ಮೈಸೂರು: ವಿಜಯನಗರದ ಹಂಪೆಯನ್ನು ನೋಡ ದವರು ನಿಜಕ್ಕೂ ಬಹಳ ದೊಡ್ಡ ತಪ್ಪು ಮಾಡಿದಂತೆ ಎಂದು ಹಿರಿಯ ಸಂಶೋ ಧಕ ಪ್ರೊ.ಎಂ.ಚಿದಾನಂದಮೂರ್ತಿ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯ ಯನ ಕೇಂದ್ರ ಶುಕ್ರವಾರ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಮತ್ತು ಶಾಸ್ತ್ರೀಯ ಕನ್ನಡ ಪ್ರಶಸ್ತಿ ಪುರಸ್ಕøತ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಂಪೆಯ ಪ್ರಾಕೃತಿಕ ಸಂಪತ್ತು, ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. ವಿಜಯನಗರ ಸಾಮ್ರಾಜ್ಯ ಹಂಪೆಯಲ್ಲಿ ಆರಂಭವಾಯಿತು. ಹಕ್ಕ ಬುಕ್ಕರು ರಾಜ್ಯ ಸ್ಥಾಪನೆ ಮಾಡಿದರು. ವಿರೂಪಾಕ್ಷನನ್ನೇ ರಾಜ ಎಂದು ನಡೆದು ಕೊಳ್ಳುತ್ತಿದ್ದರು ಎಂದು ವಿವರಿಸಿದರು.
ಕದಂಬರ ಹುಟ್ಟಿನ ನಂತರ ಇಲ್ಲಿ ಕನ್ನಡಿ ಗರ ಅಸ್ಮಿತೆ ಬಂತು. ಕನ್ನಡ ಬೆಳೆಯಿತು. ಒಂದು ಕಾಲದಲ್ಲಿ ಮಹಾರಾಷ್ಟ್ರ ಎಂಬುದೇ ಇರಲಿಲ್ಲ. ಅದು ಮೂಲಭೂತವಾಗಿ ಕನ್ನಡ ಪ್ರದೇಶವೇ ಆಗಿತ್ತು. ಕಾವೇರಿಯಿಂದ ಗೋದಾವರಿವರೆಗೂ ಕನ್ನಡ ಪ್ರದೇಶ ಹಬ್ಬಿತ್ತು. ಗೋದಾವರಿ ಎಂದರೆ ಮಹಾರಾಷ್ಟ್ರದದ ತುತ್ತತುದಿಯ ನಾಸಿಕ್. ಅಲ್ಲಿ ಗೋದಾ ವರಿ ಹರಿಯುತ್ತಿತ್ತು. ಅಲ್ಲಿ ಗಂಡು ಮಕ್ಕಳಿಗೆ ಮಗದಿರ್, ಹೆಣ್ಣು ಮಕ್ಕಳಿಗೆ ಮಗಳ್ ದೀರ್ ಎಂದು ಹಳೆಗನ್ನಡದ ಅವಶೇಷ ಅಲ್ಲಿ ಉಳಿದುಕೊಂಡಿದೆ ಎಂದರು.
ಮಯೂರ ವರ್ಮ ಕರ್ನಾಟಕವನ್ನು ಆಳಿದ ಮೊದಲ ರಾಜ. ಮಯೂರ ಶರ್ಮ ವೇದಾಧ್ಯಯನ ಮಾಡುವಾಗ ಈತ ಬ್ರಾಹ್ಮಣ ಎಂದು ಹೀಯ್ಯಾಳಿಸಲಾಗುತ್ತದೆ. ನೋವು, ಅಪಮಾನ ಸಹಿಸಲಾಗದ ಮಯೂರ ಶರ್ಮ ಚಿತ್ರದುರ್ಗದ ಬಳಿ ಚಂದ್ರಗಿರಿ ಕಣಿವೆಯಲ್ಲಿ ನೆಲೆಸಿ, ಸೈನ್ಯ ಕಟ್ಟಿ ಪಲ್ಲವರನ್ನು ಸೋಲಿಸುತ್ತಾರೆ. ಬಳಿಕ ಮಯೂರ ವರ್ಮ ನಾಗುತ್ತಾನೆ. ಕರ್ನಾಟಕ ಆಳಿದ ಕನ್ನಡ ಮಾತೃ ಭಾಷೆಯ ವಂಶ ಕದಂಬ ವಂಶ. ವಂಶ ಸ್ಥಾಪಿಸಿದ್ದರಿಂದಲೇ ಮುಂದೆ ಕನ್ನಡ ಭಾಷೆ ಸಾಹಿತ್ಯ ಭಾಷೆಯಾಗಿ ಬೆಳೆಯಿತು ಎಂದು ವಿಶ್ಲೇಷಿಸಿದರು.
ಮತ್ತೊಬ್ಬ ಸನ್ಮಾನಿತರಾದ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಮಾತನಾಡಿ, ನಾನು ಮತ್ತು ಚಿದಾನಂದಮೂರ್ತಿ ಬಾಲ್ಯದ ಗೆಳೆ ಯರು. ಮೈಸೂರಿನಲ್ಲಿ ಬಿಎ ಆನರ್ಸ್ ಓದಿ ದೆವು. ಕುವೆಂಪು ನಮ್ಮ ಪ್ರಾಧ್ಯಾಪಕರು. ಭಾರ ತೀಯ ಭಾಷಾ ಸಂಸ್ಥಾನದೊಂದಿಗೆ ನಮ್ಮ ಒಡನಾಟ ಮೊದಲಿನಿಂದಲೂ ಇದೆ ಎಂದರು.
ಸರಿಯಾದ ಭಾಷಾ ಸ್ವರೂಪ ಹಾಗೂ ಪ್ರಾಚೀನ ಸಾಹಿತ್ಯ ತಿಳಿಯಲು ಅಗತ್ಯ ವಾದ ಪ್ರಾಚೀನ ವ್ಯಾಕರಣಗಳನ್ನು ನೋಡ ಬೇಕು. ಆದರೆ ಕೆಲವೊಮ್ಮೆ ನಮ್ಮ ನಿಘಂಟುಗಳು ದಾರಿ ತಪ್ಪಿಸಿವೆ ಎಂದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇ ಶಕ ಪ್ರೊ.ಡಿ.ಜಿ .ರಾವ್ ಅಧ್ಯಕ್ಷತೆ ವಹಿಸಿ ದ್ದರು. ಶಾಸ್ತ್ರೀಯ ಭಾಷೆಗಳು ಹಾಗೂ ಆರ್‍ಆರ್‍ಸಿ ಮುಖ್ಯಸ್ಥ ಡಾ.ಎಲ್.ರಾಮ ಮೂರ್ತಿ, ಯೋಜನಾ ನಿರ್ದೇಶಕ ಪ್ರೊ. ಕೆ.ಆರ್.ದುರ್ಗಾದಾಸ್ ಉಪಸ್ಥಿತರಿದ್ದರು.