ಹೊಗಳುಭಟ್ಟರ ಜಾತ್ರೆಯಂತಾಗಿರುವ ಸಾಹಿತ್ಯ ಸಮ್ಮೇಳನ
ಮೈಸೂರು

ಹೊಗಳುಭಟ್ಟರ ಜಾತ್ರೆಯಂತಾಗಿರುವ ಸಾಹಿತ್ಯ ಸಮ್ಮೇಳನ

November 17, 2018

ಮೈಸೂರು: ಸಾಹಿತ್ಯ ಪರಿ ಷತ್‍ಗಳು ಸಾಹಿತ್ಯ ಸಮ್ಮೇಳನಗಳನ್ನು ದೊಡ್ಡ ಜಾತ್ರೆಯನ್ನಾಗಿಸಿವೆ, ಇದಕ್ಕೆ ಈವರೆಗೂ ನಡೆದು ಬಂದಿರುವ ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ ಎಂದು ಹಿರಿಯ ಸಂಸ್ಕøತಿ ಚಿಂತಕ ಪ.ಮಲ್ಲೇಶ್ ವಿಷಾದ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂ ಗಣದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿ ಸಿದ್ದ 62ನೇ ಕನ್ನಡ ರಾಜ್ಯೋತ್ಸವ ಹಾಗೂ ಹಾ.ಮಾ.ನಾಯಕ ದತ್ತಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇ ಳನ ಎಂಬುದು ಕನ್ನಡಕ್ಕಾಗಿ ಹೋರಾಡಿ ದವರು ಎಂದು ಕೆಲವರನ್ನು ಕರೆತಂದು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಮೆರವಣಿಗೆ ಮಾಡಿಸಿ ಪುಂಖಾನುಪುಂಖ ವಾಗಿ ಹೊಗಳುವುದಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು.

ಕುವೆಂಪು ಹಾಗೂ ತಿನಂಶ್ರೀಯಂತಹ ಒಳ್ಳೆಯ ಗುರುಗಳು ಕನ್ನಡದ ಬಗ್ಗೆ ಕಿಚ್ಚು, ಒಲವು, ಅದರ ಆಳ ಅರಿವು ಮೂಡಿಸಿದರು. ಹಾಗಾಗಿಯೇ ನಾವು ಕನ್ನಡ ಸಾಹಿತ್ಯ ವನ್ನು ಹೆಚ್ಚು ಅಧ್ಯಯನ ಮಾಡಲು ಕನ್ನಡ ಕ್ಕಾಗಿ ಹೋರಾಟ ಮಾಡಲು ಸಾಧ್ಯ ವಾಯಿತು ಎಂದು ಹೇಳಿದರು.

ಪ್ರಸ್ತುತ ಕನ್ನಡ ನವೆಂಬರ್ ತಿಂಗಳಿಗೆ, ವೇದಿಕೆಯ ಭಾಷಣಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ. ಆ ಮೂಲಕ ನಾವೂ ಕನ್ನಡ ಭಾಷೆಗಾಗಿ ಹೋರಾಟ ನಡೆಸು ತ್ತಿದ್ದೇವೆ ಎಂದು ತೋರಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ವರ್ಷದಲ್ಲಿ ಒಮ್ಮೆ ಮಾತ್ರವೇ ಕನ್ನಡಾಭಿಮಾನ ತೋರುವ ನಾವೆಷ್ಟು ಪ್ರಾಮಾಣಿಕರು? ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆ? ಭಾಷೆಗಾಗಿ ಎಷ್ಟು ತೊಡಗಿಸಿಕೊಂಡಿದ್ದೇವೆ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವಂತಹ ಪರಿಸ್ಥಿತಿ ಎದುರಾ ಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಸುಬ್ಬರಾಯನಕೆರೆಯಲ್ಲಿ ನೂರಾರು ಹೋರಾಟಗಳನ್ನು ನಡೆಸಿದ್ದೇವೆ. ಆದರೆ ಇಂದು ಆ ಹೋರಾಟದ ದಿನಗಳ ಯಾವ ಲಕ್ಷಣವೂ ಕಾಣುವುದಿಲ್ಲ. ಬಿಎ, ಎಂಎ ಓದಿರುವವರು ಹೋರಾಟಕ್ಕೆ ಬರುವು ದಿಲ್ಲ. ಇದಕ್ಕೆ ಕೆಟ್ಟ ಸರಕಾರಗಳು, ಅಭಿ ಮಾನ ಶೂನ್ಯ ವ್ಯವಸ್ಥೆಯೇ ಕಾರಣ. ಸರ ಕಾರ ಹಾಗೂ ಅಧಿಕಾರಿಗಳ ಜುಟ್ಟು ಹಿಡಿದು ಕೇಳಿದರೆ ಮಾತ್ರವೇ ಕನ್ನಡಕ್ಕೆ ಮಾನ್ಯತೆ ದೊರಕಲು ಸಾಧ್ಯ ಎಂದು ತಿಳಿಸಿದರು.

ನಂತರ ಕನ್ನಡ, ಜಾನಪದ, ಭಾಷಾ ಶಾಸ್ತ್ರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಡಾ.ಹಾ.ಮಾ.ನಾಯಕ ದತ್ತಿ ಬಹು ಮಾನ ನೀಡಿ ಗೌರವಿಸಲಾಯಿತು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎನ್.ಎಂ.ತಳವಾರ್ ಉಪಸ್ಥಿತರಿದ್ದರು.

Translate »