ನಾನು ಹೇಳುವವರೆಗೆ ರಾಜ್ಯ ಕಾಂಗ್ರೆಸ್  ಪದಾಧಿಕಾರಿಗಳ ಪಟ್ಟಿ oಞ ಮಾಡಬೇಡಿ…
News

ನಾನು ಹೇಳುವವರೆಗೆ ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ oಞ ಮಾಡಬೇಡಿ…

March 25, 2022

ಬೆಂಗಳೂರು, ಮಾ.24(ಕೆಎಂಶಿ)- ಕ್ರಿಮಿನಲ್ ಹಿನ್ನೆಲೆ ಉಳ್ಳ ವರು, ಸಮಾಜದಲ್ಲಿ ಒಳ್ಳೆ ಹೆಸರು ಪಡೆಯದವರೇ ಇರುವ ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಗೆ ಅನುಮತಿ ನೀಡಬಾರ ದೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎಐಸಿಸಿ ವರಿಷ್ಠರಿಗೆ ಮನವಿ ಮಾಡಿಕೊಂಡಿರುವ ಪ್ರಸಂಗ ಬೆಳಕಿಗೆ ಬಂದಿದೆ. ಪ್ರಸಕ್ತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಮಾ.30ರಂದು ತಾವು ದೆಹಲಿಗೆ ಬರಲಿದ್ದು, ಅಂದು ಪಟ್ಟಿಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಿ ಎಂದು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ವಿದ್ದು, ನನ್ನೊಬ್ಬನಿಂದಲೇ ಚುನಾವಣೆ ತಯಾರಿ ನಡೆಸಲು ಸಾಧ್ಯವಿಲ್ಲ, ಒಂದು ಒಳ್ಳೆಯ ತಂಡಕ್ಕೆ (ಪದಾಧಿಕಾರಿಗಳು) ಹಸಿರು ನಿಶಾನೆ ನೀಡಿ ಎಂದು ಕೋರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳೆದ ವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಂದ ನಂತರ ಈ ಬೆಳ ವಣಿಗೆ ನಡೆದಿದೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಕಳೆದಿದೆ, ಆದರೂ ಪದಾಧಿಕಾರಿ ಗಳ ಪಟ್ಟಿಯೇ ಹೊರಬಂದಿಲ್ಲ. ಹಿಂದಿನ ಅವಧಿಯಲ್ಲಿದ್ದ ಪದಾಧಿಕಾರಿಗಳನ್ನು ಬದಲಾಯಿಸಿ ಪರಿಷ್ಕøತ ಪಟ್ಟಿಗೆ ಅನುವು ಮಾಡಿಕೊಡಬೇಕೆಂದು ರಾಜ್ಯಾಧ್ಯಕ್ಷರು ವರಿಷ್ಠರನ್ನು ಕೋರಿದ್ದರು.

ಇದಾದ ನಂತರ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ತಮ್ಮ ಬೆಂಬಲಿತರ ಪಟ್ಟಿ ಸಿದ್ಧಪಡಿಸಿ ಅನುಮತಿಗೆ ವರಿಷ್ಠರಿಗೆ ರವಾನಿಸಿದ್ದರು. ಈ ನಾಯಕರ ನಡುವಿನ ಗೊಂದಲ ದಿಂದ ಪಟ್ಟಿ ಅಂತಿಮಗೊಳಿಸಲು ವರಿಷ್ಠರಿಗೆ ಸಾಧ್ಯವಾಗಲಿಲ್ಲ, ಎರಡು-ಮೂರು ಸಭೆ ನಡೆಸಿದರೂ ಪಟ್ಟಿಗೆ ಅಂತಿಮ ಸ್ವರೂಪ ಸಿಕ್ಕಿಲ್ಲ. ಇದೀಗ ಶಿವಕುಮಾರ್, ಚುನಾವಣೆ ಬರುತ್ತಿದೆ, ಕರ್ನಾಟಕ ದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಅವಕಾಶಗಳಿವೆ. ಇದನ್ನು ಸದುಪ ಯೋಗಪಡಿಸಿಕೊಳ್ಳಲು ನನಗೆ ಒಂದು ಒಳ್ಳೆಯ ತಂಡ ನೀಡಿ ಎಂದು ಕಳೆದ ವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಅಷ್ಟೇ ಅಲ್ಲ ಪಟ್ಟಿಯಲ್ಲಿ
ಕೆಲವು ಬದಲಾವಣೆ ಮಾಡುವಂತೆಯೂ ಕೋರಿದ್ದರು. ಇದರ ಮಾಹಿತಿ ತಿಳಿಯು ತ್ತಿದ್ದಂತೆ ಸಿದ್ದರಾಮಯ್ಯ ಪಟ್ಟಿ ಬಿಡುಗಡೆಗೆ ಮತ್ತೆ ಅಡ್ಡಿಯಾಗಿದ್ದಾರೆ. ಪಕ್ಷಕ್ಕಾಗಿ ದುಡಿದವ ರಿಗೆ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ, ಬರೀ ಯುವಕರಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಎಂತೆಂಥವರನ್ನೋ ಸೇರಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ನೀವು ಹೇಳಿದಂತೆ ನಾವು ಒಟ್ಟಾಗಿ ಹೋಗಲು ಪ್ರಯತ್ನ ಮಾಡುತ್ತಲೇ ಇದ್ದೇವೆ, ಆದರೆ, ಅಧ್ಯಕ್ಷರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡು ಪಕ್ಷ ಮತ್ತು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ತಾವು ಬಂದು ಸಮಾಲೋಚನೆ ಮಾಡು ವವರೆಗೂ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಅನುಮತಿ ನೀಡಬಾರದೆಂದು ಕೋರಿ ದ್ದಾರೆ. ಸಿದ್ದರಾಮಯ್ಯ ಅವರ ಸಲಹೆಯಂತೆ ಪಟ್ಟಿ ತಡೆಹಿಡಿಯಲಾಗಿದ್ದು, ಅವರ ದೆಹಲಿ ಪ್ರವಾಸದ ನಂತರ ಪಟ್ಟಿಗೆ ಮೋಕ್ಷ ದೊರೆಯುವ ಸಾಧ್ಯತೆ ಇದೆ.

Translate »