ಚಾಮರಾಜನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ನೀಡಿದರೆ, ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾಡಿನ ಜನರಿಗೆ ಕರೆ ನೀಡಬೇಕಾಗುತ್ತದೆ ಎಂಬ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಹೇಳಿಕೆಯನ್ನು ಖಂಡಿಸಿ ನಗರ ದಲ್ಲಿ ಶುಕ್ರವಾರ ಬಿಜೆಪಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಭುವ ನೇಶ್ವರಿ ವೃತ್ತದವರೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿ, ಬಳಿಕ ವೃತ್ತದ ಮಧ್ಯ ಭಾಗದಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ಮುಖ್ಯಮಂತ್ರಿ ಕುಮಾ ರಸ್ವಾಮಿ ವಿರುದ್ಧ…
ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
September 24, 2018ಚಾಮರಾಜನಗರ: ರಸ್ತೆ ವಿಭಜಕಕ್ಕೆ ಆಟೋವೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದೆ. ರಾಮಸಮುದ್ರ ಬಡಾವಣೆ ನಾಯಕರ ಬೀದಿಯ ನಿವಾಸಿ ಬಂಗಾರನಾಯಕ(38) ಮೃತ ಚಾಲಕನಾಗಿದ್ದು, ರಾಮಸಮುದ್ರದ ಹನುಮಂತನಾಯಕ, ಮೈಸೂರು ವಿಜಯನಗರ ನಿವಾಸಿ ರವಿ, ಶಿವಕುಮಾರ್, ಹರೀಶ, ಮಹೇಂದ್ರ, ರಾಜು ಅವರುಗಳು ಗಾಯ ಗೊಂಡಿದ್ದಾರೆ. ಗಾಯಾಳುಗಳಲ್ಲಿ ಹನುಮಂತನಾಯಕ ಹಾಗೂ ರವಿ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಯಿತು. ಆಟೋ ಚಾಲಕ ಬಂಗಾರನಾಯಕ…
ಶೀಘ್ರ ಪಡಿತರ ವಿತರಿಸದಿದ್ದರೆ ಡಿಸಿ ಕಚೇರಿ ಮುಂದೆ ಧರಣಿ ಎಚ್ಚರಿಕೆ
September 24, 2018ಕೊಳ್ಳೇಗಾಲ: ಮೂರು ದಿನದಲ್ಲಿ ರೇಷನ್ ವಿತರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಲೊಕ್ಕನಹಳ್ಳಿಯ ಪಡಿತರದಾರರು ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಭಗೀರಥ ಸಂಘದ ಪದಾಧಿಕಾರಿಗಳು ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಮೂರು ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳೆದ ಮೂರು ತಿಂಗಳಿಂದಲೂ ಪಡಿತರೆ ವಿತರಣೆಯಾಗಿಲ್ಲ. ಲೊಕ್ಕನಹಳ್ಳಿ ಗ್ರಾಮದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಕಾರ್ಡ್ ಗಳಿದ್ದು, ಮೂರು ನ್ಯಾಯ ಬೆಲೆ ಅಂಗಡಿಗಳಿವೆ. ಮೂರು ಅಂಗಡಿಗಳಲ್ಲೂ ಸಹಾ ಪಡಿತರ ವಿತರಣೆಯಾಗಿಲ್ಲ. ಅಂಗಡಿ ಮಾಲೀಕರನ್ನು ಕೇಳಿದರೆ ನಮಗೆ ರೇಷನ್ ಬಂದಿಲ್ಲ ಎನ್ನುತ್ತಾರೆ. ಈ…
