ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೂ ಪ್ರಬಲ ಆಕಾಂಕ್ಷಿ
ಚಾಮರಾಜನಗರ

ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೂ ಪ್ರಬಲ ಆಕಾಂಕ್ಷಿ

February 21, 2019

ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜ ನಗರ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ನಾನೊಬ್ಬ ಪ್ರಬಲ ಆಕಾಂಕ್ಷಿ ಆಗಿ ದ್ದೇನೆ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರು ಆದ ಹಿರಿಯ ವಕೀಲ ಎಸ್. ಅರುಣ್‍ಕುಮಾರ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ಕಳೆದ ಎಂಟಂತ್ತು ವರ್ಷ ಗಳಿಂದ ನಾನು ಬಿಜೆಪಿಯಲ್ಲಿ ಸಕ್ರಿಯ ಕಾರ್ಯ ಕರ್ತನಾಗಿ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಪಕ್ಷದ ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರಾಗಿ ಮತ್ತು ಕಾನೂನು ಮತ್ತು ಸಂಸದೀಯ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷದ ಹಿರಿಯ ನಾಯಕರು ಸಾಮಾಜಿಕ ನ್ಯಾಯದಡಿಯಲ್ಲಿ ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ಮಾದಿಗ ಸಮಾಜಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ನಾನು ಈಗಾಗಲೇ ಸುತ್ತೂರು ಶ್ರೀಗಳು ಸೇರಿದಂತೆ ಜಿಲ್ಲೆಯ ನಾನಾ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀ ರ್ವಾದ ಪಡೆದಿದ್ದೇನೆ. ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದೇನೆ. ನನಗೆ ಟಿಕೆಟ್ ದೊರೆಯಲಿದೆ ಎಂಬ ವಿಶ್ವಾಸ ಇದೆ. ಆದರೂ ಸಹ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿರುವುದಾಗಿ ಎಸ್.ಅರುಣ್‍ಕುಮಾರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಾನು ಮೊದಲಿನಿಂದಲೂ ಹೋರಾಟ ಮಾಡಿ ಕೊಂಡು ಬಂದವನು. ಮೈಸೂರಿನಲ್ಲಿ ಉಪ್ಪಾರ ಸಮಾಜಕ್ಕೆ ಸೇರಬೇಕಾದ ಸುಮಾರು 40 ಕೋಟಿ ರೂ. ಮೌಲ್ಯದ ವಿದ್ಯಾರ್ಥಿ ನಿಲಯ ಉಳಿವಿಗಾಗಿ ಹೋರಾಟ ಮಾಡುವಾಗ ಮುಂಚೂಣಿಯಲ್ಲಿ ಇದ್ದೆ. ಮೈಸೂರಿನ ಅಪೋಲೋ ಆಸ್ಪತ್ರೆ ಬಳಿ ಇರುವ ಜಾಗ ಕುಂಬಾರ ಸಮಾಜಕ್ಕೆ ಸೇರಬೇಕಿತ್ತು. ಈ ಹೋರಾ ಟದಲ್ಲೂ ಪಾಲ್ಗೊಂಡಿದ್ದೆ. ಇದಲ್ಲದೆ ಅನೇಕ ಹೋರಾ ಟಗಳಲ್ಲಿ ಭಾಗವಹಿಸಿದ್ದೇನೆ. ಕ್ಷೇತ್ರದ ಮತದಾರರು ಅವಕಾಶ ಕಲ್ಪಿಸಿದರೆ, ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ಶಿಕ್ಷಣ ಕ್ಷೇತ್ರಕ್ಕೆ ಬೆನ್ನುಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಉಪ್ಪಾರ ಮಹಾಸಭಾ ಅಧ್ಯಕ್ಷ ಚಾ.ಹ.ಶಿವರಾಜು ಮಾತನಾಡಿ, ಮೈಸೂರಿನಲ್ಲಿ ಉಪ್ಪಾರ ಸಮಾಜಕ್ಕೆ ಸೇರಬೇಕಾದ 40 ಕೋಟಿ ರೂ. ಆಸ್ತಿಯನ್ನು ಉಳಿಸು ವಲ್ಲಿ ಅರುಣ್‍ಕುಮಾರ್ ಬಹಳ ಶ್ರಮ ವಹಿಸಿದ್ದಾರೆ. ಯಾವುದೇ ಶುಲ್ಕ ಪಡೆಯದೇ ಪ್ರಕರಣವನ್ನು ನಡೆಸಿದ್ದಾರೆ. ಹೀಗಾಗಿ ಉಪ್ಪಾರ ಸಮಾಜ ಅವರನ್ನು ಬೆಂಬಲಿಸಲಿದೆ ಎಂದರು.

ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಅಧ್ಯಕ್ಷ ಮಿಂಚು ನಾಗೇಂದ್ರ, ಹೋರಾಟಗಾರ ಗು.ಪುರುಷೋತ್ತಮ್, ಮುಖಂಡ ಪಾಪಣ್ಣ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

Translate »