ಇಂದಿನಿಂದ ನಾಗವಳ್ಳಿ ಬಳಿ ಇರುವ ಅಮೃತ ಭೂಮಿಯಲ್ಲಿ ಯುವ ರೈತ ಕಾರ್ಯಾಗಾರ
ಚಾಮರಾಜನಗರ

ಇಂದಿನಿಂದ ನಾಗವಳ್ಳಿ ಬಳಿ ಇರುವ ಅಮೃತ ಭೂಮಿಯಲ್ಲಿ ಯುವ ರೈತ ಕಾರ್ಯಾಗಾರ

September 21, 2018

ಚಾಮರಾಜನಗರ: ಹೊಸ ತಲೆಮಾರಿನ ರೈತ ಚಳವಳಿ ಕಟ್ಟುವ ಉದ್ದೇಶದಿಂದ ಚಾಮರಾಜನಗರ ತಾಲೂಕಿನ ಹೊಂಡರಬಾಳು ಬಳಿ ಇರುವ ಅಮೃತ ಭೂಮಿಯಲ್ಲಿ ಸೆ.21 ರಿಂದ 24 ರವರೆಗೆ ‘ಯುವ ರೈತ ಕಾರ್ಯಾಗಾರ’ ಹಮ್ಮಿ ಕೊಳ್ಳಲಾಗಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಘಟಕದ ರಾಜ್ಯ ಸಂಚಾಲಕಿ ಕೋಲಾರದ ನಳಿನಿ ಈ ವಿಷಯ ತಿಳಿಸಿದರು.

ಗ್ರಾಮೀಣ ಬದುಕನ್ನು ನೆಮ್ಮದಿಯುತ, ಸೃಜನಶೀಲ ಹಾಗೂ ಪುನರ್ ಸಂಘಟಿಸ ಬೇಕಾಗಿದೆ. ಹೋರಾಟವನ್ನೂ, ಬದುಕನ್ನೂ, ಸಾಮೂಹಿಕ ಸಂಘರ್ಷವನ್ನು ರಚನಾತ್ಮಕ ಚಟುವಟಿಕೆಯನ್ನೂ ಬೆಸೆಯುವ ಆಂದೋಲನ ಇದಾಗಿದ್ದು, ಅಂತಹ ಆಂದೋಲನಕ್ಕೆ ಬೇಕಾದ ತಯಾರಿಯ ಮೊದಲ ಹೆಜ್ಜೆಯಾಗಿ ಈ ಮೂರು ದಿನಗಳ ಕಾರ್ಯಾಗಾರ ವನ್ನು ಏರ್ಪಡಿಸಲಾಗಿದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಲಾ 10 ಯುವ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, 18 ರಿಂದ 35 ವರ್ಷದೊಳಗಿನವರಿಗೆ ಮಾತ್ರ ಶಿಬಿರದಲ್ಲಿ ಅವಕಾಶ ನೀಡಲಾಗಿದೆ. ಈಗಾ ಗಲೇ ರೈತ ಸಂಘಟನೆಯಲ್ಲಿ ತೊಡಗಿ ಕೊಂಡಿರುವ ಹಳಬರು, ಹೊಸದಾಗಿ ರೈತ ಘಟಕಗಳಲ್ಲಿ ಸದಸ್ಯರಾಗಿ ಬರುತ್ತಿ ರುವ ಯುವಕ-ಯುವತಿಯರು, ಈ ಶಿಬಿ ರದ ಮೂಲಕ ರೈತ ಚಳವಳಿಗೆ ಪರಿಚಯ ವಾಗುತ್ತಿರುವ ಹೊಸಬರು ಸೇರಿ ಮೂರು ರೀತಿಯ ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗ ವಹಿಸಲಿದ್ದಾರೆ ಎಂದು ನಳಿನಿ ತಿಳಿಸಿದರು.

