ಗಾಂಜಾ ಮಾರಾಟಗಾರನ ಬಂಧನ
ಕೊಡಗು

ಗಾಂಜಾ ಮಾರಾಟಗಾರನ ಬಂಧನ

September 21, 2018

ಮಡಿಕೇರಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿದ ಪ್ರಕರಣ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಪ್ರಕಾಶ್ (20) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ 169 ಗ್ರಾಂ. ತೂಕದ ಗಾಂಜಾ ಮತ್ತು ರೂ. 6050 ನಗದು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪಣ್ಣೇಕರ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‍ಪೆಕ್ಟರ್ ಎಂ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ನೇತೃತ್ವದಲ್ಲಿ ಸ್ಥಳೀಯ ನಾಡ ಕಛೇರಿ ಹಿಂದೆ ಪಾಳುಬಿದ್ದ ಕಟ್ಟಡವೊಂದರಲ್ಲಿ ಗಾಂಜಾ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದೆ. ಆರೋಪಿಯನ್ನು ಬಂಧಿಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಹಮೀದ್, ತಮ್ಮಯ್ಯ, ಯೋಗೇಶ್, ಅನಿಲ್, ವೆಂಕಟೇಶ್, ವಸಂತ ಮತ್ತು ಸುಂಟಿಕೊಪ್ಪ ಠಾಣೆಯ ವಿಜಯಕುಮಾರ್, ರೆಹಮಾನ್ ಪಾಲ್ಗೊಂಡಿದ್ದರು.

Translate »