Tag: Bandipur

ಬಂಡೀಪುರದಲ್ಲಿ ಮುಂದುವರೆದ ಅಗ್ನಿ ರುದ್ರ ನರ್ತನ
ಮೈಸೂರು

ಬಂಡೀಪುರದಲ್ಲಿ ಮುಂದುವರೆದ ಅಗ್ನಿ ರುದ್ರ ನರ್ತನ

February 26, 2019

ವಾಯುಪಡೆ ಹೆಲಿಕಾಪ್ಟರ್‍ಗಳ ನೆರವು ಸಾವಿರಾರು ಸ್ವಯಂ ಸೇವಕರ ನೆರವಿನೊಂದಿಗೆ ಅರಣ್ಯ ಸಿಬ್ಬಂದಿ ಸೆಣಸಾಟ ಬಂಡೀಪುರ: ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಸಾವಿರಾರು ಎಕರೆ ಕಾಡನ್ನು ಸರ್ವನಾಶ ಮಾಡಿದ ಅಗ್ನಿಯ ರುದ್ರನರ್ತನ ಇಂದು ಕೂಡ ಮುಂದು ವರೆದಿದೆ. ಅರಣ್ಯ ಸಿಬ್ಬಂದಿಯೊಂದಿಗೆ ಸಾವಿರಾರು ಸ್ವಯಂ ಸೇವಾ ಕಾರ್ಯಕರ್ತರು ಬೆಂಕಿ ನಂದಿಸಲು ಸೆಣಸಾಡುತ್ತಿದ್ದು, ವಾಯುಪಡೆಯ ಎರಡು ಹೆಲಿಕಾಪ್ಟರ್‍ಗಳು ಸಹ ನೆರವಿಗೆ ಧಾವಿಸಿವೆ. ಹೆಲಿಕಾಪ್ಟರ್‍ಗಳ ಮೂಲಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಸ್ವಲ್ಪ ಮಟ್ಟಿಗೆ ಬೆಂಕಿ ನಂದಿಸಲು ಸಾಧ್ಯವಾಯಿ ತಾದರೂ, ಪೂರ್ಣ ಪ್ರಮಾಣದಲ್ಲಿ…

ಬಂಡೀಪುರದಲ್ಲಿ ಪ್ರಾಣಿ-ಪಕ್ಷಿಗಳ ಸದ್ದಿಲ್ಲ…  ಕಂಡಲ್ಲೆಲ್ಲಾ ಬೂದಿ ರಾಶಿ… ರಾಶಿ…
ಚಾಮರಾಜನಗರ

ಬಂಡೀಪುರದಲ್ಲಿ ಪ್ರಾಣಿ-ಪಕ್ಷಿಗಳ ಸದ್ದಿಲ್ಲ… ಕಂಡಲ್ಲೆಲ್ಲಾ ಬೂದಿ ರಾಶಿ… ರಾಶಿ…

February 26, 2019

ಬಂಡೀಪುರ: ಹಸಿರಿನಿಂದ ಸದಾ ಕಂಗೊಳಿಸುತ್ತಿದ್ದ, ಜಿಂಕೆಗಳ ಹಿಂಡು-ಹಿಂಡು ಕಾಣ ಬರುತ್ತಿದ್ದ ಜಗತ್ ಪ್ರಸಿದ್ಧ ಜಾಗದಲ್ಲಿ ಈಗ ನೀರವ ಮೌನ. ದಿನ ನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಫಾರಿಗೆ ತೆರಳುವ ಜಾಗ ಬಿಕೋ….. ಹಕ್ಕಿಗಳ ಚಿಲಿಪಿಲಿ ಸದ್ದಿಲ್ಲ…. ಎಲ್ಲಿ ನೋಡಿದರಲ್ಲಿ ಬೂದಿ ಬೂದಿ…. ಗುಡ್ಡಗಳು ಬೋಳು ಬೋಳು…. ಇವು ಕಂಡು ಬರುತ್ತಿರುವುದು ಬಂಡೀಪುರ ಅರಣ್ಯದಲ್ಲಿ. ಕಳೆದ ನಾಲ್ಕೈದು ದಿನಗಳಿಮದ ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆಗೆ ಬಂಡೀ ಪುರ ಅರಣ್ಯ ಅಕ್ಷರಶಃ ನಲುಗಿದೆ. ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ….

