ಮೈಸೂರು: ಶಿಥಿಲಾ ವಸ್ಥೆಯಲ್ಲಿರುವ ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆಯನ್ನು ನೆಲೆಸಮಗೊಳಿಸದೇ ನವೀಕರಣ ಕಾರ್ಯ ಕೈಗೊಳ್ಳಲು ಪರಂಪರೆ ಇಲಾಖೆಯ ತಜ್ಞರ ಸಮಿತಿ ತನ್ನ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದೆ.
ಮೈಸೂರು ಪಾರಂಪರಿಕ ಪ್ರದೇಶ ಅಭಿ ವೃದ್ಧಿ ಮತ್ತು ಸಂರಕ್ಷಣಾ ತಜ್ಞರ ಸಮಿತಿಯು ನ.13ರಂದು ಅಂತಿಮ ವರದಿ ಪೂರ್ಣಗೊಳಿಸಿ, ಶುಕ್ರವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಕ್ರಮಕ್ಕಾಗಿ ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ಸಲ್ಲಿಸಿದೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಇಂದು ನಡೆದ ಸಭೆಯಲ್ಲಿ ಅಂತಿಮವಾಗಿ ಸಿದ್ಧಗೊಂಡಿರುವ ವಿಸ್ತೃತ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪಾಲಿಕೆ ಆಯುಕ್ತರಿಗೆ ನೀಡಲಾಗಿದೆ. ಇದೇ ಮಾರ್ಚ್‍ನಲ್ಲಿ ತಜ್ಞರ ಸಮಿತಿ ನೀಡಿದ್ದ ಮಧ್ಯಂತರ ವರದಿಯಲ್ಲೂ ನೆಲಸಮಗೊಳಿ ಸದೇ ನವೀಕರಣಕ್ಕೆ ಶಿಫಾರಸು ಮಾಡಲಾಗಿತ್ತು. ಇದೀಗ ಅಂತಿಮ ವರದಿಯಲ್ಲೂ ಸಮಿತಿ ಅದೇ ಅಂಶ ಉಲ್ಲೇಖಿಸಿದ್ದು, ನವೀಕರಣ ಕಾಮಗಾರಿ ಕೈಗೊಳ್ಳಬೇಕಿರುವ ವಿಧಾನಗಳನ್ನು ವರದಿಯಲ್ಲಿ ವಿವರಿಸಿದೆ. ಈಗಷ್ಟೇ ವರದಿ ಬಿಡುಗಡೆ ಗೊಂಡಿರುವ ಹಿನ್ನೆಲೆಯಲ್ಲಿ ನವೀಕರಣದ ಬಗೆಗೆ ಸಮಿತಿ ನೀಡಿರುವ ಶಿಫಾರಸುಗಳ ವಿಸ್ತೃತ ಅಂಶಗಳು ಇನ್ನಷ್ಟೇ ಹೊರಬೀಳಬೇಕಿದೆ.
ಸಭೆಯ ಬಳಿಕ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯು ನ.13 ರಂದು ತನ್ನ ಅಂತಿಮ ವರದಿ ನೀಡಿದೆ. ವರದಿಯಲ್ಲಿ ನೆಲಸಮ ಮಾಡದೇ ನವೀಕರಣ ಮಾಡಲು ಶಿಫಾರಸು ಮಾಡಲಾಗಿದೆ. ಇದೇ ಮಾರ್ಚ್‍ನಲ್ಲಿ ನೀಡಿದ ವರದಿಯಲ್ಲೂ ತಜ್ಞರ ಸಮಿತಿ ನೆಲಸಮ ಮಾಡಬಾರದೆಂದು ಶಿಫಾರಸು ಮಾಡಿತ್ತು. ಇದೀಗ ಅಂತಿಮ ವರದಿಯಲ್ಲಿ ಅದೇ ಅಂಶ ಉಲ್ಲೇಖಿಸಿದ್ದು, ಉಳಿದಂತೆ ಯಾವ ವಿಧಾನಗಳಲ್ಲಿ ನವೀ ಕರಣ ಕೈಗೊಳ್ಳಬೇಕು ಎಂಬ ಅಂಶಗಳ ಬಗ್ಗೆ ಇನ್ನಷ್ಟೆ ಪರಿಶೀಲಿಸಬೇಕಿದೆ ಎಂದರು.
ಸ್ಥಳ ಪರಿಶೀಲನೆ: ಇಂದಿನ ಸಭೆಯಲ್ಲಿ ಇನ್ನೂ ಹಲವು ವಿಷಯಗಳು ಚರ್ಚೆ ಆಗಿವೆ. ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ 4 ಸ್ತಂಭ ಮಾದರಿಯ ಕಂಬಗಳನ್ನು ಸ್ಥಳಾಂತರ ಗೊಳಿಸಿ ರಸ್ತೆ ಅಗಲೀಕರಣಕ್ಕೆ ಅನುಕೂಲ ಮಾಡಿಕೊಡುವುದು ಹಾಗೂ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿನಿಲಯ ಶಿಥಿಲಗೊಂಡಿ ರುವ ಹಿನ್ನೆಲೆಯಲ್ಲಿ ನವೀಕರಣಗೊಳಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಈ ಸಂಬಂಧ ನಾಳೆ (ನ.17) ತಜ್ಞರ ಸಮಿತಿ ಸ್ಥಳ ಪರಿಶೀ ಲನೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದರು.
ಪಾರಂಪರಿಕ ಕಟ್ಟಡಗಳನ್ನು ಗುರುತಿಸುವ ಕೆಲಸವನ್ನು ಆರಂಭಿಸಲು ತಜ್ಞರ ಉಪ ಸಮಿತಿ ರಚಿಸುವುದು, ತಜ್ಞರು ಈಗಾಗಲೇ ಗುರುತಿಸಿರುವ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿ ಅಧ್ಯಯನ ಕೈಗೊಳ್ಳುವುದು ಸೇರಿ ದಂತೆ ಅನೇಕ ವಿಷಯಗಳ ಕುರಿತು ಸಭೆ ಯಲ್ಲಿ ಚರ್ಚಿಸಲಾಯಿತು. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಮುಡಾ ಆಯುಕ್ತ ಕಾಂತ ರಾಜು, ಪರಂಪರೆ ಇಲಾಖೆಯ ಉಪನಿರ್ದೇ ಶಕಿ ನಿರ್ಮಲ ಮಠಪತಿ, ತಜ್ಞರ ಸಮಿತಿ ಸದಸ್ಯ ರಾದ ನಿವೃತ್ತ ಮೇಜರ್ ಜನರಲ್ ಡಾ. ಎಸ್.ಜಿ. ಒಂಬತ್ಕೆರೆ, ಪ್ರೊ.ಎನ್.ಎಸ್.ರಂಗರಾಜು ಸೇರಿದಂತೆ ಮತ್ತಿತರ ಅಧಿಕಾರಿಗಳು ಸಭೆ ಯಲ್ಲಿ ಪಾಲ್ಗೊಂಡಿದ್ದರು.