ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ
ಚಾಮರಾಜನಗರ

ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ

September 21, 2018

ಗುಂಡ್ಲುಪೇಟೆ:  ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣ ಗೊಳಿಸಲು ಪ್ರತಿಭಾ ಕಾರಂಜಿ ಪೂರಕವಾದ ವಾತಾವರಣವನ್ನು ಕಲ್ಪಿಸಿದೆ ಎಂದು ಪುರ ಸಭೆ ಅಧ್ಯಕ್ಷ ಪಿ.ಗಿರೀಶ್ ಹೇಳಿದರು. ಪಟ್ಟಣದ ಕೆ.ಎಸ್.ನಾಗರತ್ಮಮ್ಮ ಪ್ರೌಢಶಾಲೆ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಕ್ಷರ ಕಲಿಕೆಯೊಂದಿಗೆ ಮಕ್ಕಳ ಪ್ರತಿ ಭೆಯನ್ನು ಗುರ್ತಿಸಿ ಬೆಳಕಿಗೆ ತರಲು ಶಿಕ್ಷಣ ಇಲಾಖೆಯು ಪ್ರತಿ ವರ್ಷವೂ ಕ್ಲಸ್ಟರ್, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟ ದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸು ತ್ತಿದೆ. ಇವುಗಳಲ್ಲಿ ಭಾಗವಹಿಸಿದ ಅರ್ಹ ಪ್ರತಿಭೆಗಳನ್ನು ಪಕ್ಷಪಾತಲ್ಲದೆ ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.

ಶಾಲೆಗಳಲ್ಲಿ ವಿದ್ಯೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದರೂ ಕ್ರೀಡೆಗಳು ಮಕ್ಕಳ ದೈಹಿಕ ಬೆಳವಣಿಗೆಗೆ ನೆರವಾದರೆ, ಸಾಂಸ್ಕೃ ತಿಕ ಚಟುವಟಿಕೆಗೆಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ನೆರವಾಗು ತ್ತವೆ. ಈ ಮೂಲಕ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಓದಿನಿಂದ ಮಾತ್ರವಲ್ಲದೆ ಕ್ರೀಡೆ, ಕಲೆ ಹಾಗೂ ಸಾಂಸ್ಕೃ ತಿಕ ರಂಗಗಳಲ್ಲಿಯೂ ಉತ್ತಮ ಸಾಧನೆ ಮಾಡಲು ಅವಕಾಶಗಳಿದ್ದು, ಪಾಲಕರು ತಮ್ಮ ಮಕ್ಕಳ ಪ್ರತಿಭೆ ಹೊರತರಲು ಸಹಕಾರ ನೀಡುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೀಶ ಮೂರ್ತಿ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ವಿದ್ಯೆ ಕಲಿಸುವ ಜತೆಯಲ್ಲಿ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರಬೇಕು. ಇಂತಹ ವೇದಿಕೆ ಗಳಲ್ಲಿ ಮಕ್ಕಳ ಕಲೆ ಹೊರ ಜಗತ್ತಿಗೆ ಅನಾ ವರಣವಾದಾಗ ಮಾತ್ರ ಪ್ರತಿಭಾ ಕಾರಂಜಿ ಸಂಪೂರ್ಣವಾದ ಯಶಸ್ಸು ಕಾಣುತ್ತದೆ ಎಂದರು. ಈ ಸಂದರ್ಭದಲ್ಲಿ ಜವಹರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಟೇಲ್ ಶಾಂತಪ್ಪ, ಕಾರ್ಯದರ್ಶಿ ಎಂ.ಪಿ.ಸುನಿಲ್, ಬಿಇಒ ಮೋಹನ್, ಬಿಆರ್‍ಸಿ ನಂದೀಶ್, ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್, ಜಿಲ್ಲಾ ಉಪಾಧ್ಯಕ್ಷ ದಿನೇಶ್, ಸಿಆರ್‍ಪಿ ಸುಮ, ಅಧೀಕ್ಷಕ ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.

Translate »