ದಸರಾ ವಿಶೇಷ ವಸ್ತು ಪ್ರದರ್ಶನ ಪ್ರಾರಂಭ
ಮೈಸೂರು

ದಸರಾ ವಿಶೇಷ ವಸ್ತು ಪ್ರದರ್ಶನ ಪ್ರಾರಂಭ

November 27, 2021

ಪ್ರತಿನಿತ್ಯ ಸಂಜೆ ೪ರಿಂದ ರಾತ್ರಿ ೯ರವರೆಗೆ ಅವಕಾಶ
ಮನರಂಜನೆ ಜೊತೆಗೆ ವಸ್ತುಗಳ ಪ್ರದರ್ಶನ-ಮಾರಾಟ

ಮೈಸೂರು, ನ.೨೬(ಎಸ್‌ಬಿಡಿ)- ಮೈಸೂರಿನಲ್ಲಿ ಇಂದಿನಿAದ ದಸರಾ ವಿಶೇಷ ವಸ್ತು ಪ್ರದರ್ಶನ ಆರಂಭವಾಗಿದೆ.ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣದಲ್ಲಿ ಜ.೩೦ರವರೆಗೆ ಒಟ್ಟು ೬೬ ದಿನಗಳ ಕಾಲ ಪ್ರತಿದಿನ ಸಂಜೆ ೪ರಿಂದ ರಾತ್ರಿ ೯ ಗಂಟೆವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ ಶುಕ್ರವಾರ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾಧ್ಯಮಗ ಳೊಂದಿಗೆ ಮಾತನಾಡಿ, ವಿಶ್ವವಿಖ್ಯಾತ ದಸರಾ ಮಹೋತ್ಸವದ ವೇಳೆ ನಡೆಸ ಲಾಗುತ್ತಿದ್ದ ದಸರಾ ವಸ್ತು ಪ್ರದರ್ಶನ ಜನಾಕರ್ಷಣೆಯ ಭಾಗವಾಗಿತ್ತು. ಇದು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದಿದೆ. ಆದರೆ ೨ ವರ್ಷ ಗಳಿಂದ ಕೊರೊನಾ ಕಾರಣದಿಂದಾಗಿ ವಸ್ತು ಪ್ರದರ್ಶನ ಸ್ಥಗಿತವಾಗಿತ್ತು. ಈ ಬಾರಿ ಸರಳ ದಸರಾಗೆ ಅವಕಾಶ ನೀಡಿದ ಸರ್ಕಾರ, ಕೊರೊನಾ ೩ನೇ ಅಲೆ ಭೀತಿಯಿಂದ ವಸ್ತು ಪ್ರದರ್ಶನ ಆಯೋಜನೆಗೆ ಅನುಮತಿ ನೀಡಲಿಲ್ಲ. ಆದರೆ ತಾಯಿ ಚಾಮುಂಡೇಶ್ವರಿ ದಯೆಯಿಂದ ಸುರಕ್ಷಿತ ಪರಿಸ್ಥಿತಿ ಇರು ವುದರಿಂದ ಇಂದಿನಿAದ ೬೬ ದಿನಗಳ ವಸ್ತು ಪ್ರದರ್ಶನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕೊರೊನಾ ಹಾವಳಿ ಹಾಗೂ ಮಳೆಯಿಂದಾಗಿ ಜನ ಎಲ್ಲೂ ಹೊರಹೋಗಲಾಗದೆ ಬೇಸರದಲ್ಲಿ ದ್ದಾರೆ. ಮಕ್ಕಳಿಗೂ ಹೊಸತನದ ಅಗತ್ಯ ವಿದೆ. ವಸ್ತು ಪ್ರದರ್ಶನ ಯಾವಾಗನಿಂದ ಆರಂಭವಾಗುತ್ತದೆ ಎಂದು ಸಾಕಷ್ಟು ಜನ ಪ್ರಶ್ನಿಸುತ್ತಿದ್ದರು. ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಆರಂಭಿಸಲಾಗಿದ್ದು ಒಟ್ಟು ೧೪೫ ಮಳಿಗೆಗಳಲ್ಲಿ
ಈಗಾಗಲೇ ೧೩೫ ಮಳಿಗೆಗಳು ಭರ್ತಿಯಾಗಿವೆ. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಗುಜರಾತ್, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳ ಪ್ರಸಿದ್ಧ ಬಟ್ಟೆಗಳು, ಆಟಿಕೆಗಳು ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ಕಾರಾಗೃಹ ವಾಸಿಗಳು ತಯಾರಿಸಿದ ಫ್ಲೋರ್ ಮ್ಯಾಟ್‌ಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ಮಳಿಗೆ ನೀಡಲಾಗಿದೆ. ೩ ತಲೆಮಾರಿನಿಂದ ರಮಾಬಾಯಿನಗರದ ಚಿಕ್ಕ ಶೆಡ್‌ನಲ್ಲಿ ದೀಪ ಇನ್ನಿತರ ಕರಕುಶಲ ವಸ್ತುಗಳ ತಯಾರಿಸುವುದರೊಂದಿಗೆ ಆಸಕ್ತರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಕಲಾಕುಟುಂಬಕ್ಕೆ ಇಲ್ಲಿ ಅವಕಾಶ ನೀಡಲಾಗಿದೆ. ವಿಶಿಷ್ಟ ಆಹಾರ ಖಾದ್ಯಗಳು, ಅಮ್ಯೂಸ್‌ಮೆಂಟ್(ಮನರAಜನೆ) ತಾಣ ವಿಶೇಷವಾಗಿರಲಿದೆ. ಸರ್ಕಾರಿ ಇಲಾಖೆಗಳ ಮಳಿಗೆ ಹೊರತುಪಡಿಸಿ ದಸರಾ ಸಂದರ್ಭದ ವಸ್ತು ಪ್ರದರ್ಶನ ಮಾದರಿಯಲ್ಲೇ ಏರ್ಪಡಿಸಲಾಗಿದೆ ಎಂದು ಹೇಳಿದರು. ಮುಂಬರುವ ಭಾನುವಾರದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ. ಇದರಿಂದ ವಸ್ತು ಪ್ರದರ್ಶನಕ್ಕೆ ಆಗಮಿಸುವ ಗ್ರಾಹಕರಿಗೆ ಮನರಂಜನೆ ಕಲ್ಪಿಸುವುದರ ಜೊತೆಗೆ ಕೊರೊನಾದಿಂದ ಸಂಕಷ್ಟದಲ್ಲಿರುವ ಕಲಾವಿದರಿಗೂ ಅವಕಾಶ ನೀಡಿದಂತಾಗುತ್ತದೆ. ಖ್ಯಾತ ಕಲಾವಿದರನ್ನೂ ಕರೆಸುವ ಚಿಂತನೆ ಇದೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಕೊರೊನಾ ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲಿಸುವಂತೆ ವ್ಯಾಪಾರಿಗಳಿಗೆ ಸೂಚಿಸಿದ್ದು, ಜನರಿಗೂ ಜಾಗೃತಿ ಮೂಡಿಸಲಾಗುತ್ತದೆ. ಪ್ರವೇಶಕ್ಕೆ ವಯಸ್ಕರರಿಗೆ ೩೦ ರೂ. ಹಾಗೂ ೫ ವರ್ಷದೊಳಗಿನ ಮಕ್ಕಳಿಗೆ ೨೦ ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಪ್ರಾಧಿಕಾರದ ಸಿಇಓ ಬಿ.ಆರ್.ಗಿರೀಶ್ ಮತ್ತಿತರರು ಹಾಜರಿದ್ದರು.

Translate »