ಬಿಗ್‍ಬಾಸ್ 8ನೇ ಆವೃತ್ತಿ ಆರಂಭ
ಮೈಸೂರು

ಬಿಗ್‍ಬಾಸ್ 8ನೇ ಆವೃತ್ತಿ ಆರಂಭ

March 1, 2021

ಬೆಂಗಳೂರು, ಫೆ.28- ಕಿಚ್ಚ ಸುದೀಪ್ ನಿರೂಪಣೆಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಹು ನಿರೀಕ್ಷಿತ ಕನ್ನಡದ ಬಿಗ್‍ಬಾಸ್ 8ನೇ ಆವೃತ್ತಿ ಭಾನುವಾರ ಬಿಡದಿಯ ಇನ್ನೊ ವೇಟಿವ್ ಫಿಲ್ಮ್ ಸಿಟಿಯಲ್ಲಿ ಭರ್ಜರಿಯಾಗಿ ಆರಂಭವಾಗಿದೆ.
ಈ ಬಾರಿಯ ಬಿಗ್‍ಬಾಸ್ ಆವೃತ್ತಿಯಲ್ಲಿ ಮೈಸೂರಿನ ಮೈಸೂ ರಿನ ಹಿರಿಯ ನಟ ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್, ಯೂಟ್ಯೂಬರ್ ಶಮಂತ್ ಗೌಡ (ಬ್ರೋ ಗೌಡ), ಕೊಡಗು ಮೂಲದ ನಟಿ ನಿಧಿ ಸುಬ್ಬಯ್ಯ, ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಚಿತ್ರನಟಿ ಶುಭ ಪೂಂಜಾ, ಗಾಯಕ ವಿಶ್ವನಾಥ್ ಹಾವೇರಿ, ನಟಿ ವೈಷ್ಣವಿ ಗೌಡ, ಬೈಕ್ ರೇಸರ್ ಕೆಪಿ ಅರವಿಂದ್, ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, ಮಜಾಭಾರತ ಖ್ಯಾತಿಯ ಮಂಜು ಪಾವಘಡ, ದಿವ್ಯಾ, ಪ್ರಶಾಂತ್ ಸಂಬರಗಿ, ಪುಟ್ಟಗೌರಿ ಮದುವೆ ಧಾರಾವಾಹಿ ಅಜ್ಜಮ್ಮ ಖ್ಯಾತಿಯ ಚಂದ್ರಕಲಾ ಮೋಹನ್, ಕ್ರಿಕೆಟರ್ ರಾಜೀವ್, ತಲ್ಲಣ ಖ್ಯಾತಿಯ ನಟಿ ನಿರ್ಮಲಾ ಚೆನ್ನಪ್ಪ, ರಘುಗೌಡ, ಸೀರಿಯಲ್ ನಟಿ ದಿವ್ಯಾ ಉರುಡಗ ಸೇರಿದಂತೆ 17 ಮಂದಿ ಸೆಲೆಬ್ರೆಟಿಗಳು ಈ ಬಾರಿ ಬಿಗ್‍ಬಾಸ್ ಮನೆ ಪ್ರವೇಶಿದ್ದಾರೆ. ಕನ್ನಡ ಬಿಗ್‍ಬಾಸ್ ಪ್ರಾರಂಭವಾಗುತ್ತೆ ಎನ್ನುವ ಸುದ್ದಿಯನ್ನು ಕೇಳಿದ ಬಿಗ್‍ಬಾಸ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಒಂಟಿ ಮನೆಗೆ ಯಾರು ಹೋಗುತ್ತಾರೆ ಎಂದು ಚರ್ಚೆ ಮಾಡುತ್ತಿದ್ದರು. ಈ ವಿಚಾರಕ್ಕೆ ಇಂದು ತೆರೆಬಿದ್ದಿದ್ದು, ಈ ಮೂಲಕ 100 ದಿನಗಳ ಆಟ ಇಂದಿನಿಂದ ಪ್ರಾರಂಭವಾಗಿದೆ.

 

Translate »