ಚಾಮರಾಜನಗರ: ತಾಲೂಕಿನ ಆನೆ ಮಡುವಿನ ಕೆರೆ ತುಂಬಿಸುವ ಯೋಜನೆ ಕಾಮ ಗಾರಿಗೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆನೆ ಮಡುವಿನ ಕೆರೆಗೆ ನೀರು ತುಂಬಿಸಬೇಕೆಂಬುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಹಾಗಾಗಿ 1.20 ಕೋಟಿ ರೂ. ವೆಚ್ಚದ ಈ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ ಎಂದರು. ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್‍ನಿಂದ ಮತ್ತೊಂದು ಸಂಪರ್ಕ ಪೈಪ್‍ಲೈನ್…
ಬಂಡೀಪುರ, ಬಿಳಿಗಿರಿರಂಗನಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿ; ನೂರಾರು ಎಕರೆ ಕಾಡು ನಾಶ
February 22, 2019ಗುಂಡ್ಲುಪೇಟೆ: ತಾಲೂ ಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದಕೆರೆ ಅರಣ್ಯ ವಲಯದ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಬೆಂಕಿ ಕಾಣಿಸಿ ಕೊಂಡು ಸುಮಾರು 300 ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಭಸ್ಮವಾಗಿದೆ. ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಒಣಗಿದ್ದ ಹುಲ್ಲಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರ ಬಹುದು ಎನ್ನಲಾಗಿದ್ದು, ಪರಿಣಾಮ ನೂರಾರು ಎಕರೆ ಕಾಡು ಭಸ್ಮವಾಗಿದೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಗುಡ್ಡದ ಸಮೀಪಕ್ಕೆ ತೆರಳಲು ಸಾಧ್ಯ ವಾಗದ ಪರಿಣಾಮ…
ಮಲೈಮಹದೇಶ್ವರ ಬೆಟ್ಟದಲ್ಲಿ ಹನೂರು ತಾಲೂಕು ಸಾಹಿತ್ಯ ಸಮ್ಮೇಳನ
February 21, 2019ಹನೂರು: ಹನೂರು ತಾಲೂಕು ರಚನೆಯಾದ ಬಳಿಕ ಪುಣ್ಯಸ್ಥಳ ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯು ತ್ತಿರುವುದು ಚರಿತ್ರೆ ಎಂದು ಅಂತರಾಷ್ಟ್ರೀಯ ಜಾನಪದ ಗಾಯಕರು ಮತ್ತು ವಿದ್ವಾಂಸ ರಾದ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು. ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಂಡಿದ್ದ ಹನೂರು ತಾಲೂಕು ಪ್ರಥಮ ಸಾಹಿತ್ಯ sಸಮ್ಮೇಳನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಅನೇಕ ಕಲಾವಿದ ರಿದ್ದು ಅವರಿಂದ ದಿನಕ್ಕೊಂದು ತಂಡವನ್ನು ಕರೆತಂದು…
ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಮಹಿಳೆ ಸಾವು ಮತ್ತೊಬ್ಬರಿಗೆ ತೀವ್ರ ಗಾಯ
February 21, 2019ಚಾಮರಾಜನಗರ: ವಾಯು ವಿಹಾರಕ್ಕೆ ತೆರಳಿದ್ದವರಿಗೆ ಬೈಕ್ ಡಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ದೊಡ್ಡ ರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ದೊಡ್ಡರಾಯಪೇಟೆ ಗ್ರಾಮದ ಗುರುಸಿದ್ದಯ್ಯ ಪತ್ನಿ ನಂಜಮ್ಮ (42) ಮೃತಪಟ್ಟವರು. ಅದೇ ಗ್ರಾಮದ ಕುಮಾರ್ ಎಂಬುವವರು ತೀವ್ರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜಮ್ಮ, ಕುಮಾರ ಮತ್ತು ಮತ್ತೊಬ್ಬರು ವಾಯುವಿಹಾರದಲ್ಲಿ ತೊಡಗಿದ್ದರು. ಇವರು ದೊಡ್ಡರಾಯಪೇಟೆ ಕ್ರಾಸ್ ಕಡೆಯಿಂದ ಗ್ರಾಮದ ಕಡೆಗೆ ತೆರಳುತ್ತಿದ್ದರು….
