ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಬಗ್ಗೆ ಹಾಗೂ ರೈತ ಮಹಿಳೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಗರದ ಸಂತೇಮರಹಳ್ಳಿ ವೃತ್ತದ ಬಳಿ ಇರುವ ಅಂಚೆ ಕಚೇರಿ ಮುಂಭಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ರೈತರು ಜಮಾಯಿಸಿದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೆದ್ದಾರಿಯ ಮಧ್ಯಭಾಗಕ್ಕೆ ತೆರಳಿ ಧರಣಿ…
ಶ್ರೀ ಮಹದೇಶ್ವರ ದಾಸೋಹ ಭವನಕ್ಕೆ ಭೂಮಿ ಪೂಜೆ
November 20, 2018ಸಂತೇಮರಹಳ್ಳಿ: ಇಲ್ಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ 50 ಲಕ್ಷ ರೂ. ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಶ್ರೀಕ್ಷೇತ್ರ ಮಲ್ಲನಮೂಲೆ ಮಠಾಧ್ಯಕ್ಷರಾದ ಶ್ರೀ ಚನ್ನ ಬಸವಸ್ವಾಮೀಜಿ ಹಾಗೂ ಆಲಹಳ್ಳಿ ಪಟ್ಟದ ಮಠಾಧ್ಯಕ್ಷ ರಾದ ಶ್ರೀ ಶಿವಕುಮಾರಸ್ವಾಮೀಜಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಸಂತೇಮರಹಳ್ಳಿಯಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಭೀಮನ…
ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸೆ ಉತ್ತಮ: ಡಾ.ಮಾನಸ
November 19, 2018ಚಾಮರಾಜನಗರ: ಪ್ರಕೃತಿ ಚಿಕಿತ್ಸಾ ಪದ್ಧತಿ ಅತ್ಯಂತ ಸುಲಭವಾಗಿ ದೊರೆಯು ತ್ತಿದೆ. ನಮ್ಮ ದೇಶದ ಪದ್ಧತಿಯಾದ ಇದಕ್ಕೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮನುಷ್ಯನ ಆರೋಗ್ಯ ಕಾಪಾಡಲು ಪ್ರಕೃತಿ ಚಿಕಿತ್ಸೆ ಉತ್ತಮವಾಗಿದೆ ಎಂದು ವೈದ್ಯೆ ಡಾ.ಮಾನಸ ಹೆಳಿದರು. ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಭಾನುವಾರ ನಡೆದ ಮೊದಲ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.ಪ್ರಕೃತಿ ಚಿಕಿತ್ಸೆ ಆರ್ಯುವೇದದಂತೆ ಅತ್ಯಂತ ಹಳೆಯ ಪದ್ಧತಿಯಾಗಿದೆ. ಗ್ರಾಮೀಣ ಜನರು ಹೆಚ್ಚು ಪ್ರಕೃತಿ ಜೊತೆ ಒಡನಾಟ ಇಟ್ಟುಕೊಟ್ಟಿದ್ದರಿಂದಾಗಿಯೇ ಅವರು ನೂರಾರು ಕಾಲ…
ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಕಾವೇರಿ ಭೇಟಿ
November 19, 2018ಕುಡಿಯುವ ನೀರು, ವಿದ್ಯುತ್, ರಸ್ತೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಅಹವಾಲು ಸಲ್ಲಿಕೆ ಶೀಘ್ರದಲ್ಲಿಯೇ ಮೂಲ ಸೌಲಭ್ಯ ಕಲ್ಪಿಸುವ ಭರವಸೆ, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಹನೂರು: ಹನೂರು ತಾಲೂ ಕಿನ ಮಲೆಮಹದೇಶ್ವರ ಬೆಟ್ಟದ ಸಮೀ ಪವಿರುವ ಚಂಗಡಿ ಗ್ರಾಮಕ್ಕೆ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಅಧಿಕಾರಿಗಳ ಜೊತೆ ಭೇಟಿ ನೀಡಿ ಗ್ರಾಮ ಸ್ಥರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಬಗೆ ಹರಿಸುವ ಭರವಸೆ ನೀಡಿದರು. ದೂರುಗಳ ಸುರಿಮಳೆ: ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು…
ಉದ್ಯೋಗ ಖಾತರಿ ಯೋಜನೆ ಸದ್ಬಳಕೆಗೆ ಸಿಇಓ ಸಲಹೆ
November 18, 2018ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯುವ ಅವಕಾಶವಿದ್ದು, ಮಹಿಳಾ ಸ್ವ-ಸಹಾಯ ಸಂಘದ ಸದ ಸ್ಯರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಸಲಹೆ ನೀಡಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಳ್ಳ…
ಲೋಕಸಭಾ ಚುನಾವಣೆ ಚಾಮರಾಜನಗರ: ಕಾಂಗ್ರೆಸ್‍ನಿಂದ ಧ್ರುವನಾರಾಯಣ್, ಬಿಜೆಪಿಯಿಂದ …?
