ಬೈಕ್‍ಗಳ ಡಿಕ್ಕಿ; ಓರ್ವನಿಗೆ ಗಾಯ
ಚಾಮರಾಜನಗರ

ಬೈಕ್‍ಗಳ ಡಿಕ್ಕಿ; ಓರ್ವನಿಗೆ ಗಾಯ

September 22, 2018

ಕಾಮಗೆರೆ:  ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಒಬ್ಬನಿಗೆ ಮುಖ ತಲೆಗೆ ತೀವ್ರ ಗಾಯ ವಾಗಿರುವ ಘಟನೆ ಸಮೀಪದ ಹುಲಸು ಗುಡ್ಡೆ ಬಸ್ ನಿಲ್ದಾಣದ ಹತ್ತಿರ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಸುರೇಶ್ ಎಂಬುವರಿಗೆ ತೀವ್ರ ಸ್ವರೂ ಪದ ಗಾಯವಾಗಿದ್ದು, ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆ: ಸುರೇಶ್ ಹಾಗೂ ಸ್ನೇಹಿತರು ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಹೋಗುವಾಗ ಬೆಟ್ಟದ ಮುಖ್ಯ ರಸ್ತೆ ಹುಲಸುಗಡ್ಡೆ ಹತ್ತಿರ ಎದುರು ಬಂದ ಬೈಕ್ ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳ ದಲ್ಲಿ ಬಿದ್ದು ತೀವ್ರ ಗಾಯಗೊಂಡರು. ತಕ್ಷಣ ಕಾಮಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಮಾಹಿತಿ ತಿಳಿದು ಹನೂರು ಪೆÇಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »