ಡಾ.ಅಶ್ವತ್ಥನಾರಾಯಣರಿಗೆ ರಾಜ್ಯ ಬಿಜೆಪಿ ಸಾರಥ್ಯ; ಮಹಾಪ್ರಧಾನ ಕಾರ್ಯದರ್ಶಿಯಾಗಿ ವಿಜಯೇಂದ್ರ?
ಮೈಸೂರು

ಡಾ.ಅಶ್ವತ್ಥನಾರಾಯಣರಿಗೆ ರಾಜ್ಯ ಬಿಜೆಪಿ ಸಾರಥ್ಯ; ಮಹಾಪ್ರಧಾನ ಕಾರ್ಯದರ್ಶಿಯಾಗಿ ವಿಜಯೇಂದ್ರ?

April 6, 2022

೨೦೨೩ರ ವಿಧಾನಸಭಾ ಚುನಾವಣೆಗೆ ಬಿಜೆಪಿ ವರಿಷ್ಠರ ಮಹಾ ಯೋಜನೆ

ಯಡಿಯೂರಪ್ಪರ ಸಂತೃಪ್ತಗೊಳಿಸಿ, ಒಕ್ಕಲಿಗ-ವೀರಶೈವ ಲಿಂಗಾಯತ ಜಾತಿ ಸಮೀಕರಣದ ಲೆಕ್ಕಾಚಾರ

ಬೆಂಗಳೂರು, ಏ.೫ (ಕೆಎಂಶಿ)- ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರನ್ನು ಬದಲಾಯಿಸಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ನಾರಾಯಣ್ ಅವ ರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ದೆಹಲಿ ವರಿಷ್ಠರು ಮುಂದಾಗಿದ್ದಾರೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ಮಹಾ ಪ್ರಧಾನಕಾರ್ಯದರ್ಶಿಯನ್ನಾಗಿ ನೇಮಿಸಿ, ಒಕ್ಕಲಿಗ ಮತ್ತು ವೀರಶೈವ ಲಿಂಗಾಯಿತ ಜಾತಿ ಸಮೀಕರಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಲು ವರಿಷ್ಠರು ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ.

ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಹುದ್ದೆಯ ಬಗ್ಗೆ ಅವರಿಗೆ ಅಷ್ಟು ಆಸಕ್ತಿ ಇಲ್ಲ. ಸಚಿವರಾಗಬೇಕೆಂಬ ಮಹದಾಸೆ ಇಟ್ಟು ಕೊಂಡಿದ್ದಾರೆ. ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು, ಆಡಳಿತ ಮತ್ತು ಪಕ್ಷದಲ್ಲಿ ಕೆಲವು ಮಹತ್ತರ ಬದ ಲಾವಣೆ ತರಲು ಹೊರಟಿದ್ದಾರೆ. ಈ ಸಂಬAಧ ರಾಜ್ಯ ಘಟಕದ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ.
ಹೊಸಪೇಟೆಯಲ್ಲಿ ಏ.೧೬ ಮತ್ತು ೧೭ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣ ಸಭೆ ನಡೆಯಲಿದ್ದು, ಸಭೆಗೆ ಪಕ್ಷದ ರಾಷ್ಟಿçÃಯ ಅಧ್ಯಕ್ಷ ನಡ್ಡಾ ಸೇರಿದಂತೆ ಕೆಲವು ದೆಹಲಿ ನಾಯಕರು ಭಾಗವಹಿಸುತ್ತಿದ್ದಾರೆ. ಕಾರ್ಯಕಾರಿಣ ಸಭೆಯ ನಂತರ ರಾಜ್ಯ ಮಟ್ಟದಲ್ಲಿ ದೊಡ್ಡ ಬದಲಾವಣೆಗಳನ್ನು ದೆಹಲಿ ನಾಯಕರು ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವ ರೆಗೂ ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಯಾವುದೇ ತೀರ್ಮಾನಗಳು ಆಗುವುದಿಲ್ಲ.

