ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸೆ ಉತ್ತಮ: ಡಾ.ಮಾನಸ
ಚಾಮರಾಜನಗರ

ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸೆ ಉತ್ತಮ: ಡಾ.ಮಾನಸ

November 19, 2018

ಚಾಮರಾಜನಗರ: ಪ್ರಕೃತಿ ಚಿಕಿತ್ಸಾ ಪದ್ಧತಿ ಅತ್ಯಂತ ಸುಲಭವಾಗಿ ದೊರೆಯು ತ್ತಿದೆ. ನಮ್ಮ ದೇಶದ ಪದ್ಧತಿಯಾದ ಇದಕ್ಕೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮನುಷ್ಯನ ಆರೋಗ್ಯ ಕಾಪಾಡಲು ಪ್ರಕೃತಿ ಚಿಕಿತ್ಸೆ ಉತ್ತಮವಾಗಿದೆ ಎಂದು ವೈದ್ಯೆ ಡಾ.ಮಾನಸ ಹೆಳಿದರು.

ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಭಾನುವಾರ ನಡೆದ ಮೊದಲ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.ಪ್ರಕೃತಿ ಚಿಕಿತ್ಸೆ ಆರ್ಯುವೇದದಂತೆ ಅತ್ಯಂತ ಹಳೆಯ ಪದ್ಧತಿಯಾಗಿದೆ. ಗ್ರಾಮೀಣ ಜನರು ಹೆಚ್ಚು ಪ್ರಕೃತಿ ಜೊತೆ ಒಡನಾಟ ಇಟ್ಟುಕೊಟ್ಟಿದ್ದರಿಂದಾಗಿಯೇ ಅವರು ನೂರಾರು ಕಾಲ ಆರೋಗ್ಯಕರವಾಗಿ ಬಾಳು ತ್ತಿದ್ದರು. ಆದರೆ, ಇತ್ತೀಚೆಗೆ ಆಹಾರದ ಪದ್ಧತಿ ಯಲ್ಲಿ ಉಂಟಾದ ವ್ಯತ್ಯಾಸದಿಂದ ಕಾಯಿಲೆ ಗಳು ಹೆಚ್ಚಾದವು. ಇವು ಬರದಂತೆ ತಡೆ ಯುವುದೇ ಪ್ರಕೃತಿ ಚಿಕಿತ್ಸೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರಿಗೂ ಪ್ರಕೃತಿ ಚಿಕಿತ್ಸೆ ಹೆಚ್ಚು ಪ್ರಿಯವಾಗಿತ್ತು. ಅವರು ಪ್ರಕೃತಿ ಚಿಕಿತ್ಸೆಯನ್ನೇ ಅವಲಂಬಿಸಿಕೊಂಡಿ ದ್ದರು. ಈ ಬಗ್ಗೆ 1945ರಲ್ಲಿ ಅಖಿಲ ಭಾರತ ಪ್ರಕೃತಿ ಚಿಕಿತ್ಸೆ ಫೆÉಡರೇಷನ್‍ಗೆ ಸಹಿ ಮಾಡಿ ಪ್ರಕೃತಿ ಚಿಕಿತ್ಸೆಯನ್ನು ದೇಶಾದ್ಯಂತ ಹೆಚ್ಚು ಪ್ರಚುರಪಡಿಸುವಂತೆ ತಿಳಿಸಿದ್ದರು ಎಂದರು.

ಹಾಗಾಗಿ, ಗಾಂಧೀಜಿ ಅವರ ಜನ್ಮದಿನ ಅ. 2ರಂದೇ ಪ್ರಕೃತಿ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ನ. 18ಅನ್ನು ಪ್ರಕೃತಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮೊದಲ ವರ್ಷವಾದ್ದ ರಿಂದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಪ್ಪ ತೋಟದ ಮಾತನಾಡಿ, ಅನಾದಿ ಕಾಲದ ಪದ್ಧತಿಯಾದ ಪ್ರಕೃತಿ ಚಿಕಿತ್ಸೆ ರೋಗಗಳು ಬರದಂತೆ ಕಾಪಾಡುತ್ತದೆ. ಇದು ಒಂದು ಪ್ರಮುಖ ಪದ್ಧತಿ, ಈ ಪದ್ಧತಿಗೆ ಈಗ ವೈe್ಞÁನಿಕ ಮನ್ನಣೆ ನೀಡಿ, ಆಯುಷ್ಯ ಇಲಾಖೆಯಡಿ ಅನುದಾನ ನೀಡಿ ಸಾರ್ವ ಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ ಎಂದರು.

ನಗರದಲ್ಲಿ ಸರ್ಕಾರ ಹಾಗೂ ಧರ್ಮ ಸ್ಥಳ ಶಾಂತಿವನ ಟ್ರಸ್ಟ್ ಸಹಯೋಗದಲ್ಲಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ತೆರೆಯಲಾಗಿದೆ, ಪ್ರಕೃತಿ ಚಿಕಿತ್ಸಾ ಪದ್ಧತಿ ಅತ್ಯಂತ ಸುಲಭ ವಾಗಿದೆ. ಹಾಗಾಗಿ, ಪ್ರಕೃತಿದತ್ತವಾದ ಚಿಕಿತ್ಸೆ ಮತ್ತು ಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಕೃತಿ ಹಾಗೂ ಯೋಗ, ಆರ್ಯುವೇದ, ಹೋಮಿಯೋ, ಯುನಾನಿ, ಸಿದ್ದ ಪದ್ಧತಿ ಒಳಗೊಂಡ ಆಯುಷ್ ಮಂತ್ರಾಲಯ ತೆರೆದು, ಸಾಕಷ್ಟು ಅನು ದಾನ ನೀಡಿ, ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಪ್ರಕೃತಿ ಚಿಕಿತ್ಸೆಯ ಹಿರಿಯ ಅನುಭವಿ ಗಳಾದ ನಿಜಗುಣ ಬಸವರಾಜಪ್ಪ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಲಿಂಗರಾಜು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಮಲ್ಲಯ್ಯನಪುರ ಬಳಿ ಇರುವ ಆದರ್ಶ ಶಾಲೆಯಲ್ಲಿ ಗಿಡಗಳನ್ನು ನೆಡಲಾಯಿತು.ಈ ವೇಳೆ ಆರ್ಯುವೇದ ವೈದ್ಯೆ ಡಾ.ಶುಭಾ, ಪ್ರಕೃತಿ ಚಿಕಿತ್ಸಾ ಕೇಂದ್ರದ ಸಿಬ್ಬಂದಿ ವರ್ಗ, ಆದರ್ಶ ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Translate »