ದೇಶದ ಪ್ರಥಮ ಲೋಕಪಾಲ್ ಆಗಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಆಯ್ಕೆ?
ಮೈಸೂರು

ದೇಶದ ಪ್ರಥಮ ಲೋಕಪಾಲ್ ಆಗಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಆಯ್ಕೆ?

March 18, 2019

ನವದೆಹಲಿ: ದೇಶದ ಮೊದಲ ಲೋಕ ಪಾಲ್ ಆಗಿ ಸುಪ್ರಿಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸಿ.ಘೋಷ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ದಶಕಗಳಿಂದಲೂ ಭಾರಿ ಚರ್ಚೆಗೀಡಾಗಿದ್ದ ಲೋಕ ಪಾಲ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿದ್ದು, ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾ ಗಿದೆ. ಖಾಸಗಿ ಆಂಗ್ಲ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಲೋಕಪಾಲ್ ನೇಮಕಕ್ಕೆ ಸುಪ್ರೀಂ ಕೋರ್ಟ್ ನೀಡಿದ್ದ ಅಂತಿಮ ಗಡುವು ಮುಕ್ತಾಯದ ಬೆನ್ನಲ್ಲೇ ಕೇಂದ್ರ ಸರ್ಕಾರ ಲೋಕಪಾಲ್ ಆಗಿ ಪಿ.ಸಿ. ಘೋಷ್ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ ಎಂದು ವರದಿಯಲ್ಲಿ ಹೇಳಿದೆ. ಈ ಹಿಂದೆ ತಮಿಳು ನಾಡು ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಅಂದಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಯಲಲಿತಾ ಸೇರಿದಂತೆ ಅವರ ಆಪ್ತೆ ಶಶಿಕಲಾ ಸೇರಿದಂತೆ ನಾಲ್ವರಿಗೆ ಶಿಕ್ಷೆ ವಿಧಿಸಿದ್ದರು. ಇನ್ನು ಲೋಕಪಾಲ್‍ನಲ್ಲಿ ನಿವೃತ್ತ ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ 4 ಐಎಎಸ್ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ.

ಲೋಕಪಾಲ್ ಡೆಡ್‍ಲೈನ್ ಮುಗಿದಿದೆ, ಮತ್ತೆ ಸಭೆಗೆ ಹಾಜರಾಗುವುದಿಲ್ಲ: ಅಂತಿಮ ಗಡುವು ಮುಕ್ತಾಯವಾಗಿದ್ದು, ತಾವು ಇನ್ನು ಲೋಕ್‍ಪಾಲ್ ಸಮಿತಿ ಸಭೆಗೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿ ದ್ದಾರೆ. ದೆಹಲಿಯಲ್ಲಿ ಇಂದು ನಡೆಯಲಿರುವ ಲೋಕ್ ಪಾಲ್ ಸಮಿತಿ ಸಭೆಗೆ ಬಹಿಷ್ಕಾರ ಹಾಕಲು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀರ್ಮಾ ನಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಲವಾಗಿ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಖರ್ಗೆ, ‘ವಿಶೇಷ ಆಹ್ವಾನಿತ ಲೋಕಪಾಲ್ ಆಯ್ಕೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ನಿಯಮವೇನಿಲ್ಲ. ವಿರೋಧ ಪಕ್ಷಗಳ ಧ್ವನಿ ಅಡಗಿಸುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಅತಿದೊಡ್ಡ ವಿರೋಧ ಪಕ್ಷದ ಲೋಕಪಾಲ್ ಆಯ್ಕೆ ಸಮಿತಿ ಸದಸ್ಯನನ್ನು ಒಳಗೊಂಡಂತೆ 2014 ರಿಂದೀಚೆಗೆ ಲೋಕಪಾಲ್ ಕಾಯಿದೆ ಸಂಬಂಧಿತ ನಿಬಂಧನೆ ಗಳನ್ನು ತಿದ್ದುಪಡಿ ಮಾಡಲು ಯಾವುದೇ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ. ದೇಶದ ಮೊದಲ ಲೋಕಪಾಲ್ ನೇಮಕ ಸಮಿತಿ ಮತ್ತು ಅದರ ಸದಸ್ಯರ ನೇಮಕಕ್ಕೆ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಸಭೆ ಸೇರಲು ಇನ್ನು 10 ದಿನಗಳಲ್ಲಿ ದಿನಾಂಕ ನಿಗದಿ ಮಾಡುವಂತೆ ಮಾರ್ಚ್ 7ರಂದು ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.

Translate »