ಸ್ಕೂಟರ್‍ನಿಂದ ಬಿದ್ದು ಅರಣ್ಯಾಧಿಕಾರಿ ಸಾವು
ಚಾಮರಾಜನಗರ

ಸ್ಕೂಟರ್‍ನಿಂದ ಬಿದ್ದು ಅರಣ್ಯಾಧಿಕಾರಿ ಸಾವು

September 21, 2018

ಚಾಮರಾಜನಗರ: ಸ್ಕೂಟರ್‍ನಿಂದ ಬಿದ್ದು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಮರಿಯಾಲ ಗ್ರಾಮದ ಬಳಿ ಬುಧವಾರ ನಡೆದಿದೆ.

ಸಾಮಾಜಿಕ ಅರಣ್ಯ ವಲಯದ ಉಪ ವಲಯ ಅರಣ್ಯಾಧಿ ಕಾರಿ ಆಗಿದ್ದ ಸೋಮರಾಜ್ ಅರಸ್ (36) ಮೃತಪಟ್ಟವರು.

ಚಾಮರಾಜನಗರ ತಾಲೂಕಿನ ಬದನಗುಪ್ಪೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಸೋಮರಾಜ್ ಅರಸ್ ಸ್ಕೂಟರ್‍ನಲ್ಲಿ ಚಾ.ನಗರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮರಿಯಾಲದ ಬಳಿ ಸ್ಕೂಟರ್‍ನ ಹಿಂಬದಿ ಚಕ್ರ ಸ್ಫೋಟಗೊಂಡಿತು ಎನ್ನಲಾಗಿದೆ. ಇದರಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಸೋಮರಾಜ್ ಅರಸ್ ಅವರ ತಲೆಗೆ ತೀವ್ರ ಪೆಟ್ಟು ಬಿತ್ತು. ತಕ್ಷಣ ಅವರನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು ಎಂದು ಚಾ.ನಗರ ಸಂಚಾರ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

ಹೆಚ್‍ಡಿ ಕೋಟೆ ತಾಲೂಕಿನ ಸರಗೂರು ಗ್ರಾಮದವರಾದ ಅರಸು ಅವರಿಗೆ ಪತ್ನಿ, ಮಕ್ಕಳು ತಾಯಿ ಇದ್ದರು. ಗುರುವಾರ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು.

 

Translate »