ಸಂಪುಟ ಪುನರಚಿಸಲೆಂದು ಮುಖ್ಯಮಂತ್ರಿಯವರು ನಡೆಸುತ್ತಿರುವ ಪ್ರಯತ್ನಕ್ಕೂ ವರಿಷ್ಠರು ಅವಕಾಶ ನೀಡುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯನ್ನು ಸಮರ್ಥ ವಾಗಿ ಎದುರಿಸುವ ಮತ್ತು ಮತದಾರರನ್ನು ಸೆಳೆಯಲು ಜಾತಿ ಸಮೀಕರಣ ಪ್ರಯೋಗ ವನ್ನು ಮಾಡಲು ವರಿಷ್ಠರು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ಅಶ್ವತ್ಥ್ನಾರಾ ಯಣ ಮತ್ತು ವಿಜಯೇಂದ್ರ ಅವರ ನಾಯಕತ್ವವನ್ನು ಪ್ರಯೋಗ ಮಾಡಲು ಹೊರಟಿದ್ದಾರೆ.

ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡುವುದರಿಂದ ಯಡಿ ಯೂರಪ್ಪ ನವರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ ಎಂಬ ಭಾವನೆ ದೆಹಲಿ ವರಿಷ್ಠರಲ್ಲಿದೆ. ಇದೇ ಕಾರಣಕ್ಕೆ ತುಮಕೂರಿನ ಸಿದ್ಧಗಂಗಾಶ್ರೀಗಳ ಸಮಾರಂಭದ ಪೂರ್ಣ ಹೊಣೆಗಾರಿಕೆಯನ್ನು ವಿಜಯೇಂದ್ರ ವಹಿಸಿಕೊಂಡಿದ್ದರು. ಅವರ ಆಹ್ವಾನದ ಮೇರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮಾರಂಭಕ್ಕೆ ಆಗಮಿಸಿದ್ದಲ್ಲದೆ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡರು.

ತಮ್ಮ ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪನವರೊಟ್ಟಿಗೆ ಗೃಹ ಸಚಿವರು ಪ್ರತ್ಯೇಕ ವಾಗಿ ಮಾತುಕತೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಪಕ್ಷದ ಜೊತೆಗೆ ಸರ್ಕಾರ ದಲ್ಲೂ ಮಹತ್ತರ ಬದಲಾವಣೆ ತರಲು ದೆಹಲಿ ನಾಯಕರು ಮುಂದಾಗಿದ್ದಾರೆ. ಕಳೆದ ವಾರ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಟ್ಟಿಗೆ ಸುದೀರ್ಘ ಸಮಾಲೋ ಚನೆ ನಡೆಸಿದ್ದಾರೆ. ವರಿಷ್ಠರ ಸಂದೇಶವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ. ಈ ಬೆಳವಣ ಗೆಯ ನಂತರ ವರಿಷ್ಠರ ಆಹ್ವಾನದ ಮೇರೆಗೆ ಮುಖ್ಯಮಂತ್ರಿಯವರು ೨ ದಿನ ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ. ಭೇಟಿಯ ಸಂದರ್ಭದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡುವುದೇ ಇವರ ಉದ್ದೇಶವಾಗಿದೆ. ಆದರೆ ಇದುವರೆಗೂ ಪ್ರಧಾನಿ ಕಾರ್ಯಾ ಲಯ ಸಮಯ ಅವಕಾಶ ನೀಡಿಲ್ಲ. ಒಟ್ಟಾರೆ ರಾಜ್ಯ ಕಾರ್ಯಕಾರಿಣ ಸಭೆಯ ನಂತರ ಪಕ್ಷ ಮತ್ತು ಸರ್ಕಾರದಲ್ಲಿ ಮಹತ್ತರ ಬದಲಾವಣೆಗಳನ್ನು ನಿರೀಕ್ಷಿಸಬಹುದು.

 

Translate »