ಮನಸಿನ ಉಲ್ಲಾಸಕ್ಕೆ ಸಂಗೀತ ಸಹಕಾರಿ
ಚಾಮರಾಜನಗರ

ಮನಸಿನ ಉಲ್ಲಾಸಕ್ಕೆ ಸಂಗೀತ ಸಹಕಾರಿ

September 21, 2018

ಚಾಮರಾಜನಗರ:  ನಿತ್ಯಜೀವ ನದ ಜಂಜಾಟದಿಂದ ಹೊರಬರಲು, ದಣಿದ ದೇಹಕ್ಕೆ ಹೊಸ ಹುಮ್ಮಸನ್ನು ನೀಡಲು, ಪ್ರಕ್ಷುಬ್ಧಗೊಂಡಿರುವ ಮನಸ್ಸನ್ನು ಉಲ್ಲ ಸಿತಗೊಳಿಸಲು ಸಂಗೀತ ಪ್ರಯೋಜನ ಕಾರಿಯಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ನ್ಯಾಯಾಲಯದ ಆವ ರಣದಲ್ಲಿ ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘ ಗಣಪತಿ ಪೂಜಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ರಚಿಸಿದ ಸಾಮಾಜಿಕ, ಧಾರ್ಮಿಕ, ನೈತಿಕ ಮೌಲ್ಯಗ ಳನ್ನು ಹೊಂದಿದ್ದ ವಚನಗಳು ಸಂಗೀತಗಳಾ ಗಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆ ಗಳನ್ನು ಮೆಟ್ಟಿ ನಿಲ್ಲಲು ಸಂಗೀತ ಪ್ರೇರಣೆ ಯಾಗಬಲ್ಲದು ಎಂದು ತಿಳಿಸಿದರು.
ಸಂಗೀತ ಎಲ್ಲರಿಗೂ ಇಷ್ಟ, ಒಬ್ಬೊಬ್ಬ ರಿಗೆ ಒಂದೊಂದು ಬಗೆಯ ಸಂಗೀತ ಇಷ್ಟವಾಗುತ್ತದೆ. ಸಂಗೀತದಲ್ಲಿ ಅನೇಕ ಪ್ರಕಾರಗಳು ಇವೆ, ಸಂಗೀತ ಒಂದಕ್ಕಿಂತ ಒಂದು ವಿಭಿನ್ನವಾದರೂ ಅವುಗಳ ಉದ್ದೇಶ ಕೇಳುಗರ ಮನಸ್ಸನ್ನು ಮುದಗೊಳಿಸುವು ದಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮ ತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿನಯ್, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಸಿವಿಲ್ ನ್ಯಾಯಾಧೀಶೆ ವಿ.ದೀಪಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಆರುಣ್‍ಕುಮಾರ್, ಜಿಲ್ಲಾ ಸರ್ಕಾರಿ ವಕೀಲ ಹೆಚ್.ಎನ್. ಲೋಕೇಶ್, ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೀಶ್, ಮುಖ್ಯ ಆಡಳಿತ ಅಧಿಕಾರಿ ಸೋಮನಾಥ ಪ್ರಸಾದ್, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ವಿ.ಯಂಕ ನಾಯಕ ಇನ್ನು ಮುಂತಾದವರಿದ್ದರು. ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಉಷಾ ಗಂಧರ್ವ ಮೆಲೋಡಿಸ್ ಅವರ ಜೊತೆ ಗೂಡಿ ವಕೀಲರು, ನ್ಯಾಯಾಂಗ ಇಲಾಖೆ ನೌಕ ರರು ಗೀತೆಗಳನ್ನು ಹಾಡಿ ರಂಜಿಸಿದರು.

Translate »