ಛತ್ರಪತಿ ಶಿವಾಜಿ ಶೌರ್ಯ, ಪರಾಕ್ರಮ ಸ್ಮರಣೀಯ
ಚಾಮರಾಜನಗರ

ಛತ್ರಪತಿ ಶಿವಾಜಿ ಶೌರ್ಯ, ಪರಾಕ್ರಮ ಸ್ಮರಣೀಯ

February 21, 2019

ಚಾಮರಾಜನಗರ: ಛತ್ರಪತಿ ಶಿವಾಜಿ ಅವರ ಶೌರ್ಯ, ಪರಾಕ್ರಮ, ಸೇನಾ ಬಲ ಆಡಳಿತ ಸಾಮಥ್ರ್ಯ ಕೊಡುಗೆಯು ಸದಾ ಸ್ಮರಣೀಯವಾಗಿದೆ ಎಂದು ಜಿಲ್ಲಾ ಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಅವರು ಅಪ್ರತಿಮ ಹೋರಾ ಟಗಾರರಾಗಿದ್ದರು. ಸೇನಾ ಬಲವನ್ನು ಸಂಘ ಟಿಸಿದ್ದರು. ನೌಕಾಪಡೆ ಬಲವರ್ಧನೆ ಮಾಡಿದ ಕೀರ್ತಿಯು ಶಿವಾಜಿ ಅವರಿಗೆ ಸಲ್ಲುತ್ತದೆ. ಸಮರ ಕಲೆಯಲ್ಲಿ ಪರಿಣಿತಿ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.ತಾಯಿ ಜೀಜಾಬಾಯಿ ಅವರಿಂದ ಅನೇಕ ಮೌಲ್ಯ ಯುತ ವಿಚಾರಗಳನ್ನು ಬಾಲ್ಯದಲ್ಲಿಯೇ ಶಿವಾಜಿ ತಿಳಿದುಕೊಂಡಿದ್ದರು.

ಸ್ವರಾಜ್ಯ ಎಂಬ ಪರಿಕಲ್ಪನೆಗೆ ಅಡಿ ಪಾಯ ಹಾಕಿದ ಶ್ರೇಯಸ್ಸು ಶಿವಾಜಿ ಅವರಿಗೆ ಸಲ್ಲುತ್ತದೆ. ಸಾಮ್ರಾಜ್ಯದ ರಕ್ಷಣೆ ಸ್ವಾತಂ ತ್ರ್ಯಕ್ಕೆ ಅವಿರತವಾಗಿ ಶ್ರಮಿಸಿದ ಶಿವಾಜಿ ಅವರ ಬಗ್ಗೆ ಚಿಕ್ಕಂದಿನಿಂದಲೇ ಎಲ್ಲರೂ ಓದಿದ್ದೇವೆ ಎಂದರು.

ಛತ್ರಪತಿ ಶಿವಾಜಿ ಅವರ ಕುರಿತು ಮುಖ್ಯ ಉಪನ್ಯಾಸ ನೀಡಿದ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು, ಶಿವಾಜಿ ಅವರು ರಾಷ್ಟ್ರ, ಸನಾತನ ಧರ್ಮದ ಸಂರಕ್ಷಣೆ, ದೇಶದ ಪರಂಪರೆ ಉಳಿವಿಗೆ ಹೋರಾಟ ನಡೆಸಿದರು. ಸಾಮ್ರಾಜ್ಯದ ಶತೃಗಳನ್ನು ಸಮರ್ಥವಾಗಿ ಎದುರಿಸಿದ ಶಿವಾಜಿ ಅವರು ಅಂದೇ ಗೆರಿಲ್ಲಾ ಯುದ್ಧ ತಂತ್ರಗಳನ್ನು ಕಲಿತಿದ್ದರು ಎಂದರು.

ಶಿವಾಜಿ ಅವರಿಗಿದ್ದ ರಾಷ್ಟ್ರಭಕ್ತಿ ಅಪಾರ. ಶಿವಾಜಿ ಅವರು ನೈತಿಕತೆಗೆ ಹೆಸರಾಗಿದ್ದರು. ರಾಷ್ಟ್ರೀಯ ಚಿಂತನೆಗೆ ಶಿವಾಜಿ ಅವರು ಎಲ್ಲರಿಗೂ ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲ ಅವರ ಆಡಳಿತದ ಅವಧಿಯಲ್ಲಿ ಜಾರಿಗೊಳಿಸಿದ್ದ ಭೂಕಂದಾಯ, ಎಂಟು ಮಂತ್ರಿಗಳ ವ್ಯವಸ್ಥೆಯೂ ಸಹ ಆದರ್ಶವಾಗಿದೆ ಎಂದು ಸುರೇಶ್ ಋಗ್ವೇದಿ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ ಅವರು ಶಿವಾಜಿ ಅವರ ಹೋರಾಟ ಅಭಿಮಾನ ಮೂಡಿ ಸುತ್ತದೆ. ಶಿವಾಜಿ ಜಯಂತಿ ಆಚರಣೆ ಸಂದ ರ್ಭದಲ್ಲಿ ಶುಭ ಹಾರೈಸುವುದಾಗಿ ತಿಳಿಸಿದರು.

ತಾಪಂ ಉಪಾಧ್ಯಕ್ಷ ಜೆ. ಬಸವಣ್ಣ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ನಗರಸಭೆ ಸದಸ್ಯರಾದ ಭಾಗ್ಯ, ಚಿನ್ನಮ್ಮ, ನೀಲಮ್ಮ, ಕ್ಷತ್ರಿಯ ಮರಾಠ ಪರಿಷತ್ತಿನ ಮುಖಂಡರಾದ ವೆಂಕಟರಾವ್ ಸಾಠೆ, ಮಮತಾ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಚನ್ನಪ್ಪ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯ ಕ್ರಮಕ್ಕೂ ಮೊದಲು ಗುಂಡ್ಲುಪೇಟೆಯ ಎಸ್.ಬಿ. ನಾಗರಾಜು ಮತ್ತು ತಂಡದವ ರಿಂದ ಸುಗಮ ಸಂಗೀತ ಏರ್ಪಡಿಸಲಾಗಿತ್ತು.

Translate »