ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಕಾವೇರಿ ಭೇಟಿ
ಚಾಮರಾಜನಗರ

ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಕಾವೇರಿ ಭೇಟಿ

November 19, 2018
  • ಕುಡಿಯುವ ನೀರು, ವಿದ್ಯುತ್, ರಸ್ತೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಅಹವಾಲು ಸಲ್ಲಿಕೆ
  • ಶೀಘ್ರದಲ್ಲಿಯೇ ಮೂಲ ಸೌಲಭ್ಯ ಕಲ್ಪಿಸುವ ಭರವಸೆ, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು

ಹನೂರು: ಹನೂರು ತಾಲೂ ಕಿನ ಮಲೆಮಹದೇಶ್ವರ ಬೆಟ್ಟದ ಸಮೀ ಪವಿರುವ ಚಂಗಡಿ ಗ್ರಾಮಕ್ಕೆ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಅಧಿಕಾರಿಗಳ ಜೊತೆ ಭೇಟಿ ನೀಡಿ ಗ್ರಾಮ ಸ್ಥರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಬಗೆ ಹರಿಸುವ ಭರವಸೆ ನೀಡಿದರು.

ದೂರುಗಳ ಸುರಿಮಳೆ: ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಮಾತನಾಡಿ, ಯಾವುದೇ ಇಲಾಖೆ ಅಧಿ ಕಾರಿಗಳು ಗ್ರಾಮಕ್ಕೆ ಭೇಟಿ ನೀಡುವುದಿಲ್ಲ. ವಿದ್ಯುತ್ ಸಮಸ್ಯೆ ಉಂಟಾಗಿದೆ. 13 ತಿಂಗ ಳಿಂದ ಚೆಸ್ಕಾಂ ದುರಸ್ತಿ ಮಾಡಿಕೊಟ್ಟಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ನಾವು ಬೆಳೆದ ರಾಗಿಬೆಳೆ ಮುಂತಾದ ದವಸ-ಧಾನ್ಯಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲಾಗದೆ, ದಲ್ಲಾ ಳಿಗಳು ನಿಗದಿಪಡಿಸಿದ ಬೆಲೆಗೆ ನೀಡ ಬೇಕಾಗಿದೆ ಎಂದರು.

ಆರೋಗ್ಯ ಹದಗೆಟ್ಟರೇ ದಂಟಳ್ಳಿ ಗ್ರಾಮಕ್ಕೆ ಹೋಗಬೇಕು. ಈ ಮಾರ್ಗದಲ್ಲಿ ಅರಣ್ಯ ಪ್ರದೇಶವಿದ್ದು, ಅಧಿಕಾರಿಗಳು ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಮದುವೆಗೆ ಬಂದ ಮಕ್ಕಳಿಗೆ ಹೆಣ್ಣು ನೀಡು ತ್ತಿಲ್ಲ. ಜೊತೆಗೆ ಇಲ್ಲಿನ ಹೆಣ್ಣುಮಕ್ಕಳನ್ನು ಬೇರೆ ಊರಿನವರು ವಿವಾಹವಾಗಲು ಹಿಂಜ ರಿಯುತ್ತಿದ್ದಾರೆ. ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಕೌದಳ್ಳಿ ವೈದ್ಯಾಧಿಕಾರಿ ಸರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸೂಕ್ತ ಚಿಕಿತ್ಸೆ ಇಲ್ಲದೇ ಜಾನುವಾರುಗಳು ಸಾವನ್ನಪ್ಪುತ್ತಿವೆ. ಎಂಬ ಹಲವು ದೂರುಗ ಳನ್ನು ಡಿಸಿ ಮುಂದೆ ಗ್ರಾಮಸ್ಥರು ತೆರೆದಿಟ್ಟರು.

ಗ್ರಾಮಸ್ಥರಿಗೆ ಭರವಸೆ: ಗ್ರಾಮ ಪಂಚಾ ಯಿತಿಯಿಂದ ಇಲ್ಲಿರುವ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು ಅಧಿ ಕಾರಿಗಳು ಕ್ರಮವಹಿಸಬೇಕು. ರಸ್ತೆ ನಿರ್ಮಾ ಣಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಸಾರಿಗೆ ಇಲ್ಲದಿರುವು ದರಿಂದ ವಾರದಲ್ಲಿ ಮೂರು ದಿನ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ವೃದ್ಧರು ಮಾಸಿಕ ವೇತನ ಪಡೆಯುವ ಫಲಾನು ಭವಿಗಳ ಆಧಾರ್ ಲಿಂಕ್ ಪಡೆದು ಬ್ಯಾಂಕ್ ಖಾತೆ ತೆರೆದು ನಿಮ್ಮ ಖಾತೆಗೆ ನೇರವಾಗಿ ಹಣ ಬರಲು ಅಧಿಕಾರಿಗಳು ಕ್ರಮಕೈಗೊಳ್ಳ ಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಧ್ಯಕ್ಷ ಹೊನ್ನೂರು ಪ್ರಕಾಶ್, ಹನೂರು ಘಟಕದ ಅಧ್ಯಕ್ಷ ಕರಿಯಪ್ಪ, ಮುಖಂಡ ರಾದ ಚನ್ನೂರು ಶಾಂತಕುಮಾರ್, ಮ.ಬೆಟ್ಟ ಮಹೇಶ್, ಹೆಚ್ಚುವರಿ ಜಿಲ್ಲಾ ಧಿಕಾರಿ ಕೆ.ಎಂ.ಗಾಯತ್ರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಬಳಿಕ, ಮಳೆಯ ನಡುವೆಯೂ ಗ್ರಾಮದ ಬಡಾ ವಣೆಯಲ್ಲಿ ಸುತ್ತಾಡಿ ಪರಿಶೀಲಿಸಿದ ಜಿಲ್ಲಾ ಧಿಕಾರಿ ಕಾವೇರಿ ಅವರು ಗ್ರಾಮದ ನಿವಾಸಿ ಗಳಿಂದ ಅಹವಾಲು ಸ್ವೀಕರಿಸಿದರು.

ಗ್ರಾಮದಲ್ಲಿನ 130 ಕುಟುಂಬಗಳಿಗೆ ಪುನರ್ ವಸತಿ ಯೋಜನೆಯಡಿ ಮೂಲ ಸೌಲಭ್ಯ ಕಲ್ಪಿಸÀಲಾಗುವುದು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕು.
-ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

Translate »