ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಉಪ್ಪಾರ ಸಮಾಜಕ್ಕೆ ಸಲಹೆ
ಚಾಮರಾಜನಗರ

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಉಪ್ಪಾರ ಸಮಾಜಕ್ಕೆ ಸಲಹೆ

September 22, 2018

ಚಾಮರಾಜನಗರ: ಉಪ್ಪಾರ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕ ವಾಗಿ ಹಿಂದುಳಿದಿದ್ದು, ಹೆಚ್ಚಿನ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕು. ಇಂದು ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಸಮಾಜದ ವತಿ ಯಿಂದ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಚಿವ ಸಿ.ಪುಟ್ಟ ರಂಗಶೆಟ್ಟಿ ಶ್ಲಾಘಿಸಿದರು.

ಅವರು ಜಿಲ್ಲಾ ಉಪ್ಪಾರ ಸಂಘದ ವತಿ ಯಿಂದ ನಗರದ ಜೆಎಚ್.ಪಟೇಲ್ ಸಭಾಂ ಗಣದಲ್ಲಿ 2017-18ನೇ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಪ್ರತಿಭೆ ಅಥವಾ ಶಿಕ್ಷಣ ಯಾರೊಬ್ಬರು ಕದಿಯಲಾರದ ಆಸ್ತಿಯಾಗಿದೆ. ಪ್ರತಿಯೊ ಬ್ಬರು ಶಿಕ್ಷಣದ ಮೂಲಕ ಉನ್ನತ ಹುದ್ದೆ ಗಳನ್ನು ಪಡೆದು ತಾವು ಪಡೆದ ಶಿಕ್ಷಣ ವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಾವು ಓದಿದ ಶಾಲೆಗೆ, ಗ್ರಾಮಕ್ಕೆ ಒಟ್ಟಾರೆ ದೇಶಕ್ಕೆ ಕೀರ್ತಿ ತರು ವಂತಹ ಉತ್ತಮ ಪ್ರಜೆಗಳಾಗಿ ರೂಪು ಗೊಳ್ಳಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗೆ ವಿನಯವೇ ಭೂಷಣವಾ ಗಿದ್ದು, ಸಮಯ ಪ್ರಜ್ಞೆಯಿಂದ ನಿರ್ದಿಷ್ಟ ಗುರಿ ಹೊಂದುವ ಮೂಲಕ ವಿದ್ಯಾ ಭ್ಯಾಸವನ್ನು ಒಂದು ತಪಸ್ಸಿನಂತೆ ಏಕಾ ಗ್ರತೆಯಿಂದ ಪೂರೈಸಬೇಕು. ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಬದ್ಧತೆ ಯಿಂದ ಶಿಕ್ಷಣ ಪಡೆದು ಉತ್ತಮ ನಾಗ ರಿಕರಾಗಿ ರೂಪುಗೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಇಂದಿನ ಯುಗವು ಸ್ಪರ್ಧಾತ್ಮಕ ಯುಗ ವಾಗಿದ್ದು, ವಿದ್ಯಾರ್ಥಿಗಳು ಹೆಚ್ಚೆಚ್ಚು ಅಧ್ಯ ಯನ ಮಾಡಿದರೆ ಕೆಎಎಸ್, ಐಎಸ್‍ಎಸ್, ಐಪಿಎಸ್ ಸೇರಿದಂತೆ ಇನ್ನಾ ವುದೇ ಹುದ್ದೆ ಪಡೆಯಲು ಈಗಿನಿಂದಲೇ ಶ್ರಮಪಟ್ಟು ಓದಬೇಕು. ಇದಕ್ಕಾಗಿ ಸರ್ಕಾರವು ಸಹ ಉನ್ನತ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲ ಗಳನ್ನು ನೀಡುತ್ತಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇವುಗಳನ್ನು ವಿದ್ಯಾರ್ಥಿ ಗಳು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಲ ಶಿವಕುಮಾರ್ ಉಪ್ಪಾರ ಸಮಾಜ ದಿಂದ ಇಂದು ಪ್ರತಿಭಾನ್ವಿತ ವಿದ್ಯಾರ್ಥಿಗ ಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಮಾದ ರಿಯಾದ ಕಾರ್ಯಕ್ರಮವಾಗಿದೆ. ಶಿಕ್ಷಣ ದಿಂದ ಮಾತ್ರ ನಾವು ಎಲ್ಲವನ್ನೂ ಬದಲಿ ಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ಪೋಷ ಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿ ಸುವ ಮೂಲಕ ನಾಗರಿಕ ಸಮಾಜ ನಿರ್ಮಿ ಸಲು ಶ್ರಮಿಸ ಬೇಕು. ಯಾರೊಬ್ಬರೂ ಶಾಲೆ ಯಿಂದ ಹೊರಗುಳಿಯದಂತೆ ನೋಡಿ ಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, ಶಾಲೆಗೆ ಕಳುಹಿಸುವಂತಹ ಜವಾಬ್ದಾರಿ ಪೋಷಕರ ಮೇಲೆಯೂ ಇದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಯೋಗೇಶ್ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಚಿಕ್ಕ ಮಹದೇವ್, ಕಾಮರಾಜು ರೇವಣ್ಣ ಗಡಿ.ಯ.ಕೃಷ್ಣಶೆಟ್ಟಿ, ಜಯಸ್ವಾಮಿ, ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಪಿ.ಲಿಂಗರಾಜು, ಜಿಪಂ ಮಾಜಿ ಸದಸ್ಯ ಕಾವೇರಿ ಶಿವಕುಮಾರ್, ಸಿದ್ದರಾಜು, ತಾಪಂ ಸದಸ್ಯರಾದ ಮಹದೇವಶೆಟ್ಟಿ, ಪುಟ್ಟ ಸ್ವಾಮಿ, ಮರಿಸ್ವಾಮಿ, ಪುಪ್ಪಲತಾ, ಸವಿತಾ, ನಗರಸಭಾ ಸದಸ್ಯರಾದ ಬಸ ವಣ್ಣ ಧರಣೀಶ್, ಭಾಗ್ಯಮ್ಮ, ಲೋಕೇ ಶ್ವರಿ, ಶಾಂತಿ, ಕೃಷ್ಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಪಿ.ಮಹಾ ಲಿಂಗಸ್ವಾಮಿ, ಉಪ ನ್ಯಾಸಕ ಗೋವಿಂದ ರಾಜು, ಸೋಮಣ್ಣ ಮಹದೇವಶೆಟ್ಟಿ, ಯ.ಕ್ಯಾತಶೆಟ್ಟಿ, ಚ.ಹಾ.ಶಿವ ರಾಜು, ಎಸ್‍ಐ ದೀಪಕ್, ಚಿಕ್ಕರಾಜ, ಹನು ರಾಜ್, ರಂಗಸ್ವಾಮಿ, ಮಹ ದೇವಸ್ವಾಮಿ, ಮಾಜಿ ನಗರಸಭಾ ಸದಸ್ಯ ಮಹೇಶ್ ಉಪ್ಪಾರ್ ಗಡಿಮನೆ, ಕಟ್ಟಮನೆ ಯಜಮಾ ನರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

Translate »