Tag: Bharathinagar

ರಸ್ತೆ ಬದಿ ವ್ಯಾಪಾರಿಗಳ ಸಂಘದ ಕಚೇರಿ ಉದ್ಘಾಟನೆ
ಮಂಡ್ಯ

ರಸ್ತೆ ಬದಿ ವ್ಯಾಪಾರಿಗಳ ಸಂಘದ ಕಚೇರಿ ಉದ್ಘಾಟನೆ

June 20, 2018

ಭಾರತೀನಗರ:  ಇಲ್ಲಿನ ರಸ್ತೆ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯನ್ನು ಎಸ್‍ಐ ಅಯ್ಯನಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಿಮ್ಮ ಕ್ಷೇಮಾಭಿವೃದ್ಧಿಗೆ ಸ್ವಂತ ನಿವೇಶನ ಪಡೆ ದಾಗ ಮಾತ್ರ ಇತರೆ ಸಮಸ್ಯೆಗಳಿಂದ ಪಾರಾ ಗಲು ಸಾಧ್ಯ. ಇಲ್ಲದಿದ್ದರೆ ಪ್ರತಿ ದಿನ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎಂದರು. ರಸ್ತೆ ಬದಿ ವ್ಯಾಪಾರ ಮಾಡುವ ವೇಳೆ ಅಪಘಾತಗಳು ಸಂಭವಿಸುತ್ತವೆ. ಜೊತೆಗೆ ಗ್ರಾಪಂ, ಪೊಲೀಸ್ ಇಲಾಖೆಗಳಿಂದ ಅನುಮತಿ ಸಿಗದೇ ಅಕ್ರಮವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಬೇಕಾ ಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ….

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಮಂಡ್ಯ

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

June 17, 2018

ಭಾರತೀನಗರ:  ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮದ್ದೂರು ಪಟ್ಟಣದಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಇಲ್ಲಿನ ಕಾವೇರಿ ನೀರಾವರಿ ನಿಗಮದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ರಾಜ್ಯ ಸಚಿವನಾಗಿರುವುದರಿಂದ ಕ್ಷೇತ್ರದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಪಟ್ಟಣದಲ್ಲಿ ಕಾಲ್ ಸೆಂಟರ್ ತೆರೆಯಲಿದ್ದು, ಈ ಕೇಂದ್ರ ಬೆಳಗ್ಗೆ 8 ರಿಂದ ಮಧ್ಯರಾತ್ರಿ 12ರವರೆಗೆ ಕಾರ್ಯ ನಿರ್ವಹಿಸಲಿದೆ. ಇಲ್ಲಿಗೆ ದೂರು ನೀಡಿದರೆ ಶೀಘ್ರವಾಗಿ ಅದನ್ನು ಬಗೆಹರಿಸಲು…

ಜೀವನ ಸಾರ್ಥಕಕ್ಕೆ ಸಮಾಜ ಸೇವೆ ಅವಶ್ಯ
ಮಂಡ್ಯ

ಜೀವನ ಸಾರ್ಥಕಕ್ಕೆ ಸಮಾಜ ಸೇವೆ ಅವಶ್ಯ

June 9, 2018

ಭಾರತೀನಗರ:  ಮಾನವನ ಜೀವನ ಸಾರ್ಥಕವಾಗಬೇಕಾದರೆ ಸಮಾಜದ ಯಾವ ರಂಗದಲ್ಲಾದರೂ ಸೇವೆ ಸಲ್ಲಿಸ ಬೇಕೆಂದು ಭಾರತೀ ಎಜುಕೇಷನ್ ಟ್ರಸ್ಟ್‍ನ ಕಾರ್ಯಾಧ್ಯಕ್ಷ ಮಧು ಜಿ. ಮಾದೇಗೌಡ ತಿಳಿಸಿದರು. ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‍ನ ಭಾರತೀ ಕಾಲೇಜಿನ ರಾಸಾಯನಶಾಸ್ತ್ರ ಉಪ ನ್ಯಾಸಕ ಪ್ರೊ.ಎಂ.ಟಿ.ಪುಟ್ಟಸ್ವಾಮಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಅಭಿನಂದಿಸಿ ಅವರ ಮಾತನಾಡಿದರು. ಮನುಷ್ಯನ ಜೀವನದಲ್ಲಿ ವೃತ್ತಿ, ಪ್ರವೃತ್ತಿ ಮತ್ತು ನಿವೃತ್ತಿ ಬಹಳ ಮುಖ್ಯವಾದ ಘಟಕ. ಈ ಘಟಕವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದಾಟಬೇಕಾಗಿದೆ. ಈ ಮಧ್ಯೆ…

ಕೆಎಸ್‍ಆರ್ ಟಿಸಿ ಬಸ್ ಹರಿದು ವ್ಯಕ್ತಿ ಸಾವು
ಮಂಡ್ಯ

ಕೆಎಸ್‍ಆರ್ ಟಿಸಿ ಬಸ್ ಹರಿದು ವ್ಯಕ್ತಿ ಸಾವು

June 9, 2018

ಭಾರತೀನಗರ: ಬೈಕ್‍ನಿಂದ ಆಯತಪ್ಪಿ ಬಿದ್ದ ವ್ಯಕ್ತಿ ತಲೆ ಮೇಲೆ ಕೆಎಸ್‍ಆರ್ ಟಿಸಿ ಬಸ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೌಡಯ್ಯನ ದೊಡ್ಡಿ ಗೇಟ್ ಬಳಿ ಜರುಗಿದೆ. ಮಂಡ್ಯ ತಾಲೂಕಿನ ಕಬ್ಬನಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಯ್ಯ(50) ಸಾವನ್ನಪ್ಪಿದವರು. ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಕಾರ್ಯ ನಿರ್ವ ಹಿಸುತ್ತಿದ್ದ ಶಿವಲಿಂಗಯ್ಯ ಕಾರ್ಯ ನಿಮಿತ್ತ ಕೆ.ಎಂ.ದೊಡ್ಡಿಗೆ ತಮ್ಮ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೆ.ಎಂ.ದೊಡ್ಡಿ ಸಿಪಿಐ ನವೀನ್, ಎಸ್‍ಐ ಅಯ್ಯನಗೌಡ ಸ್ಥಳಕ್ಕೆ…

ಚಿಕ್ಕರಸಿನಕೆರೆ ಡೈರಿಗೆ ಹೊನ್ನಯ್ಯ ಅವಿರೋಧ ಆಯ್ಕೆ
ಮಂಡ್ಯ

ಚಿಕ್ಕರಸಿನಕೆರೆ ಡೈರಿಗೆ ಹೊನ್ನಯ್ಯ ಅವಿರೋಧ ಆಯ್ಕೆ

June 5, 2018

ಭಾರತೀನಗರ:  ಚಿಕ್ಕರಸಿನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಜ್ಜಿ ಹೊನ್ನಯ್ಯ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಕಜ್ಜಿ ಹೊನ್ನಯ್ಯ ಮಾತ ನಾಡಿ, ಹೈನುಗಾರಿಕೆಯಿಂದ ರೈತರು ನೆಮ್ಮದಿಯ ಜೀವನ ನಡೆಸಬಹುದು. 15 ದಿನಕ್ಕೊಮ್ಮೆ ಸಂಘಕ್ಕೆ ಹಾಲು ಸರಬರಾಜು ಮಾಡಿ ರೈತರು ಹಣ ಪಡೆಯಬಹುದು. ಆದ್ದರಿಂದ ರೈತರು ಹೆಚ್ಚಾಗಿ ಹೈನುಗಾರಿಕೆ ಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಸಲಹೆ ನೀಡಿದರು. ನನ್ನ ಅಧಿಕಾರ ಅವಧಿಯಲ್ಲಿ ಸಂಘವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕ ವಾಗಿ…

ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಿ
ಮಂಡ್ಯ

ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಿ

June 4, 2018

ಭಾರತೀನಗರ: ನೂತನ ಸರ್ಕಾರ ಗೂಂಡಾ ವರ್ತನೆಗಳನ್ನು ತಡೆದು, ಸಮಾಜ ದಲ್ಲಿ ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾ ಧ್ಯಕ್ಷ ಜಿ.ಎನ್.ನಾಗರಾಜು ಆಗ್ರಹಿಸಿದರು. ಇಲ್ಲಿನ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪ್ರಾಂತ ಕೃಷಿ ಕೂಲಿಕಾರರ ಸಂಘ ಸ್ವಾಗತಿಸುತ್ತದೆ. ಈ ಸರ್ಕಾರ ಗೂಂಡಾ ವರ್ತನೆಗಳನ್ನು ಮಟ್ಟಹಾಕಿ ಕೋಮು ಗಲಭೆಗಳನ್ನು ನಡೆ ಯದಂತೆ ನೋಡಿಕೊಳ್ಳುವುದರ ಜೊತೆಗೆ ದಲಿತರ ಮೇಲೆ, ಮಹಿಳೆಯರ…

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ
ಮಂಡ್ಯ

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ

May 30, 2018

ಭಾರತೀನಗರ:  ಸಾಧನೆ ಎಂಬುದು ಉಳ್ಳವರ ಸ್ವತ್ತಲ್ಲ. ಅದು ಸಾಧಕನ ಸ್ವತ್ತು ಎಂಬ ನಾಣ್ನುಡಿಯಂತೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಯುವಕ ಬಿ.ಬೋರೇಗೌಡ ಅವರು ಸಾಧನೆಯ ಶಿಖರವೇರಿ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೌದು ಬೋರೇಗೌಡ ಅವರು 4 ವರ್ಷ ದವರಾಗಿದ್ದಾಗಲೇ ಪೊಲೀಯೊ ಪೀಡಿತ ರಾಗಿ ಬಲಗಾಲಿನ ಸ್ವಾಧೀನ ಕಳೆದುಕೊಂಡರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು ಇತ್ತೀಚೆಗೆ ಥೈಲ್ಯಾಂಡ್‍ನ ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್ ಟ್ಯ್ರಾಂಕ್ ಅಂಡ್ ಟರ್ಫ್ ಫೆಡರೇಷನ್(ಎಟಿಟಿಎಫ್) ಇಂಟರ್ ನ್ಯಾಷನಲ್ ಫ್ಯಾರ ಅಥ್ಲೆಟಿಕ್ಸ್ ಚಾಂಪಿಯನ್…

ಯುವ ಜನರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ವಿಫಲ
ಮಂಡ್ಯ

ಯುವ ಜನರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ವಿಫಲ

May 3, 2018

ಭಾರತೀನಗರ: ಯುವ ಜನರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಆರೋಪಿಸಿದರು. ಇಲ್ಲಿಗೆ ಸಮೀಪದ ಬೊಪ್ಪಸಮುದ್ರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಆಳುವವರಿಗೆ ದೂರದೃಷ್ಟಿಯ ಕೊರತೆ ಇದ್ದಲ್ಲಿ ಯಾವುದೇ ಹೊಸ ಯೋಜನೆ ಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿಯೇ ಇಂದು ವಿಶ್ವಮಾನ್ಯವಾ ಗಿರುವ ಬೆಂಗಳೂರು ನರಕ ಸದೃಶವಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಬರುತ್ತಿದ್ದರೂ ಅದು ಕೇವಲ ಬೆಂಗಳೂರಿಗೆ ಮಾತ್ರ…

ರೈತರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ: ಡಿಸಿಟಿ
ಮಂಡ್ಯ

ರೈತರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ: ಡಿಸಿಟಿ

April 25, 2018

ಭಾರತೀನಗರ: ರಾಜ್ಯದ ರೈತರಿಗೆ ರೈತಪರ ನಿಲುವು ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್‍ನ ಅನಿವಾರ್ಯತೆ ಇದೆ ಎಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ತಿಳಿಸಿದರು. ಕ್ಷೇತ್ರದ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯ ಕಾಡುಕೊತ್ತನಹಳ್ಳಿ, ಭುಜವಳ್ಳಿ, ಕಪರನಕೊಪ್ಪಲು ಇನ್ನಿತರೆ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, 20 ತಿಂಗಳ ಅಧಿಕಾರಾವಧಿಯಲ್ಲಿ ರೈತಪರ ಕೆಲಸ ಮಾಡಿದ್ದ ಹೆಚ್.ಡಿ.ಕುಮಾರ ಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಲಿ ದ್ದಾರೆ ಎಂದರು. ಇಸ್ರೇಲ್ ಮಾದರಿ ಕೃಷಿ ಜಾರಿಗೊಳಿ ಸುವ ಇಚ್ಛಾಶಕ್ತಿ ಜೆಡಿಎಸ್ ವರಿಷ್ಠರಿಗಿದೆ. ರೈತರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಂಕಷ್ಟ…

1 2
Translate »