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ
ಮೈಸೂರು

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ

February 25, 2019

ಬಂಡೀಪುರ: ಬೆಂಕಿಯ ರೌದ್ರ ನರ್ತನ ಭಾನುವಾರವೂ ಮುಂದುವರೆಯಿತು. ರಭಸವಾಗಿ ಬೀಸಿದ ಗಾಳಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಲವು ಗುಡ್ಡಗಳನ್ನು ಆಹುತಿ ಪಡೆದ ಕಾಳ್ಗಿಚ್ಚು, ಅಪಾರ ಪ್ರಮಾಣದ ವನ್ಯಸಂಪತ್ತನ್ನು ನೋಡ ನೋಡುತ್ತಿದ್ದಂತೆ ಹೊಸಕಿ ಹಾಕಿತು. ಶನಿವಾರ ಮೇಲುಕಾಮನಹಳ್ಳಿಯಿಂದ ಬಂಡೀಪುರದ ಕ್ಯಾಂಪಸ್ ಕಡೆ ಸಾಗಿದ ಬೆಂಕಿಯ ಸಾವಿರಾರು ಎಕರೆ ಕಾಡನ್ನು ಆಹುತಿ ಪಡೆದಿತ್ತು. ನಂತರ ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಸಾಗಿದ ಬೆಂಕಿ ರಾತ್ರಿಯಿಡೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಲಿನ ಗುಡ್ಡಗಳನ್ನು ಆವರಿಸುತ್ತಾ ಸಾಗಿತು. ಭಾನುವಾರ ಬೆಳಿಗ್ಗೆ 10 ಗಂಟೆವರೆಗೂ…

ಸುಟ್ಟು ಕರಕಲಾಗುತ್ತಿರುವ ಬಂಡೀಪುರ ನೋಡಿ ಮಮ್ಮಲ ಮರುಗಿದ ಸಚಿವ ಸತೀಶ್ ಜಾರಕಿಹೊಳಿ
ಚಾಮರಾಜನಗರ

ಸುಟ್ಟು ಕರಕಲಾಗುತ್ತಿರುವ ಬಂಡೀಪುರ ನೋಡಿ ಮಮ್ಮಲ ಮರುಗಿದ ಸಚಿವ ಸತೀಶ್ ಜಾರಕಿಹೊಳಿ

February 25, 2019

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿ ಯಲ್ಲಿ ಕಾಡ್ಗಿಚ್ಚಿನಿಂದ ಸುಟ್ಟುಹೋಗಿರುವ ಪ್ರದೇ ಶಗಳಿಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಪರಿಲೀಶಿಸಿದರು. ಬಂಡೀಪುರ ಅರಣ್ಯ ವಲಯಕ್ಕೆ ಸೇರಿದ ಮೇಲು ಕಾಮನಹಳ್ಳಿ ಅರಣ್ಯ, ಹಿಮವದ್ ಗೋಪಾಲ ಸ್ವಾಮಿ ಅರಣ್ಯ ವಲಯದಲ್ಲಿ ಕಾಡ್ಗಿಚ್ಚಿನಿಂದ ಹತ್ತಾರು ಸಾವಿರ ಎಕರೆಗಳಷ್ಟು ಅರಣ್ಯ ಸಂಪೂ ರ್ಣವಾಗಿ ನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಮಮ್ಮಲ ಮರುಗಿದರು. ಬೆಂಕಿಯಿಂದ ಹಾನಿಗೊಳಗಾಗಿರುವ ಪ್ರದೇಶ ಗಳಲ್ಲಿ ವೀಕ್ಷಣೆ ಮಾಡಿ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,…

