ಉದ್ಯೋಗ ಖಾತರಿ ಯೋಜನೆ ಸದ್ಬಳಕೆಗೆ ಸಿಇಓ ಸಲಹೆ
ಚಾಮರಾಜನಗರ

ಉದ್ಯೋಗ ಖಾತರಿ ಯೋಜನೆ ಸದ್ಬಳಕೆಗೆ ಸಿಇಓ ಸಲಹೆ

November 18, 2018

ಚಾಮರಾಜನಗರ:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯುವ ಅವಕಾಶವಿದ್ದು, ಮಹಿಳಾ ಸ್ವ-ಸಹಾಯ ಸಂಘದ ಸದ ಸ್ಯರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಸಲಹೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಳ್ಳ ಲಾಗಿದ್ದ ಜಿಲ್ಲಾ ಮಟ್ಟದ ಅರಿವು ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಕುಟುಂಬಗಳು ಉದ್ಯೋಗಕ್ಕಾಗಿ ಬೇರೆ ಕಡೆಗೆ ವಲಸೆ ಹೋಗು ವುದನ್ನು ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಅವಕಾಶ ಒದಗಿಸುವ ಮೂಲಕ ಅವ ರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆ ಜಾರಿಗೆ ತರಲಾಗಿದೆ. ಕೆಲಸ ನಿರ್ವಹಿಸಿದ ಪುರುಷರು ಹಾಗೂ ಮಹಿ ಳೆಯರಿಗೆ ಸರಿಸಮಾನವಾಗಿ ದಿನವೊಂ ದಕ್ಕೆ 249 ರೂ.ಗಳನ್ನು ಪಾವತಿ ಮಾಡ ಲಾಗುತ್ತದೆ. ಈ ಯೋಜನೆ ಉಪಯುಕ್ತ ವಾಗಿದ್ದು, ಗ್ರಾಮೀಣ ಕುಟುಂಬಗಳು ಇದರ ಪ್ರಯೋಜನ ಪಡೆಯಲು ಮುಂದಾಗ ಬೇಕು ಎಂದರು.

ಯೋಜನೆಯಡಿ ವೈಯಕ್ತಿಕ ಕಾಮ ಗಾರಿ ನಿರ್ವಹಿಸಲು ಸಹ ಅನುಕೂಲ ಕಲ್ಪಿಸಲಾಗಿದೆ. ಬದು ನಿರ್ಮಾಣ. ಕೃಷಿ ಹೊಂಡ, ದನದ ಕೊಟ್ಟಿಗೆ, ಕುರಿ- ಮೇಕೆ, ಕೋಳಿ ಶೆಡ್, ಎರೆಹುಳು ಗೊಬ್ಬರ ತೊಟ್ಟಿ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳ ಬಹುದಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಅಭಿವೃದ್ಧಿಗೂ ಯೋಜ ನೆಯಡಿ ಸಾಕಷ್ಟು ಅವಕಾಶಗಳಿವೆ. ತೆಂಗು, ಬಾಳೆ, ಅಡಿಕೆ, ಪಪ್ಪಾಯ, ನುಗ್ಗೆ, ನಿಂಬೆ, ಸೀಬೆ, ದಾಳಿಂಬೆ, ಮಾವು ಇತರೆ ಆದಾಯ ತರುವ ಬೆಳೆಗಳನ್ನು ತಮ್ಮ ಜಮೀನಿ ನಲ್ಲಿಯೇ ಬೆಳೆಯಲು ಅಗತ್ಯವಿರುವ ನೆರವು ನೀಡಲಾಗುತ್ತದೆ. ಅಲ್ಲದೆ ರೇಷ್ಮೆ ಬೆಳೆಗೂ ಅವಶ್ಯವಿರುವ ಸೌಲಭ್ಯವನ್ನು ಯೋಜನೆಯಡಿ ಒದಗಿಸಲಾಗುತ್ತದೆ ಎಂದು ವಿವರಿಸಿದರು.

ಅರಣ್ಯ ಇಲಾಖೆಯೂ ಕೂಡ ರೈತರ ಜಮೀನುಗಳಲ್ಲಿ ಹೆಬ್ಬೇವು. ಸಿಲ್ವರ್, ಹೊಂಗೆ, ಹುಣಸೆಯಂತಹ ಆದಾಯ ತರುವ ಮರ ಗಳನ್ನು ಬೆಳೆಸಲು ಅವಕಾಶ ಕಲ್ಪಿಸಿದೆ. ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಳ್ಳುವ ವೇಳೆ ಫಲಾನುಭವಿಗಳಿಗೆ ಹೆಚ್ಚು ವರಿಯಾಗಿ 90 ಮಾನವ ದಿನಗಳ ಉದ್ಯೋಗ ಪಡೆಯಲು ಉದ್ಯೋಗ ಖಾತರಿ ಯೋಜ ನೆಯಡಿ ಅವಕಾಶ ಮಾಡಿಕೊಡಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪದ್ಮಶೇಖರ್ ಪಾಂಡೆ, ಇಓ ಕೃಷ್ಣಮೂರ್ತಿ, ನರೇಗಾ ಜಿಲ್ಲಾ ಸಂಯೋಜಕರಾದ ಮಲ್ಲಿಕಾ ರ್ಜುನ್, ಎಸ್.ನವೀನ್‍ಕುಮಾರ್. ಎನ್‍ಆರ್ ಎಲ್‍ಎಂ ವ್ಯವಸ್ಥಾಪಕರಾದ ದೀಪಕ್. ಗೋವಿಂದರಾಜು ಉಪಸ್ಥಿತರಿದ್ದರು.

Translate »