ರಿಮ್ಸೆಯಲ್ಲಿ ಸ್ವಾಮಿ ಜಗದಾತ್ಮಾನಂದಜೀ ಪಾರ್ಥಿವ ಶರೀರಕ್ಕೆ ಭಕ್ತ ಸಮೂಹದ ನಮನ
ಮೈಸೂರು

ರಿಮ್ಸೆಯಲ್ಲಿ ಸ್ವಾಮಿ ಜಗದಾತ್ಮಾನಂದಜೀ ಪಾರ್ಥಿವ ಶರೀರಕ್ಕೆ ಭಕ್ತ ಸಮೂಹದ ನಮನ

November 17, 2018

ಮೈಸೂರು: ಗುರುವಾರ ವಿಧಿವಶರಾದ ರಾಮಕೃಷ್ಣ ಮಿಷನ್ ಹಿರಿಯ ಸನ್ಯಾಸಿ ಹಾಗೂ ಪೊನ್ನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದ ಹಿಂದಿನ ಅಧ್ಯಕ್ಷ ಸ್ವಾಮಿ ಜಗದಾತ್ಮಾನಂದಜೀ ಅವರ ಪಾರ್ಥಿವ ಶರೀ ರಕ್ಕೆ ಭಕ್ತ ಸಮುದಾಯ ಹಾಗೂ ಸನ್ಯಾಸಿ ಗಳು ಮೈಸೂರಿನ ಯಾದವಗಿರಿಯ ರಾಮ ಕೃಷ್ಣ ವಿದ್ಯಾಶಾಲಾ ಆವರಣದಲ್ಲಿರುವ ರಾಮ ಕೃಷ್ಣ ನೀತಿ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (RIMSE) ಸಭಾಂಗಣದಲ್ಲಿ ನಮನ ಸಲ್ಲಿಸಿದರು.

ಗುರುವಾರ ರಾತ್ರಿ 8 ಗಂಟೆ ವೇಳೆಗೆ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ರಿಮ್ಸೆಗೆ ತಂದು ಆಡಿಟೋರಿಯಂನಲ್ಲಿ ಇರಿಸ ಲಾಗಿತ್ತು. ನಿರಂತರ ಪ್ರಾರ್ಥನೆ, ಭಜನೆಗಳು ನಡೆದವು. ರಾಮಕೃಷ್ಣ ಮಿಷನ್‍ನ ಸನ್ಯಾಸಿ ಗಳಾದ ಸ್ವಾಮಿ ವೀತಾಭಯಾನಂದ, ಸ್ವಾಮಿ ಧರ್ಮಾತ್ಮಾನಂದ, ಸ್ವಾಮಿ ವಾಣೀಶ್ವರಾ ನಂದ, ಸ್ವಾಮಿ ಮಹೇಶ್ವರಾನಂದ, ಸ್ವಾಮಿ ಮಹೇಶಾತ್ಮಾನಂದ, ಯುಕ್ತೇಶಾನಂದ, ಸ್ವಾಮಿ ಬೋಧಾಸ್ವರಾನಂದ, ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯ ದರ್ಶಿ ಮಂಜುನಾಥ, ಹಿರಿಯ, ಕಿರಿಯ ಸನ್ಯಾಸಿಗಳು, ಶ್ರೀರಾಮಕೃಷ್ಣ ಆಶ್ರಮದ ಭಕ್ತರು, ಶ್ರೀರಾಮಕೃಷ್ಣ ವಿದ್ಯಾಶಾಲಾ ವಿದ್ಯಾರ್ಥಿ ಗಳು, ಹಳೇ ವಿದ್ಯಾರ್ಥಿಗಳು, ಒಡ ನಾಡಿಗಳು, ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಸಚಿವ ಸಾ.ರಾ.ಮಹೇಶ್, ಶಾಸಕ ಎಲ್. ನಾಗೇಂದ್ರ, ಮಾಜಿ ಶಾಸಕ ವಾಸು, ವಿದ್ಯಾ ವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಖ್ಯಾತ ವೈದ್ಯರಾದ ಡಾ.ಭಾಸ್ಕರ್, ಡಾ. ರಾಜೇ ಶ್ವರ್, ಐಪಿಎಸ್ ಅಧಿಕಾರಿಗಳಾದ ಕೆ.ವಿ. ಶರತ್‍ಚಂದ್ರ, ಕಿಶೋರ್‍ಚಂದ್ರ, ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಕೆ.ಸಿ.ಶಿವಪ್ಪ ಸೇರಿದಂತೆ ಹಲವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಬೆಳಿಗ್ಗೆ 11.15 ಗಂಟೆಗೆ ಕೆಆರ್‍ಎಸ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಕೊಂಡೊಯ್ದು ಪರಿಕ್ರಮ ನಡೆಸಿದ ನಂತರ ಮಧ್ಯಾಹ್ನ 12 ಗಂಟೆ ವೇಳೆಗೆ ಪಾರ್ಥಿವ ಶರೀರ ವನ್ನು ಆಂಬುಲೆನ್ಸ್‍ನಲ್ಲಿ ಪೊನ್ನಂಪೇಟೆಗೆ ಕೊಂಡೊಯ್ದು ರಾಮಕೃಷ್ಣ ಶಾರದಾ ಶ್ರಮದ ಆವರಣದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Translate »