ಆಲೂರು ಗ್ರಾಮದಲ್ಲಿ ಮಾತೃಪೂರ್ಣ ಮಾಸಾಚರಣೆ
ಚಾಮರಾಜನಗರ

ಆಲೂರು ಗ್ರಾಮದಲ್ಲಿ ಮಾತೃಪೂರ್ಣ ಮಾಸಾಚರಣೆ

September 21, 2018

ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪೌಷ್ಟಿಕ ಕರ್ನಾಟಕ ಮಾತೃಪೂರ್ಣ ಮತ್ತು ಮಾತೃ ವಂದನಾ ಮಾಸಾಚರಣೆ ಕಾರ್ಯಕ್ರಮವನ್ನು ಡಾ.ಅಭಯ್‍ಕುಮಾರ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಸರ್ಕಾರವು ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಲು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯನ್ನು ಜಾರಿಗೊಳಿಸಿ ಅವರಿಗೆ ಪ್ರತಿದಿನ ಮಧ್ಯಾಹ್ನದ ಸಮಯ ಬೇಳೆ ಸಾರು, ಅನ್ನ, ತರಕಾರಿ, ಸೊಪ್ಪಿನ ಪಲ್ಯ, ಮೊಟ್ಟೆ, ಪೌಷ್ಠಿಕ ಆಹಾರ ನೀಡುತ್ತಿದೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಈ ಸಂದರ್ಭದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಆಹಾರದ ಅವಶ್ಯಕತೆ ಇದೆ. ಸಮಗ್ರ ಶಿಶು ಹಾಗೂ ತಾಯಿಯ ಆರೈಕೆ ದೃಷ್ಟಿಯಿಂದ ಮಾತೃಪೂರ್ಣ ಕಾರ್ಯಕ್ರಮ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯ ಮೂಲಕ ಆರೋಗ್ಯಯುತ ಬಲಿಷ್ಟ ಕರ್ನಾಟಕ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಗರ್ಭಿಣಿಯರು ಹಾಗೂ ಬಾಣಂತಿಯರು ವಾಸಿಸುವ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಇದರ ಸದುಪಯೋಗ ಪಡಿಸಿಕೂಂಡು ಆರೋಗ್ಯೆವಂತ ಮಕ್ಕಳನ್ನು ಪಡೆಯಬೇಕೆಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಸುಮಂಗಲಿ, ಸದಸ್ಯರಾದ ಮಹದೇವಯ್ಯ, ಮಹದೇವ ಸ್ವಾಮಿ, ಪ್ರಾಂಶುಪಾಲ ಮಂಜುನಾಥ್, ಉಪನ್ಯಾಸಕ ಪ್ರಭುಸ್ವಾಮಿ, ಜಿಲ್ಲಾ ಅಂಗನವಾಡಿ ಅಧ್ಯಕ್ಷೆ ಕೆ.ಸುಜಾತ, ನಾಗರತ್ನಮ, ಕೆ.ಶೋಭಾ ಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರಿದ್ದರು.

Translate »