November 16, 2018ಚಾಮರಾಜನಗರ, ನ.15- ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಆರ್. ಧ್ರುವನಾರಾಯಣ್ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್‍ಗೆ ಪ್ರಬಲ ಎದುರಾಳಿ ಆಗಿರುವ ಬಿಜೆಪಿಯಿಂದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ಕ್ಷೇತ್ರಾದ್ಯಂದ ಈಗಾಗಲೇ ಆರಂಭವಾಗಿದೆ. ಲೋಕಸಭೆಗೆ 2019ರ ಏಪ್ರಿಲ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ರಾಜ್ಯದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಯಾರಿ ನಡೆಸುತ್ತಿವೆ. ಎಲ್ಲಾ ರೀತಿಯಲ್ಲೂ ಅಳೆದು-ಸುರಿದು ಅಭ್ಯರ್ಥಿಗಳ ಆಯ್ಕೆ ಗಾಗಿ ಪಕ್ಷಗಳು ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ….
ಜವರಾಯನ ಮನೆಗೆ ಕರೆದೊಯ್ದ ನೂತನ ಬೈಕ್! ರಸ್ತೆ ಅಪಘಾತದಲ್ಲಿ ಸವಾರ ಸಾವು, ಬೇಗೂರು ಬಳಿ ಘಟನೆ
November 16, 2018ಬೇಗೂರು: ಆತ ಜೀವನದಲ್ಲಿ ಹಲವು ಕನಸು ಕಟ್ಟಿಕೊಂಡಿದ್ದನು… ಹೊಸ ಬೈಕ್ ಖರೀದಿಸಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದನು… ಆದರೆ, ಆತನ ಸಂಭ್ರಮ ಒಂದೇ ವಾರದಲ್ಲಿ ಅಂತ್ಯಕೊಂಡಿದೆ… ನೂತನ ಬೈಕ್‍ನಲ್ಲಿ ದೇವಸ್ಥಾನ, ಬಂಧು ಬಳಗದವರ ಮನೆಗೆ ಓಡಾಡಬೇಕಿದ್ದ ಆತ ಜವರಾಯನ ಮನೆ ಸೇರಿರುವ ಹೃದಯ ವಿದ್ರಾಹಕ ಘಟನೆ ಬುಧವಾರ ರಾತ್ರಿ ಇಲ್ಲಿನ ಸಮೀಪದ ಹಿರಿಕಾಟಿ ಗೇಟ್ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಉಪ್ಪನಹಳ್ಳಿ ಗ್ರಾಮದ ನಿವಾಸಿ ರಾಜೇಶ್(25) ಬೈಕ್ ಖರೀದಿಸಿದ ಒಂದೇ ವಾರದಲ್ಲಿ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ. ಘಟನೆಯ…
ಗೃಹಿಣಿ ಆತ್ಮಹತ್ಯೆ
November 16, 2018ಚಾಮರಾಜನಗರ: ನಾದಿನಿಯ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಾಲೂಕಿನ ಹಂಡ್ರಕಳ್ಳಿಮೋಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹದೇವಶೆಟ್ಟಿ ಎಂಬುವವರ ಪತ್ನಿ ಭಾನುಮತಿ (35) ಆತ್ಮಹತ್ಯೆ ಮಾಡಿಕೊಂಡವರು. ವಿವರ: ಮಹದೇವಶೆಟ್ಟಿ ಹಾಗೂ ಭಾನುಮತಿ ದಂಪತಿ ವಾಸವಿದ್ದ ಮನೆಯಲ್ಲಿಯೇ ಮಹದೇವ ಶೆಟ್ಟಿ ಅವರ ಸಹೋದರಿ (ಭಾನುಮತಿ ಅತ್ತಿಗೆ) ಸಾಕಮ್ಮ ವಾಸವಿದ್ದರು. ಮನೆಯಲ್ಲಿ ಭಾನುಮತಿ ಹಾಗೂ ಸಾಕಮ್ಮ ಅವರಿಗೆ ಹೊಂದಣಿಕೆ ಇರಲಿಲ್ಲ. ಇದರಿಂದ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಭಾನುಮತಿ ಅವರು ಬುಧವಾರ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
November 14, 2018ಚಾಮರಾಜನಗರ: ರೈತರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಾ.ನಗರದಲ್ಲಿ ಮಂಗಳವಾರ ರೈತಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘಟನೆಯ, ಮುಖಂಡರು, ಪದಾಧಿ ಕಾರಿಗಳು ಹಾಗೂ ರೈತರು ಸಮಾ ವೇಶಗೊಂಡು, ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಅಲ್ಲಿಂದ…
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ: ಲಾಟರಿ ಮೂಲಕ ಒಲಿದ ಅದೃಷ್ಟ!
November 13, 2018ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಜಿ. ನಾಗೇಂದ್ರಕುಮಾರ್‍ಗೆ ಜಯ ಚಾಮರಾಜನಗರ: ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ (ಎಂಸಿಡಿಸಿಸಿ) ಬ್ಯಾಂಕ್‍ಗೆ ನ. 12 ರಂದು ನಡೆದ ಚುನಾವಣೆಯಲ್ಲಿ ಚಾ.ನಗರ ತಾಲೂಕು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಣಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ. ನಾಗೇಂದ್ರ ಕುಮಾರ್ ಲಾಟರಿ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ನಾಲ್ಕು ತಾಲೂಕು ಕ್ಷೇತ್ರಗಳಿಗೆ ನಡೆದ ಚುನಾವಣೆ ಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಪಿ. ಸುನೀಲ್ 19 ಮತಗಳನ್ನು ಪಡೆದು ಪುನರಾಯ್ಕೆ ಯಾಗಿದ್ದಾರೆ. ಕೊಳ್ಳೇಗಾಲ…