ಮೈಸೂರು ಕೊಡಗು ಗೌಡ ಸಮಾಜದಿಂದ ಸೆ.30ರಂದು ಸರಳ ಕೈಲ್ ಮುಹೂರ್ತ
ಕೊಡಗು

ಮೈಸೂರು ಕೊಡಗು ಗೌಡ ಸಮಾಜದಿಂದ ಸೆ.30ರಂದು ಸರಳ ಕೈಲ್ ಮುಹೂರ್ತ

September 22, 2018

ಮೈಸೂರು: ಮೈಸೂರು ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ವಿಜಯ ನಗರ 2ನೇ ಹಂತದಲ್ಲಿರುವ ಕೊಡವ ಸಮಾಜದ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 9.30ಕ್ಕೆ ಕೈಲ್ ಮುಹೂರ್ತ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು.

ಕೊಡಗಿನ ಜನರು ಪ್ರಕೃತಿ ವಿಕೋಪ ದಿಂದ ಸಂತ್ರಸ್ತರಿಗೆ ಶೋಕ ಸಾಗರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾ ಗಿದ್ದು, ಕೇವಲ ಆಯುಧ ಪೂಜೆ ಮತ್ತು 2017-18ನೇ ಸಾಲಿನ ಎಸ್‍ಎಸ್ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೊಡಗು ಗೌಡ ಸಮಾಜದ ಮೈಸೂರಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಪ್ರತಿಭಾ ಪುರಸ್ಕಾರಕ್ಕೆ ಅರ್ಹ ಅಭ್ಯರ್ಥಿ ಗಳು ತಮ್ಮ ವೈಯಕ್ತಿಕ ಮಾಹಿತಿ, ಭಾವ ಚಿತ್ರ, ಅಂಕಪಟ್ಟಿ ನಕಲು ಮತ್ತು ದೂರ ವಾಣಿ ಸಂಖ್ಯೆಯೊಂದಿಗೆ ಸೆ.25ರೊಳಗೆ ಸಮಾಜದ ಕಚೇರಿಗೆ ಅರ್ಜಿ ಸಲ್ಲಿಸಬೇ ಕೆಂದು ಸಮಾಜದ ಗೌರವ ಕಾರ್ಯ ದರ್ಶಿ ಕುಂಟಿಕಾನ ಎಸ್.ಗಣಪತಿ ತಿಳಿಸಿದ್ದಾರೆ.

Translate »