ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ
ಚಾಮರಾಜನಗರ

ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ

September 22, 2018

ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದ ಬಳಿ ಇರುವ ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ ದೊರೆಯಿತು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಆಶ್ರಯದಲ್ಲಿ ಹೊಸ ತಲೆ ಮಾರಿನ ರೈತ ಚಳವಳಿ ಕಟ್ಟುವ ಉದ್ದೇ ಶದಿಂದ ಮೂರು ದಿನಗಳ ಕಾಲ (ಸೆ.21 ರಿಂದ 23) ಯುವ ರೈತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ರೈತ ಚೇತನ ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕನಸಿನ ಕೂಸು ಅಮೃತ ಭೂಮಿಯಲ್ಲಿ ಇರುವ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಮತ್ತು ದಿ.ಪ್ರತಿಮಾ ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಪುಷ್ಟಾರ್ಚನೆ ಮಾಡುವ ಮೂಲಕ ಕಾರ್ಯಾ ಗಾರಕ್ಕೆ ಚಾಲನೆ ನೀಡಿದರು.

ಪರಿಚಯ: ಯುವ ರೈತ ಕಾರ್ಯಾಗಾ ರಕ್ಕೆ ಮೈಸೂರು, ಚಾಮರಾಜನಗರ, ದಾವ ಣಗೆರೆ, ಹಾಸನ, ಮಂಡ್ಯ, ಬೆಂಗಳೂರು, ಹಾವೇರಿ, ಕೋಲಾರ ಜಿಲ್ಲೆಗಳಿಂದ ಯುವ ಕರು ಆಗಮಿಸಿದ್ದರು. ಮೊದಲು ಅವರೆಲ್ಲರೂ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸ್ಮಾರಕದ ಬಳಿ ಸಮಾವೇಶಗೊಂಡರು. ರೈತರಿಗೆ ಜಯವಾಗಲಿ, ರೈತ ಹೋರಾ ಟಕ್ಕೆ ಜಯವಾಗಲಿ, ಯುವ ರೈತರಿಗೆ ಜಯ ವಾಗಲಿ, ರೈತ ಸಂಘಕ್ಕೆ ಜಯವಾಗಲಿ, ಹಸಿರು ಸೇನೆಗೆ ಜಯವಾಗಲಿ, ರೈತ ಮಹಿ ಳೆಗೆ ಜಯವಾಗಲಿ, ಪ್ರೊ.ಎಂ.ಡಿ.ಎಸ್. ಅವರಿಗೆ ಜಯವಾಗಲಿ ಎಂದು ಘೋಷ ಣೆಗಳನ್ನು ಕೂಗಿದರು. ತದನಂತರ ಪರ ಸ್ಪರ ಪರಿಚಯ ಮಾಡಿಕೊಂಡರು. ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸಿದ್ದ ಯುವಕರು ತಾವು ಬಂದಿ ರುವ ಉದ್ದೇಶದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ನಂತರ ನೋಂದಣಿ ಕಾರ್ಯ ನಡೆಯಿತು.

ಆತ್ಮಾವಲೋಕನ ಮಾಡಿಕೊಳ್ಳಿ: ಕಾರ್ಯಾ ಗಾರದಲ್ಲಿ ಆಶಯ ನುಡಿಗಳನ್ನು ಆಡಿದ ಅಮೃತಭೂಮಿ ಟ್ರಸ್ಟಿ, ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರು ಪುತ್ರಿ ಚುಕ್ಕಿ ನಂಜುಂಡ ಸ್ವಾಮಿ, 40 ವರ್ಷಗಳಿಂದ ರೈತ ಚಳವಳಿ ಇದೆ. ಈ ಚಳವಳಿಯ ಉದ್ದೇಶ ಏನು? ಎಲ್ಲಾ ಜಿಲ್ಲೆಗಳಲ್ಲೂ ರೈತ ಮುಖಂಡರು ಅಧಿಕಾರಕೋಸ್ಕರ ಕಚ್ಚಾಟ ನಡೆಸುತ್ತಿದ್ದು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗು ತ್ತಿಲ್ಲ. ಯಾವ ಉದ್ದೇಶದಿಂದ ಸಂಘಟನೆ ಆಗಬೇಕು? ಯುವ ರೈತರು ಏನನ್ನು ಮಾಡಬೇಕು? ಕೃಷಿಗೆ ಬಂದಿರುವ ಸಂಕ ಷ್ಟಕ್ಕೆ ಪರಿಹಾರ ಏನು? ಎಂಬಿತ್ಯಾದಿ ವಿಷಯ ಗಳ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳುವ ಅಗತ್ಯ ಇದೆ. ಈ ಉದ್ದೇಶ ದಿಂದಲೇ ಮೂರು ದಿನಗಳ ಕಾಲ ಯುವ ರೈತ ಕಾರ್ಯಾಗಾರ ಹಮ್ಮಿಕೊಳ್ಳಲಾ ಗಿದೆ ಎಂದರು.