ಕಿಡಿಗೇಡಿಗಳ ಕಿಚ್ಚಿಗೆ ನಲುಗಿದ ಬಂಡೀಪುರ ಅರಣ್ಯ
ಮೈಸೂರು

ಕಿಡಿಗೇಡಿಗಳ ಕಿಚ್ಚಿಗೆ ನಲುಗಿದ ಬಂಡೀಪುರ ಅರಣ್ಯ

February 24, 2019

ಬಂಡೀಪುರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ದಿನಗಳಿಂದ ಉಂಟಾದ ಕಾಡ್ಗಿಚ್ಚು ತೀವ್ರ ಸ್ವರೂಪ ಪಡೆದಿದ್ದು, ಶನಿವಾರ ಬೆಳಿಗ್ಗೆ ಕಿಡಿಗೇಡಿಗಳು ಇಟ್ಟ ಕಿಚ್ಚಿನ ಕಿಡಿಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಭಸ್ಮವಾಗಿ ಆತಂಕದ ವಾತಾವರಣ ಸೃಷ್ಟಿಸಿದೆ. ಗುರುವಾರ ಮತ್ತು ಶುಕ್ರವಾರ ಬಂಡೀಪುರ ಕುಂದಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಸುಮಾರು 1 ಸಾವಿರ ಎಕರೆ ಭೂಮಿ ಅರಣ್ಯವನ್ನು ಆಹುತಿ ಪಡೆದಿತ್ತು. ಅರಣ್ಯ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿ ಹತೋಟಿಗೆ ಬಂದಿತ್ತು. ಆದರೆ ಶನಿವಾರ ಬೆಳಿಗ್ಗೆ ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ…

ಬಂಡೀಪುರಕ್ಕೆ ಪ್ರವಾಸಿಗರ ದಂಡು: ಬೆಳಿಗ್ಗೆ 7.30, ಸಂಜೆ 4.30ರ ವೇಳೆಯಲ್ಲಿ ಸಫಾರಿಗೆ ಅವಕಾಶ
ಚಾಮರಾಜನಗರ

ಬಂಡೀಪುರಕ್ಕೆ ಪ್ರವಾಸಿಗರ ದಂಡು: ಬೆಳಿಗ್ಗೆ 7.30, ಸಂಜೆ 4.30ರ ವೇಳೆಯಲ್ಲಿ ಸಫಾರಿಗೆ ಅವಕಾಶ

December 29, 2018

ಗುಂಡ್ಲುಪೇಟೆ:  ಹಚ್ಚ ಹಸಿರಿನ ಮೈಸಿರಿ, ಬೆಟ್ಟಗುಡ್ಡ, ಕಣಿವೆಗಳ ಮೂಲಕ ಹಾದು ಹೋಗುವ ರಸ್ತೆ ಮಾರ್ಗ. ವನ್ಯಜೀವಿ ತಾಣಕ್ಕೆ ಪ್ರಯಾಣಿಸುತ್ತಿರುವ ಪ್ರವಾಸಿಗರ ವಾಹನಗಳು. ದಟ್ಟ ಕಾನನದ ನಡುವೇ ಸ್ವಚ್ಛಂದವಾಗಿ ನಲಿದಾಡುತ್ತಿರುವ ವನ್ಯಜೀವಿ ಸಂಕುಲ. ಇದು ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಕಂಡು ಬಂದ ದೃಶ್ಯ-ಹೌದು ತಾಲೂಕಿನಿಂದ 15 ಕಿ.ಮೀ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಕ್ರಿಸ್‍ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿ ಗರ ದಂಡೇ ಹರಿದು ಬರುತ್ತಿದೆ. ಪ್ರತಿದಿನ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂಡೀಪುರಕ್ಕೆ ಆಗಮಿಸುತ್ತಿರುವ…

ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣ:  ಸುಪ್ರೀಂಕೋರ್ಟ್‍ಗೆ ಕೇಂದ್ರ ಪ್ರಮಾಣ ಪತ್ರ
ಮೈಸೂರು

ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣ:  ಸುಪ್ರೀಂಕೋರ್ಟ್‍ಗೆ ಕೇಂದ್ರ ಪ್ರಮಾಣ ಪತ್ರ

October 31, 2018

ಬೆಂಗಳೂರು: ಬಂಡೀಪುರ-ತಲಚೇರಿ ನಡುವಿನ ಅಭಯಾರಣ್ಯದ ಹಾಲಿ ರಸ್ತೆ ತೆರವುಗೊಳಿಸಿ, ಕಾಡು ಬೆಳೆಸುವುದಾಗಿ ಕೇಂದ್ರ ಪರಿಸರ ಇಲಾಖೆ ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದೆ. ರಸ್ತೆ ತೆರವಿನ ನಂತರ ಪ್ರಯಾಣಿಕರ ಅನುಕೂಲಕ್ಕಾಗಿ 47 ಕಿಲೋ ಮೀಟರ್ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ನಿರ್ಮಿಸುವುದಾಗಿ ಹೇಳಿದೆ. ಕರ್ನಾಟಕ ಸರ್ಕಾರ ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮಾಡಿರುವುದನ್ನು ವಿರೋಧಿಸಿ ಕೇರಳ ಸರ್ಕಾರ ಮತ್ತು ಅಲ್ಲಿನ ಸಾರಿಗೆ ಸಂಘ ಗಳು ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿದ್ದವು. ವಿಚಾರಣೆ ವೇಳೆ ಕೇಂದ್ರ ಮಧ್ಯೆ ಪ್ರವೇಶಿಸಿ,…

