ಗಗನಚುಂಬಿಯಲ್ಲಿ ಕಗ್ಗತ್ತಲು…!
ಮೈಸೂರು

ಗಗನಚುಂಬಿಯಲ್ಲಿ ಕಗ್ಗತ್ತಲು…!

June 11, 2020

ಮೈಸೂರು, ಜೂ.10(ಎಂಕೆ)- ಕಗ್ಗತ್ತಲಲ್ಲಿ ಗಗನಚುಂಬಿ… ತಿರುಗಾಡಲು ಭಯಪಡು ತ್ತಿರುವ ಸ್ಥಳೀಯ ನಿವಾಸಿಗಳು… ವಾರಗಳೇ ಕಳೆ ದರು ಬೆಳಗದ ಬೀದಿ ದೀಪಗಳು… ಮೈಸೂರಿನ ಕುವೆಂಪುನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿ ಕಗ್ಗತ್ತಲು ಆವರಿಸಿದ್ದು, ರಾತ್ರಿವೇಳೆ ವಾಹನ ಸವಾ ರರು, ಪಾದಚಾರಿಗಳು ತಿರುಗಾಡುವುದೇ ಕಷ್ಟವಾಗಿದೆ. ಸಂಪೂರ್ಣ ರಸ್ತೆಯಲ್ಲಿ ಕತ್ತಲು ಆವರಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ನಗರದ ಪ್ರಮುಖ ಬಡಾವಣೆಯಲ್ಲಿಯೇ ಕತ್ತಲು ಆವರಿಸಿದ್ದು, ಇತರೆ ಬಡಾವಣೆಗಳ ಸ್ಥಿತಿಯೇನು? ಗಗನಚುಂಬಿ ಜೋಡಿರಸ್ತೆ ಬದಿಯಲ್ಲಿ ಸ್ಟ್ರೀಟ್ ಲೈಟ್‍ಗಳನ್ನು ಅಳವಡಿ ಸಿದ್ದರೂ ಆನ್ ಮಾಡದೆ ನಗರಪಾಲಿಕೆ ಸಿಬ್ಬಂದಿ ಅಸಡ್ಡೆ ತೋರುತ್ತಿದ್ದಾರೆ. ಕತ್ತಲೆಯಿಂದ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ದಿಕ್ಕು ಎಂದು ಸ್ಥಳಿಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ರಸ್ತೆಯಲ್ಲಿ ಕಗ್ಗತ್ತಲು ಆವರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಲು ಸಾಲು ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಬೀದಿ ದೀಪಗಳನ್ನು ಆನ್ ಮಾಡಿಸುತ್ತೇವೆ ಎಂದು ಹೇಳುತ್ತಲೇ ಕಾಲ ಹರಣ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆಗಳು ಉಂಟಾಗಿದ್ದು, ರಾತ್ರಿ ವೇಳೆ ಭಯವಾಗುತ್ತದೆ ಎಂದು ಸ್ಥಳೀಯ ನಿವಾಸಿ ವಿಕ್ರಾಂತ್ ಪಿ.ದೇವೇಗೌಡ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »