ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಿ
ಮಂಡ್ಯ

ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಿ

June 4, 2018

ಭಾರತೀನಗರ: ನೂತನ ಸರ್ಕಾರ ಗೂಂಡಾ ವರ್ತನೆಗಳನ್ನು ತಡೆದು, ಸಮಾಜ ದಲ್ಲಿ ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾ ಧ್ಯಕ್ಷ ಜಿ.ಎನ್.ನಾಗರಾಜು ಆಗ್ರಹಿಸಿದರು.

ಇಲ್ಲಿನ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪ್ರಾಂತ ಕೃಷಿ ಕೂಲಿಕಾರರ ಸಂಘ ಸ್ವಾಗತಿಸುತ್ತದೆ. ಈ ಸರ್ಕಾರ ಗೂಂಡಾ ವರ್ತನೆಗಳನ್ನು ಮಟ್ಟಹಾಕಿ ಕೋಮು ಗಲಭೆಗಳನ್ನು ನಡೆ ಯದಂತೆ ನೋಡಿಕೊಳ್ಳುವುದರ ಜೊತೆಗೆ ದಲಿತರ ಮೇಲೆ, ಮಹಿಳೆಯರ ಮೇಲೆ, ಅಲ್ಪಸಂಖ್ಯಾತರ ಮೇಲೆ, ಮುಸ್ಲಿಮರ ಮೇಲೆ, ಚರ್ಚ್‍ಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಮೈತ್ರಿ ಸರ್ಕಾರವನ್ನು ಅನೈತಿಕ ಸರ್ಕಾರ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಜ್ಯಾತ್ಯಾತೀತತೆಗೆ ಬದ್ದವಾಗಿರುವ ಜೆಡಿಎಸ್ ಪಕ್ಷ ಕಾಂಗ್ರೆಸ್‍ನೊಂದಿಗೆ ಸರ್ಕಾರ ರಚಿಸಿದೆ. ಒಂದು ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ಆಗ ಅನೈತಿಕ ಸರ್ಕಾರವಾಗುತ್ತಿತ್ತು ಎಂದರು. ರಾಜ್ಯದ ಜನತೆ ಬಿಜೆಪಿಯನ್ನು ಒಪ್ಪಿ ಕೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಬಹು ಮತ ನೀಡಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂಬುವುದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಬೇಕಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಇಂತಹ ಅಪನಂಬಿಕೆ ಗೊಂದಲ ಹೋಗ ಲಾಡಿಸಬೇಕಾದರೆ ಉತ್ತಮ ಆಡಳಿತ ನೀಡಬೇಕೆಂದು ಸಲಹೆ ನೀಡಿದರು.

ಸಾಲಮನ್ನಾ: ರೈತರ ಸಾಲಮನ್ನಾ ವಿಚಾರವಾಗಿ ಭರವಸೆ ನೀಡಿದಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಅತೀ ಹೆಚ್ಚು ಕೂಲಿಕಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ರಚನೆಗೊಂಡ ದಿನದಿಂದಲೂ ಕೃಷಿ ಕೂಲಿಕಾರರ ಬಗ್ಗೆ ಚಕಾರ ಎತ್ತದಿ ರುವುದು ನಮಗೆ ನೋವು ತಂದಿದೆ. ಆದ್ದ ರಿಂದ ಕೂಲಿಕಾರರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಈ ಮೈತ್ರಿ ಸರ್ಕಾರ ಪರಿಹರಿಸ ಬೇಕು. ಅದೇ ರೀತಿ ಕೂಲಿಕಾರರ ಸಭೆ ಕರೆದು ಸಮಾಲೋಚನೆ ಮಾಡಿ ಉದ್ಯೋಗ ಖಾತ್ರಿ ಯೋಜನೆ ಕಲ್ಪಿಸಿಕೊಡುವುದರ ಜೊತೆಗೆ ಪ್ರನಾಳಿಕೆಯಲ್ಲಿ ಹೇಳಿದಂತೆ ಹೆಚ್ಚು ವೇತನ, ಮನೆ, ನಿವೇಶನ ಸಿಗುವಂತೆ ನೋಡಿ ಕೊಳ್ಳಬೇಕೆಂದರು. ಇದೇ ವೇಳೆ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಕಾರ್ಯ ದರ್ಶಿ ಬಿ.ಹನುಮೇಶ್, ಮುಖಂಡರಾದ ಬಿ.ಎಂ.ಶಿವಮಲ್ಲಯ್ಯ, ಸರೋಜಮ್ಮ, ಟಿ.ಸಿ. ವಸಂತ, ಚಂದ್ರು ಸೇರಿದಂತೆ ಇತರರಿದ್ದರು.

Translate »