ಚಾಮರಾಜನಗರ: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಹೋದರತೆ ತತ್ವಗಳ ಆಧಾರದಲ್ಲಿ ಸಂವಿಧಾನ ರಚಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯಪಟ್ಟರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡತನದಲ್ಲಿ ಹುಟ್ಟಿ ಅನೇಕ ಶೋಷಣೆ, ದೌರ್ಜನ್ಯ…
ಮೈಸೂರು ಅರಮನೆಯಲ್ಲಿ ದಸರಾ ವೈಭೋಗ: ಚಾಮರಾಜನಗರದಲ್ಲಿ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಮನೆ ಅನಾಥ
October 20, 2018ಚಾಮರಾಜನಗರ: ಮೈಸೂರಿನಲ್ಲಿ ನಡೆಯುವ ದಸರಾವನ್ನು ಇಡೀ ವಿಶ್ವವೇ ನೋಡಿದೆ. ಆದರೆ ಮೈಸೂರ ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳವಾದ ಚಾಮರಾಜನಗರದಲ್ಲಿರುವ ಜನನ ಮಂಟಪ ಭೂತಬಂಗಲೆಯಾಗಿ ಅನಾಥವಾಗಿದೆ. ಅಲ್ಲದೇ ಕುಡುಕರ ಆವಾಸ ಸ್ಥಾನ, ಕಸದ ಕೊಂಪೆ, ಮೂತ್ರ ವಿಸರ್ಜನೆಯ ತಾಣವಾಗಿರುವುದು ವಿಪರ್ಯಾಸ. ಮೈಸೂರು ರಾಜಮನೆತನಕ್ಕೂ, ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧವಿದೆ. ಮೈಸೂರು ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ 1776ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ಈ ನೆನಪಿಗಾಗಿಯೇ ಇಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ವೇಳೆ ಅರಿಕುಠಾರ ಎಂದು ಕರೆಯುತ್ತಿದ್ದ ಈ ಊರಿಗೆ…
ತೆರಕಣಾಂಬಿ ತಾಪಂ ಕ್ಷೇತ್ರ; ಮೂವರು ನಾಮಪತ್ರ ಸಲ್ಲಿಕೆ
October 16, 2018ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಕ್ಷೇತ್ರದ ಉಪಚುನಾವಣೆಗೆ ಮೊದಲನೇ ದಿನವಾದ ಅ.15 ರಂದು ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ತಾಲೂಕು ಪಂಚಾಯಿತಿ ಕಾಂಗ್ರೆಸ್ ಸದಸ್ಯರಾಗಿದ್ದ ಆರ್.ಮಹೇಶ್ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅ.16 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್. ನಿರಂಜನಕುಮಾರ್, ಬಿಜೆಪಿ ಮಂಡಲಾ ಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಪುರಸಭೆ ಸದಸ್ಯ…
ಇಸ್ರೋ ವಿಶ್ವದಲ್ಲೇ ಉನ್ನತ ಬಾಹ್ಯಾಕಾಶ ಸಂಸ್ಥೆ
October 16, 2018ಚಾಮರಾಜನಗರ: ಭಾರತದ ಇಸ್ರೋ ಸಂಸ್ಥೆಯು ಪ್ರಪಂಚದಲ್ಲಿ ಉನ್ನತ ವಾದ ಬಾಹ್ಯಕಾಶ ಸಂಶೋಧನ ಸಂಸ್ಥೆ ಯಾಗಿದೆ ಎಂದು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಸಿ.ಡಿ. ಪ್ರಸಾದ್ ಹೇಳಿದರು. ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ರುವ ಕೆಡಿಪಿ ಸಭಾಂಗಣದಲ್ಲಿ ಸ್ಥಳೀಯ ವಿಜ್ಞಾನಾಸ್ತಕರಿಂದ ಪ್ರಾರಂಭವಾದ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆ ಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಬಹುತೇಕ ವಿಜ್ಞಾನಿಗಳು ಗ್ರಾಮೀಣ ಪ್ರದೇಶದಿಂದಲೇ ಬೆಳಕಿಗೆ ಬಂದವರು. ಇವರುಗಳು ವಿಜ್ಞಾನ ವಿಷಯದಲ್ಲಿ ಅತ್ಯು ತ್ತಮ ಸಂಶೋಧನೆಗಳನ್ನು ಮಾಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನ…
ಇಂದು ಕಾಲೇಜು ವಿದ್ಯಾರ್ಥಿಗಳ ಟೆನಿಕಾಯ್ಟ್ ಪಂದ್ಯಾವಳಿ ಉದ್ಘಾಟನೆ
October 16, 2018ಚಾಮರಾಜನಗರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪ್ರಾಂಶುಪಾಲರ, ಉಪನ್ಯಾಸಕರ, ಬೋಧಕೇತರ ಸಂಘಟನೆಗಳ ಆಶ್ರಯದಲ್ಲಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಟೆನಿಕಾಯ್ಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಅ.16 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜೆ ಎಸ್ ಎಸ್ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಾಜಿ ಸಚಿವ ಎನ್. ಮಹೇಶ್ ಉದ್ಘಾಟನೆ ನೆರವೇರಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ…
ವರ್ಷಧಾರೆ ನಡುವೆ ಹರಿದ ಸಂಗೀತ ರಸಧಾರೆ ಸಂಗೀತ ಕಟ್ಟಿ ಗಾಯನಕ್ಕೆ ತಲೆದೂಗಿದ ಜನತೆ
