ಚಾಮರಾಜನಗರ: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾ ವಣಾ ಆಯೋ ಗದ ನಿರ್ದೇಶ ನದ ಮೇರೆಗೆ ರಾಜ್ಯ ಸರ್ಕಾರ ಜಿಪಂ ಸಿಇಓಗಳನ್ನು ವರ್ಗಾ ವರ್ಗಿ ಮಾಡಿದ್ದು, ಚಾಮರಾಜನಗರ ಜಿಪಂ ನೂತನ ಸಿಇಓ ಆಗಿ ಸಿ.ಸತ್ಯ ಭಾಮ ನಿಯೋಜಿಸಲ್ಪಟ್ಟಿದ್ದಾರೆ.
ಈವರೆವಿಗೂ ಇಲ್ಲಿ ಜಿಲ್ಲಾ ಪಂಚಾ ಯಿತಿ ಸಿಇಓ ಆಗಿದ್ದ ಡಾ.ಕೆ. ಹರೀಶ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಪಂ ಸಿಇಓ ಆಗಿ ವರ್ಗಾವಣೆ ಮಾಡಲಾಗಿದೆ. ಸತ್ಯಭಾಮ ಅವರು ನಾಳೆ (ಫೆ.21)ಯೇ ಇಲ್ಲಿಗೆ ಆಗಮಿಸಿ ಅಧಿಕಾರ ಸ್ವೀಕರಿಸ ಲಿದ್ದಾರೆ ಎಂದು ಹೇಳಲಾಗಿದೆ.