ಬಂಡೀಪುರದಲ್ಲಿ ಫ್ಲೈಓವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಚಾಮರಾಜನಗರ

ಬಂಡೀಪುರದಲ್ಲಿ ಫ್ಲೈಓವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ

October 22, 2018

ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನ ದಲ್ಲಿ ಫ್ಲೈಓವರ್ ನಿರ್ಮಾಣ ಮಾಡಬಾರದು ಎಂದು ಒತ್ತಾ ಯಿಸಿದ ಬಂಡೀಪುರ ಸಮೀಪದ ಕಾಡಂಚಿನ ಯುವಕರು ಹಾಗೂ ಪರಿಸರ ಪ್ರೇಮಿಗಳು ಬಂಡೀಪುರ ಹುಲಿಯೋಜನೆಯ ಮೇಲು ಕಾಮನಹಳ್ಳಿ ಬಳಿ ಪ್ರತಿಭಟನೆ ನಡೆಸಿದರು. ಕಾಡಂಚಿನ ಜಕ್ಕಹಳ್ಳಿ, ಮಂಗಲ, ಎಲ್ಚೆಟ್ಟಿ, ಕರಕಲಮಾದಹಳ್ಳಿ, ಚಿಕ್ಕತುಪ್ಪೂರು, ದೊಡ್ಡತುಪ್ಪೂರು ಗ್ರಾಮದ ನೂರಕ್ಕೂ ಹೆಚ್ಚಿನ ಯುವಕರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಮೇಲುಕಾಮನಹಳ್ಳಿ ಬಳಿ ಬೆಳಗಿನಿಂದ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು. ಕೇರಳ ನೆಲಂಬೂರಿಗೆ ರೈಲ್ವೇ ಸಂಪರ್ಕ ಕಲ್ಪಿಸಲು ಬಂಡೀಪುರ ಹುಲಿಯೋಜನೆಯ ಅರಣ್ಯ ಪ್ರದೇಶದಲ್ಲಿ ಫ್ಲೈಓವರ್…

ಬಂಡೀಪುರದಲ್ಲಿ ಆನೆ ಮರಿ ಸಾವು
ಚಾಮರಾಜನಗರ

ಬಂಡೀಪುರದಲ್ಲಿ ಆನೆ ಮರಿ ಸಾವು

August 18, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾ ನವನದ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿಯೊಂದು ಸಾವಿ ಗೀಡಾಗಿರುವ ಘಟನೆ ಬಂಡೀಪುರದಲ್ಲಿ ನಡೆದಿದೆ. ಆ.16ರಂದು ಕೆಕ್ಕನಹಳ್ಳ ಚೆಕ್ ಪೆÇೀಸ್ಟ್ ಸಮೀಪದಲ್ಲಿ ಕಾಡಾನೆಗಳ ಗುಂಪಿನಿಂದ ಹೊರ ಬಂದ ಸುಮಾರು 9 ತಿಂಗಳ ಗಂಡು ಮರಿಯಾನೆಯು ಘೀಳಿಡುತ್ತಿತ್ತು. ಇದನ್ನು ಕಂಡ ಪ್ರವಾಸಿಗರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿಗಳು ಸಮೀಪದಲ್ಲಿ ತಾಯಿ ಇಲ್ಲದಿರುವುದನ್ನು ಕಂಡು ಮರಿಯನ್ನು ಬಂಡೀಪುರದ ಸಾಕಾನೆ ಶಿಬಿರಕ್ಕೆ ತಂದು ಆಹಾರ, ನೀರು ನೀಡಿ…

ಇಂದು ಬಂಡೀಪುರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ಚಾಮರಾಜನಗರ

ಇಂದು ಬಂಡೀಪುರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

August 9, 2018

ಗುಂಡ್ಲುಪೇಟೆ:  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯ ಸಹಯೋದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾ ನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆ.9 (ಗುರುವಾರ) ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು ತಿಳಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಗಸ್ಟ್ 9 ರಂದು ಬೆಳಗ್ಗೆ…

1 2 3
Translate »