ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮ, ಕಾನೂನು ಮಹತ್ವದ ಪಾತ್ರ ವಹಿಸಲಿವೆ
ಮೈಸೂರು

ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮ, ಕಾನೂನು ಮಹತ್ವದ ಪಾತ್ರ ವಹಿಸಲಿವೆ

November 17, 2018

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಉನ್ನತ ಪರಿವರ್ತನೆಗೆ ಮಾಧ್ಯಮ ಮತ್ತು ಕಾನೂನು ಮಹತ್ವದ ಪಾತ್ರ ವಹಿಸಲಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಅಭಿಪ್ರಾಯಪಟ್ಟರು.
ಮೈಸೂರು ಮಾನಸ ಗಂಗೋತ್ರಿಯ ಗಣಿತಶಾಸ್ತ್ರ ವಿಭಾಗದ ಸಭಾಂ ಗಣದಲ್ಲಿ `ಮಾಧ್ಯಮ, ಕಾನೂನು ಮತ್ತು ಅಭಿವೃದ್ಧಿ : ಹೊಸ ಚರ್ಚೆ ಗಳು’ ಕುರಿತಂತೆ 2 ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಮಾಧ್ಯಮ ಮತ್ತು ಕಾನೂನು ಮಹತ್ವದ ಪಾತ್ರ ವಹಿಸಲಿವೆ. ಅಭಿವೃದ್ಧಿ, ಮಾಧ್ಯಮ ಮತ್ತು ಕಾನೂನು ಈ ಮೂರು ಅಂಶಗಳನ್ನು ಹೊರತಾಗಿ ಇಂದು ಯಾವುದೇ ಸಮಾಜವನ್ನು ನೋಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇವುಗಳ ಪರಿಣಾಮ ಸಮಾಜದ ಮೇಲೆ ಉಂಟಾಗಲಿದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಮಾಧ್ಯಮ ವ್ಯಾಪಕ ಪ್ರಭಾವ ಉಂಟು ಮಾಡುವ ಸಾಮಥ್ರ್ಯ ಬೆಳೆಸಿಕೊಂಡಿದೆ. ಜ್ಞಾನವೃದ್ಧಿ ಹಾಗೂ ಆಡಳಿತಾಂಗದ ನೀತಿ-ನಿಲುವು ರೂಪಿತವಾಗಲು ಮಾಧ್ಯಮ ಹಾಗೂ ಕಾನೂನು ತನ್ನದೇ ಆದ ಕೊಡುಗೆ ನೀಡಲಿವೆ. ಬದಲಾವಣೆಗೆ ಇಂದಿನ ಜನತೆ ಜಡತ್ವದ ಮನೋಭಾವ ಹೊಂದಿದ್ದಾರೆ ಎಂಬ ವಾದವಿದ್ದು, ಇದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪರಿವರ್ತನೆಗೆ ಜನತೆಯನ್ನು ಕರೆತರುವಲ್ಲಿ ಆಳುವ ವರ್ಗಗಳು ವಿಫಲವಾಗುತ್ತಿವೆ ಎಂದು ವಿಷಾದಿಸಿದರು.

ಇಡೀ ಜಗತ್ತಿನ ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಶೇ.60ರಷ್ಟು ಯುವ ಜನತೆ ತೊಡಗಿಸಿಕೊಂಡಿದ್ದಾರೆ. ಯುವ ಶಕ್ತಿಯನ್ನು ಹೊಂದಿರುವ ಭಾರತದ ಯುವ ಸಮುದಾಯ ಅಮೆರಿಕದಲ್ಲಿ ನೆಲೆ ಕಂಡು ಕೊಂಡು ಅಲ್ಲಿನ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಇಂತಹ ಮಹತ್ವದ ಪಾತ್ರವನ್ನು ದೂರದ ಅಮೆರಿಕದಲ್ಲಿ ದೇಶದ ಯುವ ಜನರು ವಹಿಸಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸಾಮಾಜಿಕ ರಚನೆ ಹಾಗೂ ಸಂಸ್ಕøತಿ ಎಂದರು.

ಇದೇ ವೇಳೆ ಪ್ರೊ.ವೈ.ಎಸ್.ಸಿದ್ದೇಗೌಡ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಸ್ನಾತಕೋತ್ತರ ಪದವಿಯ ಕಾನೂನು ವಿದ್ಯಾರ್ಥಿಗಳು, ಸಂಶೋಧ ಕರು, ಪ್ರಾಧ್ಯಾಪಕರು ಹಾಗೂ ಕಾನೂನು ತಜ್ಞರು ಸೇರಿದಂತೆ ಸುಮಾರು 30 ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ಈ ಎಲ್ಲರಿಗೂ ತಲಾ 500 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿತ್ತು. ತಮಿಳು ನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ವಿಷಯ ತಜ್ಞರು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಕಾನೂನು ವಿಭಾಗದ ಮುಖ್ಯಸ್ಥ ಪ್ರೊ.ಸಿ.ಬಸವರಾಜು, ಸಮ್ಮೇ ಳನದ ನಿರ್ದೇಶಕ ಡಾ.ರಮೇಶ್ ಮತ್ತಿತರರು ಹಾಜರಿದ್ದರು.

Translate »