ಗುಂಡ್ಲುಪೇಟೆ ಬಳಿ ಬೇಟೆಗಾರ ಬಂಧನ
ಚಾಮರಾಜನಗರ

ಗುಂಡ್ಲುಪೇಟೆ ಬಳಿ ಬೇಟೆಗಾರ ಬಂಧನ

February 21, 2019

ಗುಂಡ್ಲುಪೇಟೆ: ಅಕ್ರಮವಾಗಿ ಹೊಂದಿದ್ದ ಬಂದೂಕಿನೊಡನೆ ವನ್ಯಜೀವಿಗಳ ಬೇಟೆಗೆ ತೆರಳಿದ್ದ ತಾಲೂ ಕಿನ ಬನ್ನೀತಾಳಪುರ ಗ್ರಾಮದ ಬೇಟೆಗಾರನನ್ನು ಜಿಲ್ಲಾ ಅಪರಾಧ ತಡೆ ವಿಭಾಗದ ಪೆÇಲೀಸರು ಬಂಧಿಸಿದ್ದಾರೆ.

ತಾಲೂಕಿನ ಬನ್ನೀತಾಳಪುರ ಗ್ರಾಮದ ಸಿದ್ದಶೆಟ್ಟಿ ಎಂಬುವರ ಮಗ ಬಸವರಾಜು(40) ಬಂಧಿತ ಆರೋಪಿ. ಈತ ಬಂದೂಕು, ಟಾರ್ಚ್, ಮಚ್ಚು ಹಾಗೂ ಇತರ ಪರಿಕರಗಳೊಡನೆ ಬೇಟೆಗೆ ಹೊಂಚು ಹಾಕುತ್ತಿದ್ದಾಗ ಚಾಮರಾಜನಗರ ತಾಲೂಕಿನ ಅರಳೀಕಟ್ಟೆ ಸಮೀಪ ಬಂಧಿಸಿದ್ದಾರೆ. ಆರೋಪಿಯನ್ನು ಬಂದೂಕಿನೊಂದಿಗೆ ಚಾಮ ರಾಜನಗರ ಗ್ರಾಮಾಂತರ ಪೆÇಲೀಸ್ ಠಾಣೆಗೆ ಒಪ್ಪಿಸಿದ್ದು ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ತಡೆ ವಿಭಾಗದ ಇನ್ಸ್‍ಪೆಕ್ಟರ್ ಮಹ ದೇವಶೆಟ್ಟಿ, ಮುಖ್ಯಪೇದೆಗಳಾದ ಎಚ್.ಡಿ.ಸ್ವಾಮಿ, ರವಿ, ಮಹೇಶ, ಶ್ರೀನಿವಾಸಮೂರ್ತಿ, ನವೀನ್ ಕುಮಾರ್ ಭಾಗವಹಿಸಿದ್ದರು.

Translate »