ಗುಂಡ್ಲುಪೇಟೆ ಬಳಿ ಬೇಟೆಗಾರ ಬಂಧನ
February 21, 2019ಗುಂಡ್ಲುಪೇಟೆ: ಅಕ್ರಮವಾಗಿ ಹೊಂದಿದ್ದ ಬಂದೂಕಿನೊಡನೆ ವನ್ಯಜೀವಿಗಳ ಬೇಟೆಗೆ ತೆರಳಿದ್ದ ತಾಲೂ ಕಿನ ಬನ್ನೀತಾಳಪುರ ಗ್ರಾಮದ ಬೇಟೆಗಾರನನ್ನು ಜಿಲ್ಲಾ ಅಪರಾಧ ತಡೆ ವಿಭಾಗದ ಪೆÇಲೀಸರು ಬಂಧಿಸಿದ್ದಾರೆ. ತಾಲೂಕಿನ ಬನ್ನೀತಾಳಪುರ ಗ್ರಾಮದ ಸಿದ್ದಶೆಟ್ಟಿ ಎಂಬುವರ ಮಗ ಬಸವರಾಜು(40) ಬಂಧಿತ ಆರೋಪಿ. ಈತ ಬಂದೂಕು, ಟಾರ್ಚ್, ಮಚ್ಚು ಹಾಗೂ ಇತರ ಪರಿಕರಗಳೊಡನೆ ಬೇಟೆಗೆ ಹೊಂಚು ಹಾಕುತ್ತಿದ್ದಾಗ ಚಾಮರಾಜನಗರ ತಾಲೂಕಿನ ಅರಳೀಕಟ್ಟೆ ಸಮೀಪ ಬಂಧಿಸಿದ್ದಾರೆ. ಆರೋಪಿಯನ್ನು ಬಂದೂಕಿನೊಂದಿಗೆ ಚಾಮ ರಾಜನಗರ ಗ್ರಾಮಾಂತರ ಪೆÇಲೀಸ್ ಠಾಣೆಗೆ ಒಪ್ಪಿಸಿದ್ದು ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ…
ಮಾನಸಿಕ ಹಿಂಸೆ ಆರೋಪ ಬಾಲಮಂದಿರದ ಬಾಲಕಿಯರಿಂದ ಪ್ರತಿಭಟನೆ
February 21, 2019ಚಾಮರಾಜನಗರ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದ ಮೇಲ್ವಿಚಾರಕಿ ಮತ್ತು ಅಡುಗೆ ಮಾಡುವ ಸಿಬ್ಬಂದಿ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಾಲಮಂದಿರ ದಲ್ಲಿ ಇರುವ ಬಾಲಕಿಯರು ನಗರದ ಜಿಲ್ಲಾಡಳಿತ ಭವ ನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಭವನದ ಬಳಿ ದಿಢೀರ್ ಪ್ರತ್ಯಕ್ಷಗೊಂಡ ಬಾಲಮಂದಿರದ ಬಾಲಕಿ ಯರು ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು. ಬಾಲಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಕಿ ಹಾಗೂ ಅಡುಗೆ ಮಾಡುವ ಮಹಿಳೆ ಯನ್ನು ಈ ಕೂಡಲೇ ಬದಲಾಯಿಸಬೇಕು. ಈ ಬಗ್ಗೆ ನಾವು ಹಲವು ಬಾರಿ…
ರಾಜ್ಯದಲ್ಲಿ 11 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಸರ್ಕಾರ ಚಿಂತನೆ
February 21, 2019ಗುಂಡ್ಲುಪೇಟೆ: ರಾಜ್ಯಾದ್ಯಂತ 11 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಉದ್ದೇಶ ಸರ್ಕಾರದ ಮುಂದಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಂ.ಪುಟ್ಟರಂಗಶೆಟ್ಟಿ ಹೇಳಿದರು. ತಾಲೂಕಿನ ಹಂಗಳ ಗ್ರಾಮದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋ ಜಿಸಿದ್ದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮತ್ತು ಪ್ರಯೋಗಾಲಯ ಉದ್ಘಾಟನೆ ಸಮಾ ರಂಭವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಬದ ಲಾವಣೆ ತಂದು ಒಂದರಿಂದ ಹನ್ನೆರಡನೇ ತರಗತಿಯವರೆಗೆ…
