ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಪೆÇಲೀಸರು
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಪೆÇಲೀಸರು

October 27, 2020

ಶ್ರೀರಂಗಪಟ್ಟಣ, ಅ.27(ವಿನಯ್ ಕಾರೇಕುರ)- ಬೂಟಿನಶಬ್ದ, ಖಾಕಿ ಸಮವಸ್ತ್ರ ಹಾಗೂ ಖಾಕಿಯ ಭಾಷೆಯ ಬಳಕೆ ಇಲ್ಲದೆ ಸಾಂಪ್ರದಾಯಿಕವಾಗಿ ಶ್ರೀರಂಗಪಟ್ಟಣ ಗ್ರಾಮಾಂತರ ಪೆÇಲೀಸರು ಪಂಚೆ ಟವೆಲ್ ಹಾಕಿಕೊಂಡು ಸಡಗರದಿಂದ ವಿಶೇಷ ವಾಗಿ ಆಯುಧ ಪೂಜೆಯನ್ನು ಆಚರಿಸಿದರು.

ಜನ ಸ್ನೇಹಿ ಪೆÇಲೀಸ್ ಠಾಣೆ ಎನಿಸಿ ಕೊಂಡಿದ್ದ ಗ್ರಾಮಾಂತರ ಪೆÇಲೀಸ್ ಠಾಣೆ ಖಾಕಿ ಮಾಯವಾಗಿ ಗ್ರಾಮೀಣ ಭಾಗ ದಲ್ಲಿನ ಪಂಚೆ ಟವೆಲ್‍ಗಳಲ್ಲಿ ಎಸ್.ಐ ಗಿರೀಶ್ ಮತ್ತು ಸಿಬ್ಬಂದಿ ಮಿಂಚಿದರು.

ಶ್ರೀರಂಗಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆಯನ್ನು ಸ್ವಚ್ಛಗೊಳಿಸಿ, ಗನ್, ಕಂಪ್ಯೂಟರ್ಸ್, ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಹೂವುಗಳಿಂದ ಅಲಂಕಾರ ಮಾಡಿ, ಪೆÇಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಬಿಳಿಬಣ್ಣದ ಪಂಚೆ ಟವೆಲ್ ಹಸಿರುಬಣ್ಣದ ಅಂಗಿ ತೊಟ್ಟು ಆಯುಧ ಪೂಜೆ ಮಾಡಿ ಸಂತಸಪಟ್ಟರು.

ಸದಾಕಾಲ ಖಾಕಿಯಿಂದಲೇ ತುಂಬಿರುತ್ತಿದ್ದ ಪೆÇಲೀಸ್ ಠಾಣೆಯಲ್ಲಿ ಪಂಚೆ ಟವೆಲ್ ಗಳಿಂದ ಇರುವ ಬಗ್ಗೆ ಸುದ್ದಿ ತಿಳಿಯುತ್ತಿ ದ್ದಂತೆ ಸಾರ್ವಜನಿಕರು ಕುತೂಹಲದಿಂದ ಠಾಣೆಯ ಸಿಬ್ಬಂದಿಗಳನ್ನು ಮಾತನಾಡಿಸಿ ಕೊಂಡು ಅವರು ನೀಡಿದ ಸಿಹಿಯನ್ನು ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ರೈತನ ಮಕ್ಕಳೆ : ಠಾಣೆಯ ಉಪ ನಿರೀಕ್ಷಕ ಗಿರೀಶ್ ಮಾತನಾಡಿ, ನಾವು ಸಹ ರೈತನ ಮಕ್ಕಳಾಗಿದ್ದು, ಕರ್ತವ್ಯ ನಿರ್ವಹಣೆ ಮಾಡುವುದಕ್ಕಾಗಿ ಸರ್ಕಾರ ನಿಗದಿ ಮಾಡಿರುವ ಖಾಕಿ ಸಮವಸ್ತ್ರ ಧÀರಿಸಿ ಕೊಂಡು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ, ಆದರೆ ನಮ್ಮ ಮನಸಿನಲ್ಲಿ ಎಂದೆಂದಿಗೂ ಹಸಿರು ಉಸಿರಾಗಿ ರುತ್ತದೆ ಎಂದರು.ಮುಂದಿನ ದಿನಗಳ ಲ್ಲಿಯೂ ನಾವು ನಮ್ಮ ಠಾಣೆಯನ್ನು ಹಿರಿಯ ಅಧಿಕಾರಿಗಳ ಸೂಚನೆ ಮತ್ತು ಸಹಕಾರದಿಂದ ಮತ್ತಷ್ಟು ಜನ ಸ್ನೇಹಿ ಠಾಣೆಯನ್ನಾಗಿ ಮಾರ್ಪಡಿಸುವುದಾಗಿ ತಿಳಿಸಿದರು.

ಠಾಣೆಯಲ್ಲಿ ಪುರುಷ ಸಿಬ್ಬಂಧಿಗಳು ಪಂಚೆ ಟವೆಲ್‍ಗಳನ್ನು ಧರಿಸಿದ್ದರೆ, ಮಹಿಳಾ ಸಿಬ್ಬಂದಿಗಳು ಸೀರೆಯನ್ನು ಧರಿಸಿಕೊಂಡು ಬಂದಿದ್ದರಿಂದ ಠಾಣೆಯು ಮದುವೆ ಮನೆಯ ಸಂಭ್ರಮದಂತಿತ್ತು

 

Translate »