ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ
ಮಂಡ್ಯ

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ

May 30, 2018

ಭಾರತೀನಗರ:  ಸಾಧನೆ ಎಂಬುದು ಉಳ್ಳವರ ಸ್ವತ್ತಲ್ಲ. ಅದು ಸಾಧಕನ ಸ್ವತ್ತು ಎಂಬ ನಾಣ್ನುಡಿಯಂತೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಯುವಕ ಬಿ.ಬೋರೇಗೌಡ ಅವರು ಸಾಧನೆಯ ಶಿಖರವೇರಿ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಹೌದು ಬೋರೇಗೌಡ ಅವರು 4 ವರ್ಷ ದವರಾಗಿದ್ದಾಗಲೇ ಪೊಲೀಯೊ ಪೀಡಿತ ರಾಗಿ ಬಲಗಾಲಿನ ಸ್ವಾಧೀನ ಕಳೆದುಕೊಂಡರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು ಇತ್ತೀಚೆಗೆ ಥೈಲ್ಯಾಂಡ್‍ನ ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್ ಟ್ಯ್ರಾಂಕ್ ಅಂಡ್ ಟರ್ಫ್ ಫೆಡರೇಷನ್(ಎಟಿಟಿಎಫ್) ಇಂಟರ್ ನ್ಯಾಷನಲ್ ಫ್ಯಾರ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್-2018ರಲ್ಲಿ ದೇಶದ ಪರ ಭಾಗ ವಹಿಸಿ ಶಾಟ್‍ಪುಟ್‍ನಲ್ಲಿ 1 ಬೆಳ್ಳಿ ಪದಕ, ಡಿಸ್ಕಸ್ ಥ್ರೋನಲ್ಲಿ 1 ಚಿನ್ನದ ಪದಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೋರೇಗೌಡ ಓದಿದ್ದು ಎಸ್‍ಎಸ್‍ಎಲ್‍ಸಿ ಯಾದರೂ, ಚಂಡೀಗಡ್, ಹರಿಯಾಣ, ಪಂಜಾಬ್, ಹೊಸದಿಲ್ಲಿ, ಉತ್ತರಪ್ರದೇಶ, ರಾಜಸ್ತಾನ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ನಡೆದ ರಾಜ್ಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕಗಳನ್ನು ಪಡೆದಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ 10 ಚಿನ್ನ, 9 ಬೆಳ್ಳಿ, 3 ಕಂಚಿನ ಪದಕಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

ಬದುಕಿಗೆ ಆಸರೆಯಾದ ಕೃಷಿ: ಬಾಲ್ಯ ದಲ್ಲಿಯೇ ತಂದೆಯನ್ನು ಕಳೆದುಕೊಂಡ ಬೋರೇಗೌಡ ಅವರು ಹಿರಿಯ ಮಗನಾಗಿ ದ್ದರಿಂದ ಕುಟುಂಬ ಜವಾಬ್ದಾರಿ ನಿಭಾಯಿ ಸುವ ಅನಿರ್ವಾಯತೆ ಎದುರಾಯಿತು. ಇದರಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಅಂಗವಿಕಲನಾಗಿದ್ದರೂ, ಧೃತಿಗೆ ಡದೇ ತಮ್ಮ 2 ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದರು.
ಪ್ರಸ್ತುತ ಅವರು ತಮ್ಮನನ್ನು ಬಿಬಿಎಂ ವರೆಗೆ ಓದಿಸಿ, ತಂಗಿಗೆ ಮದುವೆ ಮಾಡಿ ದ್ದಾರೆ. ಮತ್ತೊಬ್ಬ ತಂಗಿಗೂ ಉತ್ತಮ ಜೀವನ ರೂಪಿಸುವ ಜವಾಬ್ದಾರಿಯೂ ಅವರ ಮೇಲಿದೆÉ. ಇವುಗಳ ನಡುವೆ ಅವರಿಗೆ ಎದುರಾದ ಸಮಸ್ಯೆಗಳನ್ನು ಎದುರಿಸಿ ಕ್ರೀಡಾಸಕ್ತಿಯನ್ನು ಕಳೆದುಕೊಳ್ಳದೇ ಅವರು ಸಾಧನೆ ಮಾಡಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ ಮೂಡಿಸಿದೆ.
ಎರಡು ಬಾರಿ ವಂಚಿತರಾಗಿದ್ದರು: ಬೋರೇಗೌಡ ಅವರ ಸಾಧನೆ ಗಮನಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾಸಂಸ್ಥೆಯು ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟಿತು. ಆದರೆ, ಆರ್ಥಿಕ ತೊಂದರೆ ಯಿಂದ 2015ರಲ್ಲಿ ದುಬೈ ಹಾಗೂ 2016ರ ಆಗಸ್ಟ್‍ನಲ್ಲಿ ಸಿಂಗಾಪುರದಲ್ಲಿ ನಡೆದ ಅಂತರ ರಾಷ್ಟ್ರೀಯ ಕ್ರೀಡಾಕೂಟ ಗಳಿಂದ ವಂಚಿತರಾಗಿದ್ದರು.

ಮತ್ತೇ ಅವÀರಿಗೆ 2017ರ ಜನವರಿ ಮತ್ತು ಮಾರ್ಚ್‍ನಲ್ಲಿ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ 2 ಬಾರಿಯೂ ಅವÀಕಾಶ ಪಡೆದು ಪ್ರತಿನಿಧಿಸಿ ಒಂದು ಬೆಳ್ಳಿ, ಒಂದು ಕಂಚಿನ ಪದಕವನ್ನು ಪಡೆದುಕೊಂಡರು. ಪ್ರಸಕ್ತ ವರ್ಷ ಏಪ್ರಿಲ್ ನಲ್ಲಿ ಶ್ರೀಲಂಕಾದಲ್ಲಿ ನಡೆದ ಶಾಟ್‍ಪುಟ್, ಡಿಸ್ಕಸ್ ಥ್ರೋನಲ್ಲಿ 2 ಬೆಳ್ಳಿಪದಕ ಪಡೆದು ಕೊಂಡರು. ಜೊತೆಗೆ, ಮೇ 15ರಂದು ಥೈಲ್ಯಾಂಡ್ ನಲ್ಲಿ ನಡೆದ ಶಾಟ್‍ಫುಟ್‍ನಲ್ಲಿ ಬೆಳ್ಳಿಪದಕ, ಡಿಸ್ಕಸ್ ಥ್ರೋನಲ್ಲಿ ಒಂದು ಚಿನ್ನದ ಪದಕ ವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕ್ರೀಡಾಸಂಸ್ಥೆಯಿಂದ ತರಬೇತಿ: ಬೋರೇ ಗೌಡ ಅವರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿದ ಕರ್ನಾಟಕ ರಾಜ್ಯ ಅಂಗವಿಕಲರÀ ಕ್ರೀಡಾ ಸಂಸ್ಥೆಯು ಅವರಿಗೆ ತರಬೇತಿ ನೀಡುತ್ತಿದೆ. ಕ್ರೀಡಾ ತರಬೇತುದಾರರಾದ ಬೆಂಗಳೂರು ತುಳಸಿಧರ್, ಕುಮಾರಸ್ವಾಮಿ ಅವರು ತರಬೇತಿ ನೀಡುವ ಮೂಲಕ ಬೋರೇ ಗೌಡರವರಿಗೆ ಊರುಗೋಲಾಗಿದ್ದಾರೆ.

Translate »