ಶ್ರೀರಂಗಪಟ್ಟಣದಲ್ಲಿ ಸರಳ ದಸರಾ: ವೀಕ್ಷಣೆಗೆ 15 ಕಡೆ ಎಲ್‍ಇಡಿ ವಾಲ್ ಅಳವಡಿಕೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಸರಳ ದಸರಾ: ವೀಕ್ಷಣೆಗೆ 15 ಕಡೆ ಎಲ್‍ಇಡಿ ವಾಲ್ ಅಳವಡಿಕೆ

October 22, 2020

ಶ್ರೀರಂಗಪಟ್ಟಣ, ಅ,21 (ವಿನಯ್ ಕಾರೇಕುರ)- ಈ ಬಾರಿಯ ಶ್ರೀರಂಗ ಪಟ್ಟಣ ದಸರಾವನ್ನು ಸರಳ ಹಾಗೂ ಪಾರಂ ಪರಿಕವಾಗಿ ಆಚರಿಸಲು ಜಿಲ್ಲಾಡಳಿತದ ಜೊತೆ ಸೇರಿ ನಿರ್ಧಾರ ಮಾಡಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾ ಕೋವಿಡ್ ಸಂಕಷ್ಟದ ನಡುವೆ ಯಾವುದೇ ಗುಂಪು ಸೇರಿಸದೆ ಜೈಪುರ್, ಉದಯ್‍ಪುರ್ ಸೇರಿದಂತೆ ರಾಜಸ್ಥಾನ ಗಳ ಕಡೆ ನಡೆಸುವಂತೆ ಪಟ್ಟಣದ ಐತಿಹಾಸಿಕ ಬತೇರಿಯ ಎತ್ತರದ ಪ್ರದೇಶದಲ್ಲಿ ಬಹಳ ವಿಶಿಷ್ಠವಾಗಿ ಆಯೋಜನೆ ಮಾಡಲಾಗು ವುದು ಹಾಗೂ ಕಾರ್ಯಕ್ರಮಗಳನ್ನು ಪಟ್ಟಣದಾದ್ಯಂತ ಜನರು ನೋಡಲು ಸುಮಾರು 15 ಐಇಆ ವಾಲ್‍ಗಳನ್ನು ಅಳವಡಿಸಲಾಗುವುದು.

ಅ.23 ರಂದು ಚಾಮುಂಡೇಶ್ವರಿ ತಾಯಿಯ ಮೆರವಣಿಗೆ ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೊದಲು ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ಕಾರ್ಯ ಕ್ರಮ ಇದ್ದು, ಅನನ್ಯ ಹಾಗೂ ಅವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ವಿರುತ್ತದೆ, ಹಿರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್ ತಂಡದವರಿಂದ ರಿಮಿಕ್ಸ್‍ಗೊಂಡ ದೇವರ ಹಾಡುಗಳನ್ನು ಆಯೋಜಿಸಲಾಗಿದೆ ಎಂದರು.

ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಈಗ ಕೆಲ ಮಾಹಿತಿಗಳ ಪ್ರಕಾರ ಮೈಸೂರಿನಿಂದ ಸಿಎಂ ಯಡಿಯೂರಪ್ಪ ನವರು ಶ್ರೀರಂಗಪಟ್ಟಣ ದಸರಾಗೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರದಿಂದ ಹಣ ಬರಲಿ ಬಿಡಲಿ ಯಾವುದೇ ಕಾರಣಕ್ಕೂ ಶ್ರೀರಂಗ ಪಟ್ಟಣದ ಪಾರಂಪರಿಕ ದಸರಾ ನಿಲ್ಲುವುದಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಉತ್ತಮವಾಗಿ ಈ ಬಾರಿಯ ದಸರಾವನ್ನು ಆಚರಿಸ ಲಾಗುವುದು ಎಂದರು. ಈ ವೇಳೆ ಉಪ ವಿಭಾಗಾಧಿಕಾರಿ ಡಾ.ಶಿವಾನಂದ ಮೂರ್ತಿ ಹಾಗೂ ತಹಸೀಲ್ದಾರ್ ಎಂ.ವಿ. ರೂಪ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

 

 

 

Translate »