ಹೆಚ್.ಎಸ್.ಮಹದೇವಪ್ರಸಾದ್, ಪುಟ್ಟಬುದ್ದಿ ಸ್ಮರಣಾರ್ಥ ಸಂತೇಮರಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ
September 24, 2018ಚಾಮರಾಜನಗರ: ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವಪ್ರಸಾದ್ ಹಾಗೂ ಜಿಪಂ ಮಾಜಿ ಸದಸ್ಯ ಡಾ.ಬಿ.ಪಿ.ಪುಟ್ಟಬುದ್ದಿ ಅವರ ಸ್ಮರಣಾರ್ಥ ಸಂತೇಮರ ಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಎಸ್‍ಎಸ್‍ಡಿ ಕ್ರೀಡಾ ಮತ್ತು ಸಾಂಸ್ಕøತಿಕ ಯೂತ್ ಅಸೋಷಿಯೇಷನ್ ಸಂಘಟನೆ ಆಯೋಜಿಸಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಸೋ ಷಿಯೇಷನ್ ಅಧ್ಯಕ್ಷ ಡಿ.ಎನ್.ನಟರಾಜು ಈ ವಿಷಯ ತಿಳಿಸಿದರು. ಹೆಚ್.ಎಸ್.ಮಹದೇವ ಪ್ರಸಾದ್ ಹಾಗೂ ಬಿ.ಪಿ.ಪುಟ್ಟಬುದ್ದಿ ಅವರನ್ನು ನೆನಪು ಮಾಡಿಕೊಳ್ಳುವ ಉದ್ದೇಶ ಹಾಗೂ ಯುವಜನತೆಯ ಈ ಇಬ್ಬರನ್ನು ಪರಿಚಯಿಸುವ ಉದ್ದೇಶದಿಂದ…
ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ
September 22, 2018ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದ ಬಳಿ ಇರುವ ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ ದೊರೆಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಆಶ್ರಯದಲ್ಲಿ ಹೊಸ ತಲೆ ಮಾರಿನ ರೈತ ಚಳವಳಿ ಕಟ್ಟುವ ಉದ್ದೇ ಶದಿಂದ ಮೂರು ದಿನಗಳ ಕಾಲ (ಸೆ.21 ರಿಂದ 23) ಯುವ ರೈತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರೈತ ಚೇತನ ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕನಸಿನ ಕೂಸು ಅಮೃತ ಭೂಮಿಯಲ್ಲಿ ಇರುವ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಮತ್ತು ದಿ.ಪ್ರತಿಮಾ ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ರೈತ…
ಬೈಕ್‍ಗಳ ಡಿಕ್ಕಿ; ಓರ್ವನಿಗೆ ಗಾಯ
September 22, 2018ಕಾಮಗೆರೆ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಒಬ್ಬನಿಗೆ ಮುಖ ತಲೆಗೆ ತೀವ್ರ ಗಾಯ ವಾಗಿರುವ ಘಟನೆ ಸಮೀಪದ ಹುಲಸು ಗುಡ್ಡೆ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಸುರೇಶ್ ಎಂಬುವರಿಗೆ ತೀವ್ರ ಸ್ವರೂ ಪದ ಗಾಯವಾಗಿದ್ದು, ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ: ಸುರೇಶ್ ಹಾಗೂ ಸ್ನೇಹಿತರು ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು….
