ಲವಾಗಿದೆ. ಕನಿಷ್ಠ ಒಂದು ಅಥವಾ ಎರಡು ವರ್ಷ ಕಾಲ ಮಾನವ ಸಂಕುಲ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಇದ ರಿಂದ ಪಾರಾಗಬೇಕಿದೆ. ಹೀಗೆ ಬದುಕಿನ ಬಂಡಿ ಎಳೆ ಯುವ ಜೊತೆಗೆ ಆಗಾಗ್ಗೆ ಆಗಲೇಬೇಕಿರುವ ಶುಭ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.
ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಯಾವ ವಿಧಾನ ಅಗತ್ಯ ಎಂಬ ವಿಭಿನ್ನ ಪರಿಕಲ್ಪನೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿರಿಸಿಕೊಂಡು ಸುಂದರ -ಸರಳ ವಿವಾಹ ಸೇರಿದಂತೆ ಇನ್ನಿತರೆ ಶುಭ ಕಾರ್ಯಕ್ಕೆ ಅನುಕೂಲವಾಗುವಂತೆ ಹಾಗೂ ಆ ಮೂಲಕ ಕೊರೊನಾ ಸೋಂಕು ಹರಡದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಸಭಾಂಗಣ ಅಣಿಗೊಳಿಸಲಾಗಿದೆ.
ಈ ಸಭಾಂಗಣ ಹೋಟೆಲ್‍ನ ನಾಲ್ಕನೇ ಮಹಡಿ ಯಲ್ಲಿದೆ. ಮೊದಲಿಗೆ ಟೂತ್‍ಪಿಕ್‍ನಲ್ಲಿ ಲಿಫ್ಟ್‍ನ ಬಟನ್ ಅದುಮುವ ಸುರಕ್ಷತೆಯ ಎಚ್ಚರಿಕೆ ಗಂಟೆ ಆರಂಭ. ಈ ಲಿಫ್ಟ್‍ನಲ್ಲಿ ಕೇವಲ ಮೂರು ಮಂದಿ ಮಾತ್ರ ಹೋಗ ಬೇಕು. ಲಿಫ್ಟ್ ಮೂಲಕ ಸಭಾಂಗಣಕ್ಕೆ ಎಡತಾಕುತ್ತಿ ದ್ದಂತೆ ಥರ್ಮಲ್ ಸ್ಕ್ರೀನಿಂಗ್ ಮಾಡಲು ಹೋಟೆಲ್ ಸಿಬ್ಬಂದಿ ಸಿದ್ಧವಿರುತ್ತಾರೆ. ದೇಹದಲ್ಲಿ ಅಧಿಕ ತಾಪಮಾನ ಕಂಡು ಬಂದರೆ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಅಂತಹವರನ್ನು ಪ್ರತ್ಯೇಕಿ ಸಿಡಲು (ಕ್ವಾರಂಟೈನ್) ಹೋಟೆಲ್‍ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಅಲ್ಲಿಯೇ ಸ್ಯಾನಿಟೈಸರ್, ಗುಣಮಟ್ಟದ ಮಾಸ್ಕ್ ಇರಿಸಲಾಗಿದ್ದು, ಒಂದು ವೇಳೆ ಮಾಸ್ಕ್ ಮರೆತಿದ್ದರೆ ಇಲ್ಲಿಯೇ ಲಭ್ಯವಿದೆ.
ಸಭಾಂಗಣದಲ್ಲಿ ಎಲ್ಲೆಲ್ಲೂ ಅಂತರ: ಸಭಾಂಗಣ ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನ ಗಳನ್ನು ಇರಿಸಲಾಗಿದೆ. ಅಹ್ಲಾದಕರ ವಾತಾವರಣ, ಸೂಕ್ತ ಗಾಳಿ, ಬೆಳ ಕಿನ ವ್ಯವಸ್ಥೆ ಇದೆ. ಸಭಾಂಗಣದಲ್ಲಿ ವೇದಿಕೆ ಮಂಟಪವನ್ನು ಬೇಕಾ ದಂತೆ ವಿನ್ಯಾಸ ಮಾಡಿಕೊಳ್ಳಲು ಅನುವಾಗುವಂತೆ ಸಜ್ಜುಗೊಳಿಸ ಲಾಗಿದೆ. ಇದರ ಪಕ್ಕದಲ್ಲೇ ಡೈನಿಂಗ್ ಹಾಲ್ ಇದ್ದು, ಅಲ್ಲಿ ಸಹ ಸಾಮಾಜಿಕ ಅಂತರಕಾಯ್ದು ಕೊಂಡೇ ಆಸಿನರಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಭೋಜನದ ನಂತರ ಸ್ಥಳದಲ್ಲೇ ಕೈ ತೊಳೆದುಕೊಳ್ಳಲು ಫಿಂಗರ್ ಬೌಲ್ (ಬಟ್ಟಲು) ಕೊಡುವ ಕಾರಣ ವಾಷ್ ಬೇಸನ್ ಬಳಿ ಜನದಟ್ಟಣೆಗೆ ಅವಕಾಶವೇ ಇಲ್ಲ.
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿ ಯರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇ ಶಾವಕಾಶ ನಿರ್ಬಂಧಿಸಿ ಈ ಸಂಬಂಧ ಸೂಚನಾ ಫಲಕ ದಲ್ಲಿ ಮಾಹಿತಿ ಪ್ರದರ್ಶಿಸಲಾಗಿದೆ. ವಿವಾಹ ಸೇರಿದಂತೆ ಸಮಾರಂಭಗಳಿಗೆ ಸಭಾಂಗಣ ಕಾಯ್ದಿರಿಸುವಾಗಲೇ ಹೋಟೆಲ್ ವ್ಯವಸ್ಥಾಪನಾ ವಿಭಾಗ ಸರ್ಕಾರದ ಮಾರ್ಗ ಸೂಚಿ ಅನ್ವಯ ಪಾಲಿಸಬೇಕಾದ ಷರತ್ತುಗಳನ್ನು ಒಪ್ಪಿದ ಬಳಿಕವೇ ಸಭಾಂಗಣ ಬಾಡಿಗೆಗೆ ನೀಡಲಾಗುವುದು.
ಊಟ ಬಡಿಸುವಾಗಲು ಮುನ್ನೆಚ್ಚರಿಕೆ: ಊಟ ಬಡಿ ಸುವ ಸಿಬ್ಬಂದಿ ಶೂ, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್, ಮಾಸ್ಕ್, ಹೆಡ್ ಕವರ್ ಧರಿಸುತ್ತಾರೆ. ಮದುವೆ ಸೇರಿ ಯಾವುದೇ ಸಮಾರಂಭವಾದರೂ ಆರಂಭದಿಂದ ಮುಕ್ತಾಯದವರೆಗೆ ಹೋಟೆಲ್‍ನ ವ್ಯವಸ್ಥಾಪಕ ವಿಭಾ ಗದ ಸಿಬ್ಬಂದಿ ಸ್ಥಳದಲ್ಲಿದ್ದು, ಯಾವುದೇ ಷರತ್ತು ಉಲ್ಲಂ ಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕೊರೊನಾ ಸೋಂಕು ಹರಡು ವಿಕೆ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ವಿಧಾನ ಅಳ ವಡಿಸಿ ಸಭಾಂಗಣ ವಿನ್ಯಾಸಗೊಳಿಸಿರುವ ಪ್ರಶಂಸೆಗೆ ಸಿದ್ಧಾರ್ಥ ಗ್ರೂಪ್ ಭಾಜನವಾಗಿದೆ.