ಆ.29ಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿ
ಮೈಸೂರು

ಆ.29ಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿ

August 27, 2020

ಮೈಸೂರು, ಆ.26(ಎಂಟಿವೈ)- ಸುತ್ತೂರು ಜಗ ದ್ಗುರು ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ 23ನೇ ಪೀಠಾಧಿ ಪತಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿಯನ್ನು ಆ.29ರಂದು ಸರಳ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆಚರಿಸ ಲಾಗುತ್ತಿದ್ದು, ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ವನ್ನು ಆನ್‍ಲೈನ್ ಮೂಲಕ ದೆಹಲಿಯಿಂದಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯದರ್ಶಿ ಮಂಜುನಾಥ್ ಅವರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆ ಯುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ `ಸುತ್ತೂರು ಶ್ರೀಮಠ-ಗುರುಪರಂಪರೆ ಮತ್ತು ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’ ಎಂಬ ಅನಿಮೇಷನ್ ಚಿತ್ರಗಳನ್ನು ಬಿಡುಗಡೆಗೊಳಿಸುವರು. ವಿಪಕ್ಷ ನಾಯಕ ಸಿದ್ದರಾಮಯ್ಯ `ಕಾಯಕ ತಪಸ್ವಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಾರು’ ತೆಲುಗು ಅನುವಾದಿತ ಕೃತಿ, `ಭಕ್ತಿ ಭಂಡಾರಿ ಬಸವೇಶ್ವರರಿನ್ ವಸನಂಗಳ್’ ತಮಿಳು ಅನುವಾದಿತ ಪುನರ್ಮುದ್ರಿತ ಕೃತಿ ಮತ್ತು `ನೀತಿ ಸಾಮ್ರಾಜ್ಯ ಶತಕ’ ಸಂಪಾದಿತ ಕೃತಿಯನ್ನು ಲೋಕಾರ್ಪಣೆ ಮಾಡುವರು ಎಂದು ವಿವರಿಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್‍ನಾರಾ ಯಣ್ `ಪ್ರಸಾದ’ ವಿಶೇಷ ಸಂಚಿಕೆ ಬಿಡುಗಡೆ ಮಾಡು ವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ಬಹುಮಾನವನ್ನು ವಿಭಾಗಗಳ ಮುಖ್ಯಸ್ಥ ರಿಗೆ ವಿತರಿಸಲಿದ್ದಾರೆ. ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಗುರು ನಮನ ಸಲ್ಲಿಸಿ ಬಿಡುಗಡೆ ಯಾಗುವ ಮೂರೂ ಕೃತಿಗಳ ಪರಿಚಯ ಮಾಡಿ ಕೊಡಲಿದ್ದಾರೆ. ಅಂದು ಮಧ್ಯಾಹ್ನ 12.30ಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಬದುಕು ಆಧÀರಿಸಿ ರಚಿಸಿದ `ದಿವ್ಯಚೇತನ’ ನಾಟಕ ಮತ್ತು `ಕಾಯಕ ತಪಸ್ವಿ’ ನೃತ್ಯ ರೂಪಕ- ವಿಡಿಯೋಗಳ ನೇರ ಪ್ರಸಾರ ವಿರುತ್ತದೆ ಎಂದು ವಿವರಿಸಿದರು.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಡಿಜಿಟಲ್ ಕಾರ್ಯ ಕ್ರಮ ಆಯೊಜಿಸಿದ್ದು, ಆನ್‍ಲೈನ್‍ನಲ್ಲೇ ನಡೆಸಲಾಗು ತ್ತಿದೆ. ಆ.29ರ ಬೆಳಗ್ಗೆ 9ಕ್ಕೆ ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀ ಶಿವಯೋಗಿಗಳ ಕರ್ತೃಗದ್ದುಗೆ, ಮಂತ್ರಮಹರ್ಷಿಗಳ ಗದ್ದುಗೆಗಳಿಗೆ ಆರತಿ ಬೆಳಗಿದ ನಂತರ ರಾಜೇಂದ್ರ ಶ್ರೀಗಳ ಗದ್ದುಗೆಯಲ್ಲಿ ಅಷ್ಟೋ ತ್ತರ, ಆರತಿ, ಮಹಾಮಂಗಳಾರತಿ ನಡೆಯುತ್ತದೆ. ಬಳಿಕ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀಮಠದಲ್ಲಿ ಶ್ರೀಗಳ ಪುತ್ಥಳಿಗೆ ಪೂಜೆ, ಆರತಿ, ಪುಷ್ಪಾಂಜಲಿ ನಡೆಯ ಲಿದೆ. ಬೆಳಗ್ಗೆ 9.15ರಿಂದ ಜೆಎಸ್‍ಎಸ್ ಲಲಿತ ಕಲಾ ತಂಡದಿಂದ ಭಕ್ತಿಸಂಗೀತ ನಡೆಯಲಿದೆ ಎಂದರು.

ಸಂವಾದ: ಸಂಜೆ 4ಕ್ಕೆ `ಕೋವಿಡ್-19 ಸವಾಲು ಹಾಗೂ ಸ್ಥೈರ್ಯದ ನಿರ್ವಹಣೆ’ ಸಂವಾದವನ್ನು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಉದ್ಘಾ ಟಿಸಲಿದ್ದಾರೆ. ಸಂವಾದಕರಾಗಿ ಧರ್ಮಸ್ಥಳ ಧರ್ಮಾ ಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇನ್ಫೋಸಿಸ್ ಪ್ರತಿಷ್ಠಾನ ಮುಖ್ಯಸ್ಥೆ ಸುಧಾಮೂರ್ತಿ, ನಟ ದರ್ಶನ್ ಪಾಲ್ಗೊಳ್ಳÀ ಲಿದ್ದಾರೆ. ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಅಧÀ್ಯಕ್ಷ ಡಾ.ಬಿ.ಸುರೇಶ್ ಸಮನ್ವಯಕಾರರಾಗಿರುವರು ಎಂದರು. ಸಂಜೆ 6ಕ್ಕೆ `ಸುತ್ತೂರು ಶ್ರೀಮಠ-ಗುರುಪರಂಪರೆ’ ಮತ್ತು 7ಕ್ಕೆ `ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’ ಅನಿಮೇಷನ್ ಚಿತ್ರಗಳ ನೇರ ಪ್ರಸಾರÀ, ರಸಪ್ರಶ್ನೆ ಇರು ತ್ತದೆ. ರಸಪ್ರಶ್ನೆಯಲ್ಲಿ ಸರಿಯಾದ ಉತ್ತರ ನೀಡಿದ ಮೊದಲ ಐವರಿಗೆ ಪ್ರಶಂಸಾಪತ್ರ, ಜತೆಗೆ ಕ್ರಮವಾಗಿ 5000 ರೂ., 4000 ರೂ., 3000 ರೂ., 2000 ರೂ. ಮತ್ತು 1000 ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ. 93418 16701 ಸಂಪರ್ಕಿಸಬಹುದು ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ಕಾಲೇಜು ಶಿಕ್ಷಣ ನಿರ್ದೇಶಕ ಪೆÇ್ರ.ಮೊರಬದ ಮಲ್ಲಿಕಾರ್ಜುನ, ಶೂನ್ಯೇಕ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಕರೀಂ, ಡಾ.ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.

Translate »