ಇಂದಿನಿಂದ ನಾಗವಳ್ಳಿ ಬಳಿ ಇರುವ ಅಮೃತ ಭೂಮಿಯಲ್ಲಿ ಯುವ ರೈತ ಕಾರ್ಯಾಗಾರ
September 21, 2018ಚಾಮರಾಜನಗರ: ಹೊಸ ತಲೆಮಾರಿನ ರೈತ ಚಳವಳಿ ಕಟ್ಟುವ ಉದ್ದೇಶದಿಂದ ಚಾಮರಾಜನಗರ ತಾಲೂಕಿನ ಹೊಂಡರಬಾಳು ಬಳಿ ಇರುವ ಅಮೃತ ಭೂಮಿಯಲ್ಲಿ ಸೆ.21 ರಿಂದ 24 ರವರೆಗೆ ‘ಯುವ ರೈತ ಕಾರ್ಯಾಗಾರ’ ಹಮ್ಮಿ ಕೊಳ್ಳಲಾಗಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಘಟಕದ ರಾಜ್ಯ ಸಂಚಾಲಕಿ ಕೋಲಾರದ ನಳಿನಿ ಈ ವಿಷಯ ತಿಳಿಸಿದರು. ಗ್ರಾಮೀಣ ಬದುಕನ್ನು ನೆಮ್ಮದಿಯುತ, ಸೃಜನಶೀಲ ಹಾಗೂ ಪುನರ್ ಸಂಘಟಿಸ ಬೇಕಾಗಿದೆ. ಹೋರಾಟವನ್ನೂ,…
ಸ್ಕೂಟರ್‍ನಿಂದ ಬಿದ್ದು ಅರಣ್ಯಾಧಿಕಾರಿ ಸಾವು
September 21, 2018ಚಾಮರಾಜನಗರ: ಸ್ಕೂಟರ್‍ನಿಂದ ಬಿದ್ದು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಮರಿಯಾಲ ಗ್ರಾಮದ ಬಳಿ ಬುಧವಾರ ನಡೆದಿದೆ. ಸಾಮಾಜಿಕ ಅರಣ್ಯ ವಲಯದ ಉಪ ವಲಯ ಅರಣ್ಯಾಧಿ ಕಾರಿ ಆಗಿದ್ದ ಸೋಮರಾಜ್ ಅರಸ್ (36) ಮೃತಪಟ್ಟವರು. ಚಾಮರಾಜನಗರ ತಾಲೂಕಿನ ಬದನಗುಪ್ಪೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಸೋಮರಾಜ್ ಅರಸ್ ಸ್ಕೂಟರ್‍ನಲ್ಲಿ ಚಾ.ನಗರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮರಿಯಾಲದ ಬಳಿ ಸ್ಕೂಟರ್‍ನ ಹಿಂಬದಿ ಚಕ್ರ ಸ್ಫೋಟಗೊಂಡಿತು ಎನ್ನಲಾಗಿದೆ. ಇದರಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಸೋಮರಾಜ್ ಅರಸ್ ಅವರ ತಲೆಗೆ…
ಆಲೂರು ಗ್ರಾಮದಲ್ಲಿ ಮಾತೃಪೂರ್ಣ ಮಾಸಾಚರಣೆ
September 21, 2018ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪೌಷ್ಟಿಕ ಕರ್ನಾಟಕ ಮಾತೃಪೂರ್ಣ ಮತ್ತು ಮಾತೃ ವಂದನಾ ಮಾಸಾಚರಣೆ ಕಾರ್ಯಕ್ರಮವನ್ನು ಡಾ.ಅಭಯ್‍ಕುಮಾರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಸರ್ಕಾರವು ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಲು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯನ್ನು ಜಾರಿಗೊಳಿಸಿ ಅವರಿಗೆ ಪ್ರತಿದಿನ ಮಧ್ಯಾಹ್ನದ ಸಮಯ ಬೇಳೆ ಸಾರು, ಅನ್ನ, ತರಕಾರಿ, ಸೊಪ್ಪಿನ ಪಲ್ಯ, ಮೊಟ್ಟೆ, ಪೌಷ್ಠಿಕ ಆಹಾರ ನೀಡುತ್ತಿದೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಈ…
ಮನಸಿನ ಉಲ್ಲಾಸಕ್ಕೆ ಸಂಗೀತ ಸಹಕಾರಿ
September 21, 2018ಚಾಮರಾಜನಗರ: ನಿತ್ಯಜೀವ ನದ ಜಂಜಾಟದಿಂದ ಹೊರಬರಲು, ದಣಿದ ದೇಹಕ್ಕೆ ಹೊಸ ಹುಮ್ಮಸನ್ನು ನೀಡಲು, ಪ್ರಕ್ಷುಬ್ಧಗೊಂಡಿರುವ ಮನಸ್ಸನ್ನು ಉಲ್ಲ ಸಿತಗೊಳಿಸಲು ಸಂಗೀತ ಪ್ರಯೋಜನ ಕಾರಿಯಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ನ್ಯಾಯಾಲಯದ ಆವ ರಣದಲ್ಲಿ ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘ ಗಣಪತಿ ಪೂಜಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಶರಣರು ರಚಿಸಿದ…