October 15, 2018ಚಾಮರಾಜನಗರ: ಚಾಮರಾಜನಗರದಲ್ಲಿ ಇಂದು ವರುಣನ ವರ್ಷ ಧಾರೆಯ ನಡುವೆಯೇ ಸಂಗೀತದ ರಸಧಾರೆಯೇ ಹರಿಯಿತು. ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳ ಭಾವ ಲಹರಿ ನಗರದಲ್ಲೆಡೆ ಅನುರಣಿಸಿತು. ಚಾಮರಾಜನಗರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಇಲ್ಲಿನ ಶ್ರೀ ಚಾಮರಾಜೇಶ್ವರ ದೇವ ಸ್ಥಾನದ ಮುಂಭಾಗ ಹಾಕಲಾಗಿದ್ದ ಅದ್ಧೂರಿ ಬೃಹತ್ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಎಲ್ಲರಿಗೂ ನಮಸ್ಕಾರ ಎನ್ನುತ್ತಾ ರಾತ್ರಿ…
ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
October 14, 2018ಚಾಮರಾಜನಗರ: ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ 4 ದಿನಗಳ ಕಾಲ ಆಯೋಜಿಸಿರುವ ದಸರಾ ಕಾರ್ಯಕ್ರಮಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು. ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವ ರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆ ಯಲ್ಲಿ ಮೊದಲ ದಿನ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೇಕ್ಷ ಕರಿಗೆ ಸಂಗೀತದ ರಸದೌತಣ ಉಣಬಡಿಸಿದರು. ರಾತ್ರಿ 8.05ಕ್ಕೆ ವೇದಿಕೆಯ ಮೇಲೆ ಕಪ್ಪು ಟೀ ಶರ್ಟ್, ಬಿಳಿ ಕೋಟ್ ಹಾಗೂ ಬಿಳಿ ಪ್ಯಾಂಟ್ ಧರಿಸಿ ಭಜರಂಗಿ ಚಿತ್ರದ…
ಇಂದಿನಿಂದ ಚಾಮರಾಜನಗರದಲ್ಲಿ ದಸರಾ ಸಂಭ್ರಮ
October 13, 2018ಚಾಮರಾಜನಗರ: ಜಿಲ್ಲಾಡ ಳಿತ ಹಾಗೂ ಮೈಸೂರಿನ ದಸರಾ ಮಹೋ ತ್ಸವ ಸಮಿತಿಯ ಆಶ್ರಯದಲ್ಲಿ ಚಾಮರಾಜನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ದಸರಾ ಮಹೋತ್ಸವ 2018ಕ್ಕೆ ನಾಳೆ (ಅ.13) ಚಾಲನೆ ದೊರೆಯಲಿದೆ. ಅ.13ರಿಂದ 16ರವರೆಗೆ ನಡೆಯಲಿರುವ ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಬೆ.10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಚಾಲನೆ ದೊರೆಯಲಿದೆ. ನಂತರ ಚಲನಚಿತ್ರೋತ್ಸವ, ಸಂಜೆ 4 ಗಂಟೆಗೆ ಕಲಾ ತಂಡಗಳು, ಶಾಲಾ-ಕಾಲೇಜು ವಿದ್ಯಾರ್ಥಿ ಗಳ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಚಾಮರಾಜೇಶ್ವರ…
ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ
October 13, 2018ಹನೂರು:ಟೊಮೋಟೋ ಫಸಲಿನ ಜೊತೆ ಗಾಂಜಾ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ರಾಮಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ, ಹನೂರು ಸಮೀಪದ ದೊಮ್ಮನಗದ್ದೆ ನಿವಾಸಿ ಹನುಮನಾಯಕನನ್ನು ಬಂಧಿಸಿ 37 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ರಾಮಾಪುರ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಸಿಬ್ಬಂದಿಗಳಾದ ನಾಗೇಂದ್ರ, ರಘು, ರವಿಪ್ರಸಾದ್, ಮನೋಹರ್, ಪ್ರಕಾಶ್ ಪ್ರದೀಪ್, ಮಂಜುನಾಥ್ ದಾಳಿಯಲ್ಲಿ ಭಾಗವಹಿಸಿದರು. ಖಚಿತ ಮಾಹಿತಿ ದೊರೆತ ಮೇರೆಗೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ದೊಮ್ಮನಗದ್ದೆ ಗ್ರಾಮದ ನಿವಾಸಿ ಹನುಮನಾಯಕ…
ಕುರಿಗಾಹಿಗಳು ಆಧುನಿಕ ಯಂತ್ರ ಬಳಸಲು ಸಲಹೆ
October 12, 2018ಅರಸೀಕೆರೆ: ‘ಕುರಿ ಉಣ್ಣೆಯನ್ನು ಕತ್ತರಿಸಲು ಆಧುನಿಕ ಯಂತ್ರಗಳನ್ನು ಬಳಸು ವುದರಿಂದ ಉತ್ತಮ ಗುಣಮಟ್ಟ ದೊಂದಿಗೆ ಕಂಬಳಿ ನೇಯಲು ಅನುಕೂಲವಾಗುತ್ತದೆ. ಕುರಿಗಾಹಿಗಳು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು’ ಎಂದು ಕುರಿ ಮತ್ತು ಉಣ್ಣೆ ಅಭಿ ವೃದ್ಧಿ ನಿಗಮದ ಸಹಾಯಕ ನಿದೇರ್ಶಕ ಡಾ.ಸುರೇಶ್ ಸಲಹೆ ನೀಡಿದರು. ತಾಲೂಕಿನ ಬಸವರಾಜಪುರದಲ್ಲಿ ಕರ್ನಾ ಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಹಾಸನ ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಕುರಿಗಾಹಿಗಳಿಗೆ ಏರ್ಪಡಿಸಿದ…