ಸರ್ಕಾರದ ನೀತಿಗಳು ಬದಲಾಗಿಲ್ಲ: ಕರ್ನಾಟಕದ ರೈತ ಚಳವಳಿಯ ಇತಿ ಹಾಸದ ಬಗ್ಗೆ ಮಾತನಾಡಿದ ರೈತ ಚಳ ವಳಿಗಾರ ಪ್ರೊ.ಕೆ.ಸಿ.ಬಸವರಾಜ್, ರೈತ ಕ್ರಾಂತಿಗೆ ಮುನ್ನುಡಿ ಬರೆದಿದ್ದು ನರಗುಂದ ಚಳವಳಿ ಎಂದರು.

ರೈತರ ವಿಷಯದಲ್ಲಿ ಯಾವುದೇ ಸರ್ಕಾ ರದ ನೀತಿಗಳು ಇಂದಿಗೂ ಬದಲಾಗಿಲ್ಲ. ಬೆಲೆ ಕುಸಿದಾಗ ಬೆಂಬಲ ಬೆಲೆ ಘೋಷಣೆ ಮಾತ್ರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಾತಿಯ ಕೂಪ ಗಳನ್ನು ಅಲುಗಾಡಿಸಿದ ಶ್ರೇಯ ರೈತ ಚಳವಳಿಗೆ ಸಲ್ಲುತ್ತದೆ ಎಂದರು.

ಸ್ವಾಭಿಮಾನದ ಬದುಕು: ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲ ಪುರ ನಾಗೇಂದ್ರ ಮಾತನಾಡಿ, 1995 ರಿಂದ 2010ರವರೆಗೆ ರೈತ ಚಳವಳಿಯಲ್ಲಿ ತುಂಬಾ ಬೆಳವಣಿಗೆಗಳು ನಡೆದವು. ಹೊಸ ಆರ್ಥಿಕ ನೀತಿಗೆ ಚಾಲನೆ ದೊರೆ ತಿದ್ದು, ರೈತರ ಆತ್ಮಹತ್ಯೆ ಆರಂಭವಾದದ್ದೂ, ರೈತ ಚಳವಳಿಯಲ್ಲಿ ಬಿರುಕು ಕಾಣಿಸಿ ಕೊಂಡಿದ್ದು ಇದೇ ವರ್ಷದಲ್ಲಿ ಎಂದರು.

ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳು ವುದನ್ನು ತೋರಿಸುವುದು ರೈತ ಚಳವಳಿ. ತಮ್ಮ ಹಕ್ಕು ಮೊಟಕುಗೊಂಡಾಗ ಅದನ್ನು ಪ್ರಶ್ನಿಸುವ ಧೈರ್ಯ ಹುಟ್ಟುವುದು ರೈತ ಚಳವಳಿಯಿಂದ ಎಂಬುದನ್ನು ಯಾರೊ ಬ್ಬರು ಮರೆಯಬಾರದು ಎಂದರು. ಮುಖಂಡ ರಾದ ಚಾಮರಸ ಮಾಲಿ ಪಾಟೀಲ್, ಕೆ.ಟಿ. ಗಂಗಾಧರ್, ರಾಮೇ ಗೌಡ, ಯತೀಶ್, ಎ.ಎಂ.ಮಹೇಶ್ ಪ್ರಭು, ಶಂಭುಲಿಂಗೇ ಗೌಡ, ಕೋಲಾರ ನಳಿನಿ, ಬಾಗಲಕೋಟೆ ಮಹೇಶ್, ದೇಶ ಪಾಂಡೆ, ನವಜ್, ಎ.ಟಿ. ರಾಮಸ್ವಾಮಿ ಇತರರು ಉಪಸ್ಥಿತರಿದ್ದರು.

Translate »