ಮ.ಬೆಟ್ಟದಲ್ಲಿ ಇಂದು ಹನೂರು ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ
February 21, 2019ಕೊಳ್ಳೇಗಾಲ: ಹನೂರು ತಾಲೂಕಾಗಿ ಘೋಷಣೆಗೊಂಡ ಬಳಿಕ ಮಲೆಮಹ ದೇಶ್ವರರ ಸನ್ನಿ ಧಿಯಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.21 ರಂದು ಜರುಗಲಿದ್ದು, ಅದಕ್ಕಾಗಿ ಸಾಹಿತ್ಯ ಪರಿ ಷತ್ ಅಗತ್ಯ ಸಿದ್ದತೆ ಕೈಗೊಂಡಿದೆ. ಪ್ರಥಮ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಡಾ.ಕೇಶವನ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಫೆ.21ರ ಬೆಳಗ್ಗೆ ದ್ವಜಾ ರೋಹಣ ಜರುಗಲಿದ್ದು, ತಹಸಿಲ್ದಾರ್ ನಾಗರಾಜು, ಹನೂರು ಅಧ್ಯಕ್ಷ ಶ್ರೀನಿವಾಸ ನಾಯ್ಡು. ವೃತ್ತ ನಿರೀಕ್ಷಕ ಮಹೇಶ್ ಸಮ್ಮುಖದಲ್ಲಿ ರಾಷ್ಟ್ರದ್ವಜ, ಕನ್ನಡ ಧ್ವಜ ಹಾಗೂ ಪರಿಷತ್ತಿನ ದ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ…
ಜಿಲ್ಲಾ ಪಂಚಾಯತ್ ಸಿಇಓ ಹರೀಶ್ ಕುಮಾರ್ ವರ್ಗಾವಣೆ ನೂತನ ಸಿಇಓ ಸಿ.ಸತ್ಯಭಾಮ
February 21, 2019ಚಾಮರಾಜನಗರ: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾ ವಣಾ ಆಯೋ ಗದ ನಿರ್ದೇಶ ನದ ಮೇರೆಗೆ ರಾಜ್ಯ ಸರ್ಕಾರ ಜಿಪಂ ಸಿಇಓಗಳನ್ನು ವರ್ಗಾ ವರ್ಗಿ ಮಾಡಿದ್ದು, ಚಾಮರಾಜನಗರ ಜಿಪಂ ನೂತನ ಸಿಇಓ ಆಗಿ ಸಿ.ಸತ್ಯ ಭಾಮ ನಿಯೋಜಿಸಲ್ಪಟ್ಟಿದ್ದಾರೆ. ಈವರೆವಿಗೂ ಇಲ್ಲಿ ಜಿಲ್ಲಾ ಪಂಚಾ ಯಿತಿ ಸಿಇಓ ಆಗಿದ್ದ ಡಾ.ಕೆ. ಹರೀಶ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಪಂ ಸಿಇಓ ಆಗಿ ವರ್ಗಾವಣೆ ಮಾಡಲಾಗಿದೆ. ಸತ್ಯಭಾಮ ಅವರು ನಾಳೆ (ಫೆ.21)ಯೇ ಇಲ್ಲಿಗೆ ಆಗಮಿಸಿ ಅಧಿಕಾರ ಸ್ವೀಕರಿಸ ಲಿದ್ದಾರೆ ಎಂದು…
ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೂ ಪ್ರಬಲ ಆಕಾಂಕ್ಷಿ
February 21, 2019ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜ ನಗರ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ನಾನೊಬ್ಬ ಪ್ರಬಲ ಆಕಾಂಕ್ಷಿ ಆಗಿ ದ್ದೇನೆ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರು ಆದ ಹಿರಿಯ ವಕೀಲ ಎಸ್. ಅರುಣ್‍ಕುಮಾರ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ಕಳೆದ ಎಂಟಂತ್ತು ವರ್ಷ ಗಳಿಂದ ನಾನು ಬಿಜೆಪಿಯಲ್ಲಿ ಸಕ್ರಿಯ ಕಾರ್ಯ ಕರ್ತನಾಗಿ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಪಕ್ಷದ ರಾಜ್ಯ ಕಾರ್ಯಕಾರಿಣಿ…