ಮಾನಸಿಕ ಹಿಂಸೆ ಆರೋಪ ಬಾಲಮಂದಿರದ ಬಾಲಕಿಯರಿಂದ ಪ್ರತಿಭಟನೆ
ಚಾಮರಾಜನಗರ

ಮಾನಸಿಕ ಹಿಂಸೆ ಆರೋಪ ಬಾಲಮಂದಿರದ ಬಾಲಕಿಯರಿಂದ ಪ್ರತಿಭಟನೆ

February 21, 2019

ಚಾಮರಾಜನಗರ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದ ಮೇಲ್ವಿಚಾರಕಿ ಮತ್ತು ಅಡುಗೆ ಮಾಡುವ ಸಿಬ್ಬಂದಿ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಾಲಮಂದಿರ ದಲ್ಲಿ ಇರುವ ಬಾಲಕಿಯರು ನಗರದ ಜಿಲ್ಲಾಡಳಿತ ಭವ ನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಭವನದ ಬಳಿ ದಿಢೀರ್ ಪ್ರತ್ಯಕ್ಷಗೊಂಡ ಬಾಲಮಂದಿರದ ಬಾಲಕಿ ಯರು ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು.

ಬಾಲಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಕಿ ಹಾಗೂ ಅಡುಗೆ ಮಾಡುವ ಮಹಿಳೆ ಯನ್ನು ಈ ಕೂಡಲೇ ಬದಲಾಯಿಸಬೇಕು. ಈ ಬಗ್ಗೆ ನಾವು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನ ಆಗದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ವಿಷಯ ತಿಳಿದು ಸ್ಥಳಕ್ಕೆ ಸಿಡಿಪಿಓ ಜಯಶೀಲ ಅವರು, ಪ್ರತಿಭಟನಾಕಾರರ ಅಹವಾಲುಗಳನ್ನು ಕೇಳಿ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಇದಕ್ಕೆ ಮಕ್ಕಳು ಸೊಪ್ಪು ಹಾಕದೆ ಪ್ರತಿಭಟನೆ ಮುಂದುವರೆಸಿದರು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿ ಗಳು ಆಗಮಿಸಬೇಕು. ಅಲ್ಲಿಯ ತನಕ ಇಲ್ಲಿಂದ ತೆರಳು ವುದಿಲ್ಲ ಎಂದು ಪಟ್ಟು ಹಿಡಿದರು. ಸಚಿವರು ಬಾಲ ಮಂದಿರಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಬಗೆಹ ರಿಸುವರು ಎಂಬ ಭರವಸೆ ದೊರೆತಾಗ ಮಕ್ಕಳು ಪ್ರತಿಭಟನೆಯನ್ನು ಕೈಬಿಟ್ಟರು.

Translate »