ಮತ್ತೋರ್ವ ಸಂಚಾಲಕ ಬಾಗಲಕೋಟೆ ಮಹೇಶ್ ದೇಶಪಾಂಡೆ ಮಾತನಾಡಿ, ಕಾರ್ಯಾಗಾರದ ಮೊದಲ ದಿನ (ಸೆ.21) ಬೆಳಿಗ್ಗೆ 10.30ಕ್ಕೆ ಶಿಬಿರ ಉದ್ಘಾಟನೆ ಆಗಲಿದೆ. ನಂತರ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಸ್ಮಾರಕದ ಬಳಿ ಸಂಪೂರ್ಣ ಪರ ಸ್ಪರ ಪರಿಚಯ ಮತ್ತು ಶಿಬಿರದ ಉದ್ದೇಶದ ಕುರಿತು ಚರ್ಚೆ ನಡೆಯಲಿದ್ದು, ತದನಂತರ ಗುಂಪುಗಳನ್ನು ರಚನೆ ಮಾಡ ಲಾಗುವುದು ಎಂದರು.
ತದನಂತರ, ಕರ್ನಾಟಕದ ರೈತ ಚಳವ ಳಿಯ ಇತಿಹಾಸದ ಬಗ್ಗೆ ಕೆ.ಟಿ.ಗಂಗಾಧರ್, ಪ್ರೊ.ಕೆ.ಸಿ.ಬಸವರಾಜ್, ಚುಕ್ಕಿ ನಂಜುಂಡ ಸ್ವಾಮಿ, ಬಡಗಲಪುರ ನಾಗೇಂದ್ರ, ಚಾಮ ರಸಮಾಲಿ ಪಾಟೀಲ್ ವಿಚಾರ ಮಂಡಿಸು ವರು. ಭಾರತದ ಕೃಷಿ ಕ್ಷೇತ್ರದ ಇಂದಿನ ಪರಿಸ್ಥಿತಿ ಬಗ್ಗೆ ಆಹಾರ ತಜ್ಞ ಕೆ.ಸಿ.ರಘು ತಿಳಿಸುವರು ಎಂದರು.

ಸೆ.22ರಂದು ಚಳುವಳಿ ಮತ್ತು ರಚ ನಾತ್ಮಕ ಕೆಲಸಗಳು ಎರಡು ಕಾಲಿನ ನಡಿಗೆ ಕುರಿತು ಮಲ್ಲಿಗೆ ಜನಶಕ್ತಿ, ನೈಸರ್ಗಿಕ ಕೃಷಿ ಮತ್ತು ಹಸಿರುಕ್ರಾಂತಿ ನಮ್ಮ ಆಯ್ಕೆ ಏನಾಗಿರಬೇಕು? ಏಕೆ? ಎಂಬುದರ ಕುರಿತು ಪ್ರೊ.ಯತಿರಾಜು, ಗ್ರಾಮೀಣ ಉದ್ಯೋಗ ಸೃಷ್ಟಿ ಏಕೆ, ಹೇಗೆ ಎಂಬುವರ ಬಗ್ಗೆ ಮುತ್ತುರಾಜ್, ಕೃಷಿಯ ಮಹಿಳಾಕರಣ ಮತ್ತು ಸಂಘಟನೆಯಲ್ಲಿ ಮಹಿಳೆಯರು ವಿಷಯ ಕುರಿತು ಕವಿತಾ ಕುರಗಂಟಿ ಮಾತ ನಾಡುವರು ಎಂದು ಮಹೇಶ್ ತಿಳಿಸಿದರು.

ಸೆ.23ರಂದು ಸಂಘಟನೆ ಏಕೆ? ಹೊಸ ರೀತಿಯ ಸಂಘಟನೆಯ ಸಾಧ್ಯತೆಗಳೇನು? ಎಂಬುದರ ಬಗ್ಗೆ ಡಾ.ವಾಸು ಜನಶಕ್ತಿ ತಿಳಿ ಸುವರು. ನಂತರ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕಾರ್ಯಾಗಾರದ ಪ್ರತಿ ದಿನ ಸಂಜೆ ರೈತ ಗೀತೆಗಾಯನ ತರಬೇತಿ ನಡೆಯಲಿದೆ ಎಂದರು. ಅಮೃತ ಭೂಮಿಯ ಶಂಭುಲಿಂಗೇ ಗೌಡ, ಸಂಚಾಲಕರಾದ ಚಳ್ಳಕೆರೆ ನವಜ್, ಕೋಲಾರದ ಕಾವ್ಯಾಂಜಲಿ ಸುದ್ದಿಗೋಷ್ಟಿ ಯಲ್ಲಿ ಹಾಜರಿದ್ದರು.

Translate »