ಕುರಿಗಾಹಿಗಳು ಆಧುನಿಕ ಯಂತ್ರ ಬಳಸಲು ಸಲಹೆ
ಹಾಸನ

ಕುರಿಗಾಹಿಗಳು ಆಧುನಿಕ ಯಂತ್ರ ಬಳಸಲು ಸಲಹೆ

October 12, 2018

ಅರಸೀಕೆರೆ:  ‘ಕುರಿ ಉಣ್ಣೆಯನ್ನು ಕತ್ತರಿಸಲು ಆಧುನಿಕ ಯಂತ್ರಗಳನ್ನು ಬಳಸು ವುದರಿಂದ ಉತ್ತಮ ಗುಣಮಟ್ಟ ದೊಂದಿಗೆ ಕಂಬಳಿ ನೇಯಲು ಅನುಕೂಲವಾಗುತ್ತದೆ. ಕುರಿಗಾಹಿಗಳು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು’ ಎಂದು ಕುರಿ ಮತ್ತು ಉಣ್ಣೆ ಅಭಿ ವೃದ್ಧಿ ನಿಗಮದ ಸಹಾಯಕ ನಿದೇರ್ಶಕ ಡಾ.ಸುರೇಶ್ ಸಲಹೆ ನೀಡಿದರು.

ತಾಲೂಕಿನ ಬಸವರಾಜಪುರದಲ್ಲಿ ಕರ್ನಾ ಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಹಾಸನ ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಕುರಿಗಾಹಿಗಳಿಗೆ ಏರ್ಪಡಿಸಿದ 3 ದಿನಗಳ ಯಾಂತ್ರೀಕೃತ ಉಣ್ಣೆ ಕಟಾವಣೆ ತರಭೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಒಬ್ಬ ಮನುಷ್ಯ ಕತ್ತರಿಯ ಮೂಲಕ ಒಂದು ದಿನಕ್ಕೆ 25 ಕುರಿಗಳನ್ನು ಕಟಾವು ಮಾಡಬಹುದಾಗಿರುತ್ತದೆ. ಆದರೆ, ಈ ಉಣ್ಣೆ ಬಳಕೆಗೆ ಯೋಗ್ಯವಾಗಿಲ್ಲ. ಯಂತ್ರಗಳ ಬಳಕೆ ಮಾಡಿದರೆ ಒಂದು ದಿನಕ್ಕೆ 80ಕ್ಕೂ ಹೆಚ್ಚು ಕುರಿಗಳ ಉಣ್ಣೆ ಕಟಾವು ಮಾಡ ಬಹುದಾಗಿರುತ್ತದೆ. ಇದು ಬಳಕೆಗೆ ಯೋಗ್ಯ ವಾಗಿ ಕಂಬಳಿ ಇನ್ನಿತರ ವಸ್ತುಗಳನ್ನು ತಯಾರಿ ಸಲು ಅನುಕೂಲವಾಗುತ್ತದೆ. ಆದ್ದರಿಂದ ಪ್ರತಿ ಸಂಘಕ್ಕೆ ಒಂದು ಯಂತ್ರವನ್ನು ನೀಡ ಲಾಗುತ್ತಿದ್ದು, ಇದರ ಬೆಲೆ 1.75ಲಕ್ಷ ವಾಗಿದೆ. ಕುರಿಗಾಹಿಗಳು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುರಿಗಳ ಮೈಮೇಲೆ ಕ್ರಿಮಿ-ಕೀಟಗಳು ಸೇರಿ ಚರ್ಮ ರೋಗ, ಗಾಯವಾಗುತ್ತಿ ದ್ದುದನ್ನು ನಾವು ನೋಡಿದ್ದೀವಿ ಈ ಯಾಂತ್ರೀ ಕೃತ ಯಂತ್ರದ ಬಳಕೆಯಿಂದ ಸಂಪೂರ್ಣ ವಾಗಿ ಉಣ್ಣೆ ಬರುವುದರಿಂದ ಕ್ರೀಮಿ, ಕೀಟ ಗಳು ಸೇರಲು ಅವಕಾಶವಿರುವುದಿಲ್ಲ ಉಣ್ಣೆಗೆ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ. ಕುರಿಗಾಹಿಗಳು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದರು.

ಸಂಘದ ಅಧ್ಯP್ಷÀ ಬಿಳಿಚೌಡಯ್ಯ ಮಾತ ನಾಡಿ, ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗಿನ ಮರಗಳು ನಾಶವಾ ಗಿದೆ. ರೈತರ ಬದುಕು ಚಿಂತಾ ಜನಕವಾ ಗಿದೆ. ಆದ್ದರಿಂದ ಕೈಷಿ ಮತ್ತು ತೋಟ ಗಾರಿಕೆಗೆ ಪೂರಕವಾಗಿ ಹೈನುಗಾರಿಕೆ ಯನ್ನು ರೈತರು ಅವಲಂಬಿಸಬೇಕು. ಇದರಿಂದ ತಮ್ಮ ಜೀವನ ಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಸಾಧ್ಯ ವಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹೈನುಗಾರಿಕೆಯನ್ನು ಲಾಭದ ಉದ್ಯಮವನ್ನಾಗಿ ಬೆಳೆಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. 18 ವರ್ಷಗಳ ಇತಿಹಾಸ ಹೊಂದಿ ರುವ ನಮ್ಮ ಸಂಘ ಪ್ರಾರಂಭದಲ್ಲಿ 100 ಸದಸ್ಯರು ಹೊಂದಿದ್ದು, ಇಂದು 3,500 ಸದಸ್ಯರನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಆರ್ಥಿಕ ನೆರವು ಪಡೆದುಕೊಂಡು ಕುರಿ ಸಾಗಾ ಣಿಕೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕುರಿ ಮೇಕೆಗಳು ವಿವಿಧ ರೋಗ ಗಳಿಂದ ಹಾಗೂ ಆಕಸ್ಮಿಕ ಅಪÀಘಾತದಲ್ಲಿ ಮೈತಪಟ್ಟರೇ ನಿಗಮದ ಸೂಕ್ತ ಪರಿಹಾರ ಕೊಡಿಸಲಾಗುತ್ತಿದೆ. ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದುಕೊಂಡು ಹೈನುಗಾರಿಕೆ ನಡೆಸುವ ಮೂಲಕ ತಮ್ಮ ಜೀವನ ಮಟ್ಟವನ್ನು ಆರ್ಥಿಕವಾಗಿ ಸುಧಾರಣೆ ಮಾಡಿಕೊಳ್ಳಬೇಕು. ಕುರಿಗಾಹಿಗಳು ಸಂಘದ ಸದಸ್ಯರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯP್ಷÀ ಬಂಡಿಗೌಡ್ರು ರಾಜಣ್ಣ, ತಾಪಂ ಉಪಾಧ್ಯಕ್ಷ ಸಂಘದ ಉಪಾಧ್ಯಕ್ಷ ಎ.ಎಸ್.ಚಂದ್ರಶೇಖರ್, ಗ್ರಾಪಂ ಅಧ್ಯಕ್ಷ ಕುಬೇರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಜಪ್ಪ, ಮುಖಂಡರಾದ ರಾಜಾನಾಯ್ಕ್, ಮಹಾಲಿಂಗಪ್ಪ, ಇದ್ದರು.

Translate »