ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ
ಚಾಮರಾಜನಗರ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

November 18, 2018

ಗುಂಡ್ಲುಪೇಟೆ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾ ಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ತಾಲೂಕು ಪಂಚಾಯಿತಿ ಅಧಿಕಾರಿಯ ಮೂಲಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಾಪಂ ಕಚೇರಿ ಮುಂಭಾಗ ಸಮಾವೇಶಗೊಂಡ ನೌಕರರು, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದರು. ನಂತರ ನೌಕರರ ಸಂಘದ ಜಿಲ್ಲಾ ಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಸರ್ಕಾರ ರಾಜ್ಯಾದ್ಯಂತ ಎಲ್ಲಾ ಗ್ರಾಪಂಗಳಲ್ಲಿ ಕೈಬಿ ಟ್ಟಿದ್ದ 18 ಸಾವಿರ ಸಿಬ್ಬಂದಿ ವಿವರ ನೀಡಲು ಆದೇಶ ಹೊರಡಿಸಲಾಗಿದೆ. ಆದರೂ ಇನ್ನೂ ಗ್ರಾಪಂ ಪಿಡಿಒ ಹಾಗೂ ಸಿಇಒಗಳು ನೌಕರರ ವಿವರ ಸಂಗ್ರಹಿಸಿ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿಲ್ಲ. ಕೂಡಲೇ ಪಟ್ಟಿ ತಯಾ ರಿಸಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಎಂ.ಎಸ್.ಸ್ವಾಮಿ ಅವರ ವರದಿಯಂತೆ ಕಿರುನೀರು ಪೂರೈಕೆ ಸಿಬ್ಬಂದಿ ಹುದ್ದೆ ಮತ್ತು ಐಡಿಪಿ ಸಾಲಪ್ಪ ವರದಿಯಂತೆ ಕಸಗುಡಿ ಸುವವರ ಹುದ್ದೆ ಸೃಷ್ಟಿಸಬೇಕು. ನೌಕಕರ ಬಾಕಿಯುಳಿದ ವೇತನ ಪಾವತಿಗೆ ಕ್ರಮ ವಹಿಸಬೇಕು. ಎಸ್‍ಎಸ್‍ಎಲ್‍ಸಿ ಉತ್ತೀ ರ್ಣರಾದವರಿಗೆ ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ತಾಪಂ ಉಪನಿರ್ದೇ ಶಕ ಸುಬ್ರಹ್ಮಣ್ಯಶರ್ಮ ಅವರಿಗೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ತಾಲೂಕು ಘಟಕ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಎಂ.ಮಲ್ಲು ಇತರರು ಇದ್ದರು.

Translate »