ವಿಜ್ಞಾನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ
ಚಾಮರಾಜನಗರ

ವಿಜ್ಞಾನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

February 21, 2019

ಗುಂಡ್ಲುಪೇಟೆ: ಚಿತ್ರದುರ್ಗದ ಚಿಂತನಾ ಪ್ರಕಾ ಶನದ ವತಿಯಿಂದ ಆಯೋಜಿಸಿದ್ದ ಅಂತ ರಾಷ್ಟ್ರೀಯ ವಿಜ್ಞಾನ ಪರೀಕ್ಷೆಯಲ್ಲಿ ಪಟ್ಟಣದ ಸೇಂಟ್ ಜಾನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜಿ.ಎಸ್. ದರ್ಶನ್ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

2018-19ನೇ ಸಾಲಿಗೆ ಚಿತ್ರದುರ್ಗದ ಚಿಂತನಾ ಪ್ರಕಾಶನವು ಅಂತರಾಷ್ಟ್ರೀಯ ವಿಜ್ಞಾನ ಪರೀಕ್ಷೆಯನ್ನು ಆಯೋಜಿಸಿತ್ತು. ಇದರಲ್ಲಿ ಜಿ.ಎಸ್.ದರ್ಶನ್ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾನೆಂದು ತರಬೇತು ದಾರರಾದ ಶ್ರೀಮತಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ. ಈತ ಪತ್ರಕರ್ತ ಸೋಮಶೇಖರ್ ಮತ್ತು ಎಂ.ಶಾಂತ ಅವರ ಪುತ್ರ.

Translate »