ಮೈಸೂರು ಜಿಲ್ಲಾ ಮಹಿಳಾ ಪೊಲೀಸರ ಯಶಸ್ವಿ ರಾತ್ರಿ ಗಸ್ತು
ಮೈಸೂರು

ಮೈಸೂರು ಜಿಲ್ಲಾ ಮಹಿಳಾ ಪೊಲೀಸರ ಯಶಸ್ವಿ ರಾತ್ರಿ ಗಸ್ತು

November 26, 2021

ಮೈಸೂರು, ನ.25(ಆರ್‍ಕೆ)- ಇದೇ ಪ್ರಥಮ ಬಾರಿ ಮಹಿಳಾ ಪೊಲೀಸರು ಮೈಸೂರು ಜಿಲ್ಲೆಯಲ್ಲಿ ರಾತ್ರಿ ಗಸ್ತು ಕಾರ್ಯದ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ನಿರ್ದೇಶನ ದಂತೆ ನಂಜನಗೂಡು ಉಪವಿಭಾಗದ ಪ್ರೊಬೆಷನರಿ ಡಿವೈಎಸ್ಪಿ ನಿಖಿತಾ ನೇತೃತ್ವದಲ್ಲಿ ನಾಲ್ವರು ಸಬ್ ಇನ್ ಸ್ಪೆಕ್ಟರ್‍ಗಳು, 30 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಬುಧವಾರ ರಾತ್ರಿ 10ರಿಂದ ಮುಂಜಾನೆ 5.30 ಗಂಟೆವರೆಗೆ ಉಪವಿಭಾಗದ ವ್ಯಾಪ್ತಿಯ ನಂಜನ ಗೂಡು ಪಟ್ಟಣ, ಗ್ರಾಮಾಂತರ ಠಾಣಾ ಸರಹದ್ದು, ವರುಣಾ, ತಿ.ನರಸೀಪುರ, ಬನ್ನೂರು ಠಾಣಾ ಸುತ್ತ ಮುತ್ತ ಲಾಠಿ ಹಿಡಿದು ಸಮವಸ್ತ್ರದೊಂದಿಗೆ ರಾತ್ರಿ ಗಸ್ತು ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ನಂಜನಗೂಡು, ಗುಂಡ್ಲುಪೇಟೆ, ತಿ.ನರಸೀಪುರ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು, ನಂಜನ ಗೂಡು, ತಿ.ನರಸೀಪುರ, ಬನ್ನೂರು ಪಟ್ಟಣಗಳ ಪ್ರಮುಖ ಸರ್ಕಲ್, ಬಸ್ ನಿಲ್ದಾಣ, ಮುಖ್ಯ ರಸ್ತೆಗಳಲ್ಲಿ ರಾತ್ರಿ ಇಡೀ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸರು, ಅನುಮಾನಾಸ್ಪದ ವ್ಯಕ್ತಿ, ವಾಹನಗಳ ಮೇಲೆ ನಿಗಾ ಇರಿಸಿದರು. ಅಪರಾಧ ಕೃತ್ಯಕ್ಕೆ ಹೊಂಚು ಹಾಕು ವವರಿಗೆ ಈ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದರು.

ವಾಹನಗಳ ತಪಾಸಣೆ, ರಾತ್ರಿ ಹೋಟೆಲ್, ಲಾಡ್ಜ್, ಪೆಟ್ರೋಲ್ ಬಂಕ್, ಹೆದ್ದಾರಿ ಚೆಕ್‍ಪೋಸ್ಟ್ ಗಳಲ್ಲಿ ಕಾರ್ಯಾಚರಣೆ ನಡೆಸಿದ ಮಹಿಳಾ ಪೊಲೀಸ್ ಸಿಬ್ಬಂದಿ, ಅಂತರ ರಾಜ್ಯಗಳಿಗೆ ತೆರಳುವ ಹಾಗೂ ಹೊರ ರಾಜ್ಯದಿಂದ ಬರುವ ವಾಹನಗಳ ಮೇಲೂ ನಿಗಾ ಇರಿಸಿ ದ್ದರು. ಪರಿಣಾಮ ನಂಜನಗೂಡು ಉಪವಿಭಾಗ ದಲ್ಲಿ ಬುಧವಾರ ರಾತ್ರಿ ಒಂದೇ ಒಂದು ಸಣ್ಣ ಅಪರಾಧ ಕೃತ್ಯವೂ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಅಡಿಷನಲ್ ಎಸ್ಪಿ ಆರ್.ಶಿವಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಇದುವರೆಗೂ ಕೇವಲ ಪುರುಷ ಪೊಲೀಸ್ ಅಧಿ ಕಾರಿಗಳು, ಸಿಬ್ಬಂದಿ ಮಾತ್ರ ರಾತ್ರಿಗಸ್ತು ಕರ್ತವ್ಯ ನಿರ್ವ ಹಿಸುತ್ತಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಇದೇ ಪ್ರಥಮ ಬಾರಿಗೆ ಮಹಿಳಾ ಪೊಲೀಸರಿಗೆ ಈ ಜವಾಬ್ದಾರಿಯನ್ನು ಪ್ರಯೋಗಾತ್ಮಕವಾಗಿ ವಹಿಸಲಾಗಿತ್ತು, ರಾತ್ರಿಯಿಡೀ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ, ಮಹಿಳಾ ಪೊಲೀಸರು ಸವಾಲನ್ನು ಧೈರ್ಯದಿಂದ ಎದುರಿ ಸಿದ್ದಾರೆ ಎಂದು ತಿಳಿಸಿದರು.

ಪುರುಷರಿಗೆ ಸಮಾನವಾಗಿ ಮಹಿಳಾ ಪೊಲೀ ಸರು ನೈಟ್‍ಬೀಟ್ ಕರ್ತವ್ಯ ನಿಭಾಯಿಸುವರೆಂಬು ದನ್ನು 30 ಮಂದಿ ಸಾಬೀತುಪಡಿಸಿರುವುದಲ್ಲದೆ ಇನ್ನಿ ತರ ಮಹಿಳಾ ಸಿಬ್ಬಂದಿಗೂ ಆತ್ಮವಿಶ್ವಾಸ ಮೂಡಿಸಿ ದ್ದಾರೆ ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »