ನವೆಂಬರ್ 23ರಂದು ಉದ್ಯೋಗ ಮೇಳ
ಚಾಮರಾಜನಗರ

ನವೆಂಬರ್ 23ರಂದು ಉದ್ಯೋಗ ಮೇಳ

November 18, 2018

ಚಾಮರಾಜನಗರ: ಜನತಾ ದರ್ಶನದಲ್ಲಿ ಅರ್ಜಿ ನೀಡಿರುವ ಅಭ್ಯರ್ಥಿಗಳು ಹಾಗೂ ಜಿಲ್ಲೆಯ ಇತರೆ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ನ.23ರಂದು ಬೆಳಿಗ್ಗೆ 9.30ಕ್ಕೆ ನಗರದ ಜಿಲ್ಲಾಡಳಿತ ಭವನದಲ್ಲಿರÀುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಉದ್ಯೋಗ ಮೇಳದಲ್ಲಿ ಮೈಸೂರಿನ ಖಾಸಗಿ ಕಂಪನಿಗಳಾದ ಐಟಿಸಿ ಪ್ರೈ. ಲಿ., ಹಿಂದೂಜಾ ಗ್ಲೋಬಲ್ ಸಲ್ಯೂಷನ್, ಲೇಬರ್ ನೆಟ್ ಪ್ರೈ. ಲಿ., ನಡ್ಜ್ ಫೌಂಡೇಷನ್, ಯುರೇಕಾ ಫೋಬ್ರ್ಸ್, ವಿಜಿಬಿ ಎಂಟರ್‍ಪ್ರೈಸಸ್ ಹಾಗೂ ಇತರೆ ಕಂಪನಿಗಳು ಭಾಗವಹಿಸಲಿವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಮೆಕ್ಯಾನಿಕಲ್ ಇ ಅಂಡ್ ಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆಯುಳ್ಳ 18 ರಿಂದ 35ರ ವಯೋಮಿತಿ ಒಳಗಿನ ನಿರುದ್ಯೋಗಿ ಅಭ್ಯರ್ಥಿಗಳು ಸ್ವ ವಿವರಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿ ಅಥವಾ ದೂ.ಸಂ.08226-224430 ಸಂಪರ್ಕಿಸಬೇಕು.

Translate »