ಧರ್ಮಸ್ಥಳ ಸಂಘದಿಂದ 65 ಕೋಟಿ ರೂ. ಸಾಲ ನೀಡುವ ಗುರಿ: ಸತೀಶ್‍ಶೆಟ್ಟಿ
ಚಾಮರಾಜನಗರ

ಧರ್ಮಸ್ಥಳ ಸಂಘದಿಂದ 65 ಕೋಟಿ ರೂ. ಸಾಲ ನೀಡುವ ಗುರಿ: ಸತೀಶ್‍ಶೆಟ್ಟಿ

November 19, 2018

ಗುಂಡ್ಲುಪೇಟೆ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ತಾಲೂಕಿಗೆ 65 ಕೋಟಿ ರೂಪಾಯಿಗಳ ಸಾಲವನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಎಸ್‍ಕೆಡಿಆರ್‍ಡಿಪಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್‍ಶೆಟ್ಟಿ ಹೇಳಿದರು.

ಪಟ್ಟಣದಲ್ಲಿರುವ ಯೋಜನಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಪ್ರಗತಿ ಪರಿಶೀಲನೆ ಮತ್ತು ಅನುದಾನ ವಿತ ರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ವರ್ಷ ತಾಲೂಕಿಗೆ ವಾರ್ಷಿಕ 65 ಕೋಟಿ ರೂ.ಗಳ ಸಾಲವನ್ನು ನೀಡಬೇಕೆಂಬ ಗುರಿ ಹೊಂದಲಾಗಿದ್ದು, ಈಗಾ ಗಲೇ 35 ಕೋಟಿ ರೂ.ಗಳನ್ನು ವಿತರಿಸಲಾ ಗಿದೆ. ಮುಂದಿನ ಮಾರ್ಚ್ ಅಂತ್ಯಕ್ಕೆ ಉಳಿದ ಸಾಲವನ್ನು ನೂತನ ಸಂಘಗಳನ್ನು ರಚನೆ ಮಾಡಿ ವಿತರಣೆ ಮಾಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ವೃದ್ಧರ ಸಂಘ, ಪ್ರಗತಿ ಬಂಧು ಸಂಘ, ಸ್ವ-ಸಹಾಯ ಸಂಘ, ಜಂಟಿ ಬಾಧ್ಯತಾ ಸಂಘ ರಚನೆ ಮಾಡಿ ಸಾಲವನ್ನು ನೀಡುವುದರ ಜೊತೆಗೆ ಯೋಜನೆ ವತಿಯಿಂದ ಅರ್ಹರಿಗೆ ತರ ಬೇತಿಗಳನ್ನು ನೀಡಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡ ಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಯೋಜ ನಾಧಿಕಾರಿ ಶಿವಪ್ರಸಾದ್, ಕಚೇರಿ ಪ್ರಬಂಧÀಕಿ ಸುಜಾತಾ ಹಾಗೂ ತಾಲೂಕಿನ ಎಲ್ಲಾ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಹಾಜರಿದ್ದರು.

Translate »